ಸೌರವ್ ಗಂಗೂಲಿ ಬಿಜೆಪಿ ಸೇರುತ್ತಾರೆಂಬ ವದಂತಿಗೆ ಜೀವ
Team Udayavani, Aug 25, 2020, 6:05 AM IST
ಕೋಲ್ಕತ: ಮುಂದಿನ ವರ್ಷ ಬಂಗಾಲ ವಿಧಾನಸಭೆ ಚುನಾವಣೆಯಿದೆ. ಈ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷದ ನೇತೃತ್ವವನ್ನು ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಹಿಸುತ್ತಾರೆಂಬ ವರದಿಗಳು ಈಗಾಗಲೇ ಓಡಾಡುತ್ತಿವೆ. ಈ ಚರ್ಚೆ ಜೋರಾಗಿರುವಾಗಲೇ ಸೌರವ್ ಗಂಗೂಲಿ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರ ತನಗೆ ನೀಡಿದ್ದ 2 ಎಕರೆ ಜಾಗವನ್ನು ಹಿಂತಿರುಗಿಸಿದ್ದಾರೆ. ಶನಿವಾರ ನಡೆದಿರುವ ಈ ಬೆಳವಣಿಗೆಯಿಂದ, ಈಗಾಗಲೇ ಹಬ್ಬಿರುವ ವರದಿಗಳು ಹೌದು ಎನ್ನಲು ಸಾಕ್ಷ್ಯ ನೀಡಿದಂತಾಗಿದೆ.
ಗಂಗೂಲಿ ಎಜುಕೇಶನಲ್ ಆ್ಯಂಡ್ ವೆಲ್‌ಫೇರ್ ಸೊಸೈಟಿಗೆ ಬಂಗಾಲದ ಗೃಹಮಂಡಳಿ 2 ಎಕರೆ ಜಾಗ ವನ್ನು ಕೋಲ್ಕತದ ಪೂರ್ವಭಾಗದಲ್ಲಿ ನೀಡಿತ್ತು. ಐಸಿ ಎಸ್‌ಇ ಆಧಾರಿತ 12ನೇ ತರಗತಿವರೆಗಿನ ಶಾಲೆಯನ್ನು ಇಲ್ಲಿ ತೆರೆಯಲು ಗಂಗೂಲಿ ಹೊರಟಿದ್ದರು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸರಕಾರಕ್ಕೆ ಪತ್ರ ಬರೆದಿ ರುವ ಗಂಗೂಲಿ ಎಜುಕೇಶನಲ್ ಆ್ಯಂಡ್ ವೆಲ್‌ಫೇರ್ ಸೊಸೈಟಿ, ಜಮೀನನ್ನು ಹಿಂಪಡೆಯಲು ಮನವಿ ಮಾಡಿದೆ. ಅದನ್ನು ಅಲ್ಲಿನ ಸರಕಾರ ಅಂಗೀಕರಿಸಿದೆ. ಕಾನೂನು ತೊಂದರೆ ಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.