ಲಂಕೆಗೆ ಕಾದಿದೆ ಆಫ್ರಿಕಾ ಟೆಸ್ಟ್‌

Team Udayavani, Jun 3, 2017, 4:28 PM IST

africa-test.jpg

ಲಂಡನ್‌: ಈ ಪಂದ್ಯಾವಳಿಯ “ದುರ್ಬಲ ತಂಡ’ವೆಂದೇ ಲೇಬಲ್‌ ಅಂಟಿಸಿಕೊಂಡಿರುವ ಶ್ರೀಲಂಕಾ ಶನಿವಾರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಎಬಿಡಿ ಸಾರಥ್ಯದ ಪ್ರಬಲ ದಕ್ಷಿಣ ಆಫ್ರಿಕಾ ಲಂಕೆಯ ಎದುರಾಳಿ. ಇದು “ಬಿ’ ವಿಭಾಗದ ಮೊದಲ ಪಂದ್ಯವೂ ಹೌದು.

ವಿಶ್ವದ ನಂಬರ್‌ ವನ್‌ ತಂಡವಾಗಿರುವ ದಕ್ಷಿಣ ಆಫ್ರಿಕಾ ಈ ಛಾತಿಗೆ ತಕ್ಕ ಪ್ರದರ್ಶನ ನೀಡುವ ಹುರುಪಿನಲ್ಲಿದೆ. ನಂಬರ್‌ ವನ್‌ ಏಕದಿನ ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ಗಳನ್ನು ಹೊಂದಿರುವ ತಂಡವೂ ಇದಾಗಿದೆ. ಈ ಹೆಗ್ಗಳಿಕೆಗೆ ಪಾತ್ರರಾಗುವವರು ಎಬಿ ಡಿ ವಿಲಿಯರ್ ಮತ್ತು ಕಾಗಿಸೊ ರಬಾಡ. ಐಸಿಸಿ ಟಾಪ್‌-10 ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಆಫ್ರಿಕಾದ ಒಟ್ಟು 6 ಮಂದಿ ಕ್ರಿಕೆಟಿಟಿಗರಿದ್ದಾರೆಂಬುದೇ ಪ್ರತಿಷ್ಠೆಯ ಸಂಗತಿ. ಆದರೆ 7ನೇ ರ್‍ಯಾಂಕಿಂಗ್‌ ತಂಡ ವಾಗಿರುವ ಲಂಕೆಯ ಒಬ್ಬ ಆಟಗಾರ ಕೂಡ ಈ ಪಟ್ಟಿಯಲ್ಲಿಲ್ಲ ಎಂಬುದು ಇತ್ತಂಡಗಳ ನಡುವಿನ ದೊಡ್ಡ ವ್ಯತ್ಯಾಸವನ್ನು ಸಾರುತ್ತದೆ.

ಇನ್ನೊಂದೆಡೆ ಶ್ರೀಲಂಕಾ, ನಾಯಕ ಏಂಜೆಲೊ ಮ್ಯಾಥ್ಯೂಸ್‌ ಅವರ ಗಾಯದ ಚಿಂತೆಯಲ್ಲಿದೆ. ಮ್ಯಾಥ್ಯೂಸ್‌ ಸೇವೆ ಈ ಪಂದ್ಯಕ್ಕೆ ಲಭ್ಯವಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಕಸ್ಮಾತ್‌ ಅವರು ಆಡದೇ ಹೋದರೆ ಉಪ ನಾಯಕ ಉಪುಲ್‌ ತರಂಗ ತಂಡವನ್ನು ಮುನ್ನಡೆಸಲಿದ್ದಾರೆ.

ಇಲ್ಲಿ  “ಚೋಕರ್’ ಅಲ್ಲ !
ಬಲಾಬಲದ ಲೆಕ್ಕಾಚಾರದಲ್ಲಿ ಲಂಕೆಗಿಂತ ಎಬಿಡಿ ಪಡೆಯೇ ಬಹಳ ಮೇಲಿದೆ. ಅಷ್ಟೇ ಅಲ್ಲ, ಕಳೆದ ಜನವರಿಯಲ್ಲಿ ತನ್ನಲ್ಲಿಗೆ ಬಂದ ಶ್ರೀಲಂಕಾಕ್ಕೆ ಏಕದಿನ ಸರಣಿಯಲ್ಲಿ 5-0 ವೈಟ್‌ವಾಶ್‌ ಮಾಡಿದ ಹೆಗ್ಗಳಿಕೆ ಕೂಡ ದಕ್ಷಿಣ ಆಫ್ರಿಕಾದ್ದಾಗಿದೆ. ಹರಿಣಗಳ ಪಡೆ ಪ್ರವಾಸಿ ಆಸ್ಟ್ರೇಲಿಯ ವಿರುದ್ಧವೂ 5-0 ಕ್ಲೀನ್‌ಸಿÌàಪ್‌ ಸಾಧಿಸಿತ್ತೆಂಬುದನ್ನು ಮರೆಯುವಂತಿಲ್ಲ. ಆದರೆ “ಚಾಂಪಿಯನ್ಸ್‌ ಟ್ರೋಫಿ’ಗೂ ಕೆಲವೇ ದಿನಗಳ ಹಿಂದೆ ನಡೆದ ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯನ್ನು ಎಬಿಡಿ ಪಡೆ 1-2 ಅಂತರದಿಂದ ಕಳೆದುಕೊಂಡಿತ್ತು. ದ್ವಿತೀಯ ಪಂದ್ಯದಲ್ಲಂತೂ ಮಿಲ್ಲರ್‌-ಮಾರಿಸ್‌ ಕ್ರೀಸಿನಲ್ಲಿದ್ದೂ ಅಂತಿಮ ಓವರಿನಲ್ಲಿ 7 ರನ್‌ ಗಳಿಸಲಾಗದೆ ಸೋತುಹೋಗಿತ್ತು. ನಿರ್ಣಾ ಯಕ ಘಟ್ಟದಲ್ಲಿ ಇಂಥ ಅನಿರೀಕ್ಷಿತ ಎಡವಟ್ಟು ಗಳನ್ನು ಮಾಡುವುದು ದಕ್ಷಿಣ ಆಫ್ರಿಕಾದ ಜಾಯಮಾನ. ಹೀಗಾಗಿ ಅದು “ಚೋಕರ್’ ಎಂಬ ಹಣೆಪಟ್ಟಿಯಿಂದ ಮುಕ್ತವಾಗಿಲ್ಲ. 

ಆದರೆ ಚಾಂಪಿಯನ್ಸ್‌ ಟ್ರೋಫಿ ಕೂಟ ದಲ್ಲಿ ದಕ್ಷಿಣ ಆಫ್ರಿಕಾ ಈ ಅಪವಾದ ಹೊತ್ತಿಲ್ಲ ಎಂಬುದು ಉಲ್ಲೇಖನೀಯ. 1988ರ ಮೊದಲ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ್ದೇ ದಕ್ಷಿಣ ಆಫ್ರಿಕಾ ಎಂಬುದನ್ನು ಮರೆಯುವಂತಿಲ್ಲ. ಆಗ ಇದು “ಐಸಿಸಿ ನಾಕೌಟ್‌ ಟೂರ್ನಮೆಂಟ್‌’ ಆಗಿತ್ತು. ವಿಜೇತ ತಂಡದ ನಾಯಕರಾಗಿದ್ದವರು ಹ್ಯಾನ್ಸಿ ಕ್ರೋನಿಯೆ. ಇದು ದಕ್ಷಿಣ ಆಫ್ರಿಕಾ ಜಯಿಸಿದ ಏಕೈಕ ಐಸಿಸಿ ಟ್ರೋಫಿ ಆಗಿದೆ. 

ದಕ್ಷಿಣ ಆಫ್ರಿಕಾ ಸಾಕಷ್ಟು ಮಂದಿ “ವನ್‌ಡೇ ಸ್ಪೆಷಲಿಸ್ಟ್‌’ ಆಟಗಾರರನ್ನು ಹೊಂದಿರುವ ತಂಡ. ಬ್ಯಾಟಿಂಗ್‌ ವಿಭಾಗದಲ್ಲಿ ಆಮ್ಲ, ಡಿ ಕಾಕ್‌, ಡಿ ವಿಲಿಯರ್, ಮಿಲ್ಲರ್‌, ಡು ಪ್ಲೆಸಿಸ್‌, ಡ್ಯುಮಿನಿ; ಆಲ್‌ರೌಂಡರ್‌ಗಳಾದ ಮಾರಿಸ್‌, ಬೆಹದೀìನ್‌ ಅವರನ್ನು ಒಳಗೊಂಡಿದೆ. ಇವರು ನೈಜ ಆಟವಾಡಿದರೆ ಎದುರಾಳಿಗೆ ಕಂಟಕ ತಪ್ಪಿದ್ದಲ್ಲ.

ಹರಿಣಗಳ ಬೌಲಿಂಗ್‌ ಕೂಡ ವೈವಿಧ್ಯಮಯ. ರಬಾಡ, ಪಾರ್ನೆಲ್‌, ಫೆಲುಕ್ವಾಯೊ, ಮಾರ್ಕೆಲ್‌ ವೇಗದ ವಿಭಾಗ ನೋಡಿಕೊಂಡರೆ, ಸ್ಪಿನ್ನಿಗೆ ತಾಹಿರ್‌ ಮತ್ತು ಮಹಾರಾಜ್‌ ಇದ್ದಾರೆ. 

ಸಂಕಟದಲ್ಲಿದೆ ಶ್ರೀಲಂಕಾ 
ದೊಡ್ಡ ದೊಡ್ಡ ಸ್ಟಾರ್‌ ಆಟಗಾರರೆಲ್ಲ ನೇಪಥ್ಯಕ್ಕೆ ಸರಿದ ಬಳಿಕ ಇನ್ನೂ ಸಮರ್ಥ ತಂಡವೊಂದನ್ನು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿ ರುವ ತಂಡ ಶ್ರೀಲಂಕಾ. ಚಾಂಪಿಯನ್ಸ್‌ ಟ್ರೋಫಿ ಕೂಟಕ್ಕೆ ಬಂದಿಳಿದಿರುವ ತಂಡ ಕೂಡ ಇದಕ್ಕೆ ಹೊರತಲ್ಲ. ಬ್ಯಾಟಿಂಗ್‌ ಮೇಲೆ ಒಂದಿಷ್ಟು ವಿಶ್ವಾಸ ಇರಿಸಬಹುದಾದರೂ ಬೌಲಿಂಗ್‌ ಘಾತಕವಲ್ಲ. ಅಭ್ಯಾಸ ಪಂದ್ಯದಲ್ಲಿ ಲಂಕಾ ಪೇರಿಸಿದ 350 ಪ್ಲಸ್‌ ಮೊತ್ತವನ್ನು ಕಿವೀಸ್‌ ನಿರಾಯಾಸವಾಗಿ ಬೆನ್ನಟ್ಟಿತ್ತು. 

ಪ್ರಧಾನ ವೇಗಿ ಲಸಿತ ಮಾಲಿಂಗ 2015ರ ನವಂಬರ್‌ ಬಳಿಕ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅವರ ಫಾರ್ಮ್ ಕೂಡ ಭರವಸೆದಾಯಕವಾಗಿಲ್ಲ. ಇದಕ್ಕೆ ಕಳೆದ ಐಪಿಎಲ್‌ ಪಂದ್ಯಾವಳಿಯೇ ಸಾಕ್ಷಿ. ಹಳಬ ನುವಾನ್‌ ಕುಲಶೇಖರ ಅಗತ್ಯವೇನಿತ್ತೋ ತಿಳಿಯದು. ಸ್ಪಿನ್ನರ್‌ ಲಕ್ಷಣ ಸಂದಕನ್‌ ಎಸೆತಗಳಲ್ಲಿ ವೈವಿಧ್ಯವಿದೆಯಾದರೂ ಇಂಗ್ಲೆಂಡ್‌ ಪಿಚ್‌ಗಳು ಸ್ಪಿನ್ನಿಗೆ ನೆರವು ನೀಡು ವುದು ಅಷ್ಟರಲ್ಲೆ ಇದೆ.

ಇವರೆಲ್ಲರಿಗೆ ಈಗಾಗಲೇ ನಿವೃತ್ತಿ ಯಾಗಿರುವ ಕುಮಾರ ಸಂಗಕ್ಕರ ಸ್ಫೂರ್ತಿ ಯಾಗಬೇಕಾದ ಅಗತ್ಯವಿದೆ. ಇಂಗ್ಲೆಂಡಿನಲ್ಲೇ ಸರ್ರೆ ಕೌಂಟಿ ಪರ ಆಡುತ್ತಿರುವ ಸಂಗಕ್ಕರ ಸತತ 5 ಶತಕ ಬಾರಿಸಿ ಮೆರೆದಿದ್ದಾರೆ!

ಟಾಪ್ ನ್ಯೂಸ್

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

1-aaa-gggg–rp

Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್‌, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್‌

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.