ದಕ್ಷಿಣ ಆಫ್ರಿಕಾ 5-0 ಕ್ಲೀನ್‌ಸ್ವೀಪ್ ಸಾಹಸ
Team Udayavani, Mar 18, 2019, 12:30 AM IST
ಕೇಪ್‌ಟೌನ್: ಐದನೇ ಪಂದ್ಯದಲ್ಲೂ ಶ್ರೀಲಂಕಾವನ್ನು ಮಣಿಸಿದ ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಶನಿವಾರ ರಾತ್ರಿ ನಡೆದ ಈ ಮುಖಾಮುಖೀಯನ್ನು ಆಫ್ರಿಕಾ ಪಡೆ ಡಿ-ಎಲ್ ನಿಯಮ ದಂತೆ 41 ರನ್ನುಗಳಿಂದ ಗೆದ್ದು ಬಂದಿತು. ದಕ್ಷಿಣ ಆಫ್ರಿಕಾ ಚೇಸಿಂಗ್ ವೇಳೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನ ಫ್ಲಡ್‌ಲೈಟ್ ಕೈಕೊಟ್ಟಿ ದ್ದರಿಂದ ಪಂದ್ಯವನ್ನು ಈ ಹಂತದಲ್ಲೇ ಕೊನೆಗೊಳಿಸಬೇಕಾಯಿತು. ಆಗ ಶ್ರೀಲಂಕಾದ 225ಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 28 ಓವರ್‌ಗಳಲ್ಲಿ 2 ವಿಕೆಟಿಗೆ 135 ರನ್ ಮಾಡಿತ್ತು. ಡಕ್‌ವರ್ತ್-ಲೂಯಿಸ್ ನಿಯಮದಂತೆ 41 ರನ್ನುಗಳ ಮುನ್ನಡೆಯ ಲ್ಲಿತ್ತು. ಆರಂಭಕಾರ ಐಡನ್ ಮಾರ್ಕ್‌ರಮ್ 67 ರನ್ ಮಾಡಿ ಅಜೇಯರಾಗಿದ್ದರು.
ಲಂಕೆಗೆ 4ನೇ 5-0 ಸೋಲು
ವಿಶ್ವಕಪ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಈ ಗೆಲುವು ಹೊಸ ಹುಮ್ಮಸ್ಸು ಮೂಡಿಸಿದರೆ, ಶ್ರೀಲಂಕಾ ತೀವ್ರ ಹಿನ್ನಡೆ ಅನುಭವಿಸಿದೆ. 2015ರ ವಿಶ್ವಕಪ್ ಬಳಿಕ ಶ್ರೀಲಂಕಾ ದ್ವಿಪಕ್ಷೀಯ ಸರಣಿಯಲ್ಲಿ 5-0 ಅಂತರದಿಂದ ಸೋತ 4ನೇ ನಿದರ್ಶನ ಇದಾಗಿದೆ.
ಆರಂಭಿಕ ಆಘಾತ
14 ರನ್ ಆಗುವಷ್ಟರಲ್ಲಿ ಆರಂಭಿ ಕರಿಬ್ಬರನ್ನೂ ಕಳೆದುಕೊಂಡ ಲಂಕೆಗೆ ಈ ಆಘಾತದಿಂದ ಚೇತರಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಮಧ್ಯಮ ಸರದಿಯ ಆಟಗಾರರು ಹೋರಾಟ ನಡೆಸಿದರೂ ರನ್ ಗತಿ ಏರಿಸಲು ವಿಫಲರಾದರು. ಕುಸಲ್ ಮೆಂಡಿಸ್ ಅವರಿಂದ ಏಕೈಕ ಅರ್ಧ ಶತಕ ದಾಖಲಾಯಿತು (84 ಎಸೆತಗಳಿಂದ 56 ರನ್). ಕೊನೆಯಲ್ಲಿ ಇಸುರು ಉದಾನ ಮುನ್ನುಗ್ಗಿ ಬಾರಿಸಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು (29 ಎಸೆತ, 32 ರನ್).
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-49.3 ಓವರ್‌ಗಳಲ್ಲಿ 225 (ಕುಸಲ್ ಮೆಂಡಿಸ್ 56, ಪ್ರಿಯಾಮಲ್ 33, ಉದಾನ 32, ಆ್ಯಂಜೆಲೊ ಪೆರೆರ 31, ರಬಾಡ 50ಕ್ಕೆ 3, ತಾಹಿರ್ 33ಕ್ಕೆ 2, ನೋರ್ಜೆ 35ಕ್ಕೆ 2). ದಕ್ಷಿಣ ಆಫ್ರಿಕಾ-28 ಓವರ್‌ಗಳಲ್ಲಿ 2 ವಿಕೆಟಿಗೆ 135 (ಮಾರ್ಕ್‌ರಮ್ ಔಟಾಗದೆ 67, ಡುಸೆನ್ 28).
ಪಂದ್ಯಶ್ರೇಷ್ಠ: ಐಡನ್ ಮಾರ್ಕ್‌ರಮ್. ಸರಣಿಶ್ರೇಷ್ಠ: ಕ್ವಿಂಟನ್ ಡಿ ಕಾಕ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.