T20 World Cup: ರೋಚಕ ಪಂದ್ಯದಲ್ಲಿ ಸೋತ ವೆಸ್ಟ್ ಇಂಡೀಸ್ ಮನೆಗೆ; ದ.ಆಫ್ರಿಕಾ ಸೆಮಿಗೆ
Team Udayavani, Jun 24, 2024, 10:41 AM IST
ಆ್ಯಂಟಿಗುವಾ: ಐಸಿಸಿ ಟಿ20 ವಿಶ್ವಕಪ್ 2024ರ ಕ್ವಾರ್ಟರ್ ಫೈನಲ್ ಎಂದೇ ಬಿಂಬಿತವಾಗಿದ್ದ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸಿದೆ. ಇದರೊಂದಿಗೆ ಹರಿಣಗಳು ಸೆಮಿ ಫೈನಲ್ ಗೆ ಟಿಕೆಟ್ ಪಡೆದಿದೆ.
ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 135 ರನ್ ಕಲೆ ಹಾಕಿತು. ಎರಡನೇ ಇನ್ನಿಂಗ್ಸ್ ಮಳೆಯಿಂದ ಅಡಚಣೆಯಾದ ಕಾರಣ 17 ಓವರ್ ಗೆ ಇಳಿಸಲ್ಪಟ್ಟಿತು. 123 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ 16.1 ಓವರ್ ಗಳಲ್ಲಿ ಜಯ ಸಾಧಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು. ಮೊದಲ ಬಾರಿ ಅವಕಾಶ ಪಡೆದ ಕೈಲ್ ಮೇಯರ್ಸ್ 35 ರನ್ ಮಾಡಿದರು. ರೋಸ್ಟನ್ ಚೇಸ್ 42 ಎಸೆತಗಳಲ್ಲಿ 52 ರನ್ ಮಾಡಿ ತಂಡಕ್ಕೆ ನೆರವಾದರು. ಕಳೆದ ಪಂದ್ಯದ ಹೀರೋ ಶಾಯ್ ಹೋಪ್ ಗೋಲ್ಡನ್ ಡಕ್ ಗೆ ಬಲಿಯಾದರು. ಪೂರನ್, ನಾಯಕ ಪೊವೆಲ್, ರುದರ್ ಫೋರ್ಡ್ ಕಳಪೆಯಾಟ ತಂಡಕ್ಕೆ ಹಿನ್ನಡೆಯಾಯಿತು.
ದ. ಆಫ್ರಿಕಾ ಪರ ತಬ್ರೈಜ್ ಶಮ್ಸಿ ಮೂರು ವಿಕೆಟ್ ಪಡೆದರೆ, ಮಾಕ್ರೊ ಎನ್ಸನ್, ಮಾರ್ಕ್ರಮ್, ಮಹಾರಾಜ್ ಮತ್ತು ರಬಾಡಾ ತಲಾ ಒಂದು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ದ.ಆಫ್ರಿಕಾ 2 ಓವರ್ ಗಳಲ್ಲಿ 15 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಅಡ್ಡಿಪಡಿಸಿತು. ಬಳಿಕ 17 ಓವರ್ ಗಳಲ್ಲಿ 123 ರನ್ ಗುರಿ ನೀಡಲಾಯಿತು. ರೀಜಾ ಹೆಂಡ್ರಿಕ್ಸ್ ಗೋಲ್ಡನ್ ಡಕ್ ಗೆ ಬಲಿಯಾದರೆ, ಡಿಕಾಕ್ 12 ರನ್ ಮಾಡಿ ಔಟಾದರು.
ಮಳೆ ನಿಂತ ಬಳಿಕ ಕ್ಲಾಸನ್ 10 ಎಸೆತದಲ್ಲಿ 22, ನಾಯಕ ಮಾರ್ಕ್ರಮ್ 18 ರನ್ ಗಳಿಸಿದರು. ಸ್ಟಬ್ಸ್ 29 ಮತ್ತು ಕೊನೆಯಲ್ಲಿ 21 ರನ್ ಹೊಡೆದ ಮಾರ್ಕೊ ಎನ್ಸನ್ ತಂಡಕ್ಕೆ ನೆರವಾದರು.
ಸಿನಿಮೀಯ ಅಂತ್ಯ: ಒಂದು ಹಂತದಲ್ಲಿ ಆಫ್ರಿಕಾ ಸುಲಭ ಗೆಲುವು ಸಾಧಿಸುವ ಸಾಧ್ಯತೆಯಿತ್ತು. ಆದರೆ ಯಾರೊಬ್ಬ ಆಟಗಾರರು ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಸಮಯೋಚಿತವಾಗಿ ವಿಂಡೀಸ್ ವಿಕೆಟ್ ಪಡೆಯಿತು. ಕೊನೆಯ ಎರಡು ಓವರ್ ನಲ್ಲಿ 13 ರನ್ ಅಗತ್ಯವಿತ್ತು. ಚೇಸ್ ಎಸೆತ ಓವರ್ ನಲ್ಲಿ ಮಹರಾಜ್ ಔಟಾದರು. ಆದರೆ ಈ ಓವರ್ ನ ಕೊನೆಯ ಎಸೆತಕ್ಕೆ ರಬಾಡಾ ಬೌಂಡರಿಗಟ್ಟಿದರು. ಕೊನೆಯ ಓವರ್ ನ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಎನ್ಸನ್ ದಕ್ಷಿಣ ಆಫ್ರಿಕಾ ತಂಡವನ್ನು ಸೆಮಿ ಫೈನಲ್ ಗೇರಿಸಿದರು.
ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ಕೂಟವನ್ನು ಅಂತ್ಯಗೊಳಿಸಿತು. ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಸೆಮಿ ಫೈನಲ್ ಪ್ರವೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.