ಸರಣಿ ಗೆಲುವಿಗೆ ಭಾರತ ಪ್ರಯತ್ನ
Team Udayavani, Feb 21, 2018, 6:20 AM IST
ಸೆಂಚುರಿಯನ್: ಏಕದಿನ ಸರಣಿಯನ್ನು ಭಾರೀ ಅಂತರದಿಂದ ಗೆದ್ದಿರುವ ಟೀಮ್ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ20 ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಸರಣಿಯ ದ್ವಿತೀಯ ಪಂದ್ಯ ಬುಧವಾರ ನಡೆಯಲಿದ್ದು ಕೊಹ್ಲಿ ಪಡೆ ಈ ಪಂದ್ಯದಲ್ಲಿ ಜಯಭೇರಿ ಬಾರಿಸಲು ಸಿದ್ಧತೆ ನಡೆಸುತ್ತಿದೆ.
ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 28 ರನ್ನುಗಳಿಂದ ಗೆದ್ದಿರುವ ಭಾರತ ಬುಧವಾರವೇ ಇನ್ನೊಂದು ಸರಣಿ ಗೆಲುವಿನ ಹೊಸ್ತಿಲಲ್ಲಿ ಇದೆ. ಈ ಮೂಲಕ ಪ್ರವಾಸವನ್ನು ಭರ್ಜರಿಯಾಗಿ ಮುಗಿಸುವ ತವಕದಲ್ಲಿದೆ.
ಟೆಸ್ಟ್ ಸರಣಿಯನ್ನು 1-2ರಿಂದ ಸೋತ ಬಳಿಕ ಭಾರತ ಏಕದಿನ ಸರಣಿಯಲ್ಲಿ ಅಮೋಘವಾಗಿ ಆಡಿತು. ಕೊಹ್ಲಿ ಅವರ ಭರ್ಜರಿ ಆಟದಿಂದಾಗಿ ಭಾರತ 5-1 ಅಂತರದಿಂದ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಇದೀಗ ಟ್ವೆಂಟಿ20 ಸರಣಿ ಗೆಲ್ಲಲು ಪ್ರಯತ್ನಿಸಲಿದೆ. ಒಂದು ಸರಣಿಯನ್ನು 3-0 ಅಂತರದಿಂದ ಗೆದ್ದರೆ ಐಸಿಸಿ ಟ್ವೆಂಟಿ20 ರ್‍ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆಯಿದೆ. ಪಾಕಿಸ್ಥಾನದ ಬಳಿಕದ ದ್ವಿತೀಯ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಆದರೆ ಇದೇ ವೇಳೆ ಆಸ್ಟ್ರೇಲಿಯವು ಟ್ವೆಂಟಿ20 ತ್ರಿಕೋನ ಸರಣಿಯ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದರೆ ಭಾರತ ಮೂರನೇ ಸ್ಥಾನದಲ್ಲಿಯೇ ಮುಂದುವರಿಯಲಿದೆ.
ಕೊಹ್ಲಿ ಫಿಟ್
ನಾಯಕ ವಿರಾಟ್ ಕೊಹ್ಲಿ ಸರಣಿ ನಿರ್ಣಾಯಕ ಪಂದ್ಯಕ್ಕೆ ಫಿಟ್ ಆಗಲಿದ್ದಾರೆ. ರವಿವಾರದ ಪಂದ್ಯದ ವೇಳೆ ಅವರು ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನೋವು ಗಂಭೀರವಾಗಿಲ್ಲ ಮತ್ತು ಬುಧವಾರ ಟಾಸ್ ಹಾಕಲು ಮೈದಾನಕ್ಕೆ ತೆರಳುವ ನಿರೀಕ್ಷೆಯಿದೆ. ಡರ್ಬಾನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆಯೂ ಕೊಹ್ಲಿ ಮೊಣಕಾಲಿನ ನೋವಿಗೆ ಒಳಗಾಗಿದ್ದರು. ಆದರೆ ಅದು ಗಂಭೀರವಾದುದಲ್ಲ. ಆಬಳಿಕ ಅವರು ಶತಕ ಸಿಡಿಸಿದ್ದರು.
ಒಂದು ವೇಳೆ ಬುಧವಾರದ ಪಂದ್ಯದಲ್ಲಿಯೇ ಸರಣಿ ಗೆದ್ದರೆ ಕೊಹ್ಲಿ ಕೇಪ್‌ಟೌನ್‌ನಲ್ಲಿ ನಡೆಯುವ ಅಂತಿಮ ಟ್ವೆಂಟಿ20 ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ. ಮುಂದಿನ ಮೂರು ತಿಂಗಳು ಬಹಳಷ್ಟು ಪಂದ್ಯಗಳಲ್ಲಿ ಆಡುವ ಕಾರಣ ಅವರಿಗೆ ಕೆಲವು ಸಮಯ ವಿಶ್ರಾಂತಿ ನೀಡಲು ತಂಡ ವ್ಯವಸ್ಥಾಪಕರು ನಿರ್ಧರಿಸಬಹುದು. ಕೊಹ್ಲಿ ಆಡಲಿದ್ದರೆ ಕೆಎಲ್ ರಾಹುಲ್ ತಂಡಕ್ಕೆ ಆಯ್ಕೆಯಾಗಲೂಬಹುದು.
ಇಲ್ಲಿನ ಸೂಪರ್‌ನ್ಪೋರ್ಟ್ಸ್ ಪಾರ್ಕ್‌ನ ಪಿಚ್ ಪ್ರವಾಸದುದ್ದಕ್ಕೂ ನಿಧಾನಗತಿಯ ಆಟಕ್ಕೆ ಸಹಕಾರ ನೀಡಿದೆ. ಹಾಗಾಗಿ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆಯಿದೆ. ಚಾಹಲ್ ಜತೆ ಕುಲದೀಪ್ ಯಾದವ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಈ ಪ್ರವಾಸದ ವೇಳೆ ಯಾವುದೇ ಪಂದ್ಯದಲ್ಲಿ ಆಡದ ಅಕ್ಷರ್ ಪಟೇಲ್ ಅವರಿಗೂ ಅವಕಾಶ ನೀಡುವ ಸಾಧ್ಯತೆಯಿದೆ.
ಡಿ’ವಿಲಿಯರ್ ಇಲ್ಲ
ಗಾಯದ ಸಮಸ್ಯೆಯಿಂದ ಎಬಿ ಡಿ’ವಿಲಿಯರ್ ಟ್ವೆಂಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಯಾವುದೇ ಆಟಗಾರನನ್ನು ದಕ್ಷಿಣ ಆಫ್ರಿಕಾ ಹೆಸರಿಸಿಲ್ಲ. ಡ್ಯುಮಿನಿ ತಂಡವನ್ನು ಮುನ್ನಡೆಸಲಿದ್ದು ಲಭ್ಯವಿರುವ ಆಟಗಾರರಲ್ಲಿ ಸಮರ್ಥರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸಬೇಕಾಗಿದೆ.
ಉಭಯ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಸುರೇಶ್ ರೈನಾ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಜಯದೇವ್ ಉನಾದ್ಕತ್, ಶಾದೂìಲ್ ಠಾಕುರ್.
ದಕ್ಷಿಣ ಆಫ್ರಿಕಾ: ಜೀನ್‌ಪಾಲ್ ಡ್ಯುಮಿನಿ (ನಾಯಕ), ಫರ್ಹಾನ್ ಬೆಹಡೀìನ್, ಜೂನಿಯರ್ ಡಾಲ, ರೀಜಾ ಹೆಂಡ್ರಿಕ್ಸ್, ಕ್ರಿಸ್ಟಿಯನ್ ಜಾಂಕರ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಡೇನ್ ಪ್ಯಾಟರ್ಸನ್, ಆರನ್ ಫಾಂಗಿಸೊ, ಆ್ಯಂಡಿಲ್ ಫೆಲುಕ್ವಾಯೊ, ತಾಬ್ರಾಝ್ ಶಂಸಿ, ಜಾನ್ ಜಾನ್ ಸುಟ್ಸ್.
ಪಂದ್ಯ ಆರಂಭ: ಭಾರತೀಯ ಕಾಲಮಾನ ರಾತ್ರಿ 9.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.