World Cup ದಕ್ಷಿಣ ಆಫ್ರಿಕಾ ಭಾರತದ ಪಾಲಿನ ಕಬ್ಬಿಣದ ಕಡಲೆ
Team Udayavani, Nov 5, 2023, 12:14 AM IST
“ಚೋಕರ್’ ಹಣೆಪಟ್ಟಿಯನ್ನು ಕಿತ್ತೆಸೆಯಲು ದಕ್ಷಿಣ ಆಫ್ರಿಕಾದಿಂದ ಸಾಧ್ಯವಾದೀತೇ ಎಂಬುದು ಈ ಸಲದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಮುಖ್ಯ ಪ್ರಶ್ನೆ ಹಾಗೂ ಕುತೂಹಲ. 1992ರಲ್ಲಿ ವಿಶ್ವಕಪ್‌ಗೆ ಪ್ರವೇಶ ಪಡೆದಂ ದಿನಿಂದಲೂ ಅಮೋಘ ಪ್ರದರ್ಶನ ನೀಡುತ್ತ ಬಂದ ಹಿರಿಮೆಯೇನೋ ಸೌತ್ ಆಫ್ರಿಕಾ ಪಾಲಿಗಿದೆ. ಆದರೆ ಗೆದ್ದು ಗೆದ್ದು ಕೊನೆಯಲ್ಲಿ ವಿಚಿತ್ರ ರೀತಿಯಲ್ಲಿ ಬಿದ್ದು ಕೂಟದಿಂದ ನಿರ್ಗಮಿಸುವುದು ಹರಿಣಗಳ ಪಡೆಯ ಹಣೆಬರಹವೇ ಆಗಿರುವುದನ್ನು ಮರೆಯುವಂತಿಲ್ಲ. ಹೀಗಾಗಿ ಅದಕ್ಕೆ ಸೆಮಿಫೈನಲ್ ಹಂತವೇ ಅಂತಿಮ ಮೆಟ್ಟಿಲಾಗುತ್ತ ಬಂದಿರುವುದು ವಿಪರ್ಯಾಸ.
ಈ ಸಲವೂ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಿದೆ. ಇದಕ್ಕೂ ಮೊದಲು ರವಿವಾರ ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ದೊಡ್ಡ ಹರ್ಡಲ್ಸ್ ಒಂದನ್ನು ದಾಟಬೇಕಿದೆ. ಟೆಂಬ ಬವುಮ ಪಡೆ ಆತಿಥೇಯ ಹಾಗೂ ಅಜೇಯ ಭಾರತದ ಸವಾಲನ್ನು ಎದುರಿಸಬೇಕಿದೆ.
ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಿರುವ ಅಪರೂಪದ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದು. ಈವರೆಗಿನ 5 ಪಂದ್ಯಗಳಲ್ಲಿ ಅದು ಮೂರನ್ನು ಗೆದ್ದಿದೆ. ಭಾರತಕ್ಕೆ ಒಲಿದದ್ದು 2 ಗೆಲುವು ಮಾತ್ರ. ರವಿವಾರದ ಮುಖಾಮುಖಿಯ ಹಿನ್ನೆಲೆಯಲ್ಲಿ ಈ ಫಲಿತಾಂಶಗಳತ್ತ ಒಂದು ಇಣುಕುನೋಟ ಹಾಯಿಸಲಾಗಿದೆ.
ಗೆಲುವಿನ ಆರಂಭ
ದಕ್ಷಿಣ ಆಫ್ರಿಕಾ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ಪುನರಾ ಗಮನ ಸಾರಿದ್ದೇ ಭಾರತದ ವಿರುದ್ಧ ಆಡುವ ಮೂಲಕ. ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ಏರ್ಪಟ್ಟಿದ್ದು 1992ರಲ್ಲಿ. ಇದೂ ಸೇರಿದಂತೆ 1999 ಹಾಗೂ 2011ರ ವಿಶ್ವ ಕಪ್ ಕೂಟಗಳಲ್ಲಿ ಭಾರತವನ್ನು ಮಣಿಸಿದ ದಕ್ಷಿಣ ಆಫ್ರಿಕಾ ಹ್ಯಾಟ್ರಿಕ್ ಗೆಲುವು ಕಂಡಿತ್ತು. ಅನಂತರದ 2015 ಮತ್ತು 2019ರ ಕೂಟಗಳಲ್ಲಿ ಜಯಭೇರಿ ಮೊಳಗಿಸುವ ಸರದಿ ಭಾರತದ್ದಾಗಿತ್ತು.
1992ರ ಪಂದ್ಯ ನಡೆದದ್ದು ಅಡಿಲೇಡ್‌ನಲ್ಲಿ. ಇದು 30 ಓವರ್‌ಗಳ ಪಂದ್ಯವಾಗಿತ್ತು. ಭಾರತ 6ಕ್ಕೆ 180 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ 4ಕ್ಕೆ 181 ರನ್ ಬಾರಿಸಿ ಗೆದ್ದು ಬಂದಿತು.
ಹೋವ್‌ನಲ್ಲಿ ಸಾಗಿದ 1999ರ ಮುಖಾಮುಖೀಯಲ್ಲಿ ಮತ್ತೆ ದಕ್ಷಿಣ ಆಫ್ರಿಕಾ ಅಬ್ಬರಿಸಿತು. 4 ವಿಕೆಟ್‌ಗಳಿಂದ ಜಯಿ ಸಿತು. ಭಾರತ 5ಕ್ಕೆ 253 ರನ್ ಗಳಿಸಿದರೆ, ಹರಿಣಗಳ ಪಡೆ 47.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿತು. ಈ ಪಂದ್ಯದಲ್ಲಿ ಸೌರವ್ ಗಂಗೂಲಿ 97, ಜಾಕ್ ಕ್ಯಾಲಿಸ್ ಅಜೇಯ 96 ರನ್ ಮಾಡಿ ಮಿಂಚಿದ್ದರು.
2011ರ ಜಯಭೇರಿ
ಭಾರತ 2011ರಲ್ಲಿ 2ನೇ ಸಲ ವಿಶ್ವಕಪ್ ಗೆದ್ದು ಮೆರೆ ದಾಡಿದ್ದು ಇತಿಹಾಸ. ಆದರೆ ಈ ಹಾದಿಯಲ್ಲಿ ಧೋನಿ ಪಡೆಗೆ ದಕ್ಷಿಣ ಆಫ್ರಿಕಾವನ್ನು ಮಣಿಸಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ನಾಗಪುರದಲ್ಲಿ ನಡೆದ ಈ ದೊಡ್ಡ ಮೊತ್ತದ ಮೇಲಾಟದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳ ಜಯದೊಂದಿಗೆ ಹ್ಯಾಟ್ರಿಕ್ ಸಾಧಿಸಿತು.
ತೆಂಡುಲ್ಕರ್ (111), ಸೆಹವಾಗ್ (73) ಮತ್ತು ಗಂಭೀರ್ (69) ಅವರ ಬ್ಯಾಟಿಂಗ್ ಬಲದಿಂದ ಭಾರತ 296 ರನ್ ಪೇರಿಸಿದರೆ, ಗ್ರೇಮ್ ಸ್ಮಿತ್ ಪಡೆ 49.4 ಓವರ್‌ಗಳಲ್ಲಿ 7 ವಿಕೆಟಿಗೆ 300 ರನ್ ಬಾರಿಸಿ ಗೆದ್ದು ಬಂತು.
ಭಾರತದ ಸರದಿ
ಭಾರತ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಲು 2015ರ ತನಕ ಕಾಯಬೇಕಾಯಿತು. ಅಂದಿನ ಮೆಲ್ಬರ್ನ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ 130 ರನ್ನುಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ 7ಕ್ಕೆ 307 ರನ್ ಪೇರಿಸಿ ದರೆ, ಎಬಿಡಿ ಪಡೆ 40.2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು. ಶಿಖರ್ ಧವನ್ 137 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
2019ರ ವಿಶ್ವಕಪ್‌ನಲ್ಲೂ ದಕ್ಷಿಣ ಆಫ್ರಿಕಾವನ್ನು ಕೆಡವಲು ಭಾರತ ಯಶಸ್ವಿಯಾಯಿತು. ಇದು ಸೌತಾಂಪ್ಟನ್‌ನಲ್ಲಿ ನಡೆದ ಸೆಣಸಾಟ. ದಕ್ಷಿಣ ಆಫ್ರಿಕಾ 9ಕ್ಕೆ 227 ರನ್ ಗಳಿಸಿದರೆ, ಭಾರತ 47.3 ಓವರ್‌ಗಳಲ್ಲಿ ನಾಲ್ಕೇ ವಿಕೆಟ್ ಕಳೆದುಕೊಂಡು 230 ರನ್ ಬಾರಿಸಿತು.
ರವಿವಾರ ಕೋಲ್ಕತಾದಲ್ಲಿ ಹ್ಯಾಟ್ರಿಕ್ ಗೆಲುವಿನ ಅವಕಾಶ ಭಾರತದ ಮುಂದೆ ತೆರೆದುಕೊಂಡಿದೆ.
-ಪಿ.ಕೆ. ಹಾಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.