ಟೆಸ್ಟ್: ತವರಲ್ಲೇ ಇನ್ನಿಂಗ್ಸ್ ಸೋಲುಂಡ ದಕ್ಷಿಣ ಆಫ್ರಿಕಾ
Team Udayavani, Jan 20, 2020, 11:34 PM IST
ಪೋರ್ಟ್ ಎಲಿಜಬೆತ್: ದಕ್ಷಿಣ ಆಫ್ರಿಕಾ ತವರಿನಲ್ಲೇ ಇನ್ನಿಂಗ್ಸ್ ಸೋಲಿನ ಸಂಕಟಕ್ಕೆ ಸಿಲುಕಿದೆ. ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಡೆ ಇನ್ನಿಂಗ್ಸ್ ಹಾಗೂ 53 ರನ್ ಅಂತರದಿಂದ ಹರಿಣಗಳನ್ನು ಬೇಟೆಯಾಡಿತು.
ಇಂಗ್ಲೆಂಡಿನ 499ಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 209ಕ್ಕೆ ಕುಸಿದು ಫಾಲೋಆನ್‌ಗೆ ಸಿಲುಕಿತ್ತು. ಅಂತಿಮ ದಿನವಾದ ಸೋಮವಾರ 237ಕ್ಕೆ ದ್ವಿತೀಯ ಸರದಿಯನ್ನು ಮುಗಿಸಿತು. 4 ಪಂದ್ಯಗಳ ಸರಣಿಯಲ್ಲೀಗ ಇಂಗ್ಲೆಂಡ್ 2-1ರ ಮುನ್ನಡೆ ಸಾಧಿಸಿದೆ.
ಇದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ಬಳಿಕ ದಕ್ಷಿಣ ಆಫ್ರಿಕಾ ತವರಲ್ಲಿ ಅನುಭವಿಸಿದ 4ನೇ ಇನ್ನಿಂಗ್ಸ್ ಸೋಲು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಲಾ 2 ಸಲ ಹರಿಣಗಳಿಗೆ ಈ ಆಘಾತವಿಕ್ಕಿವೆ. ಇದಕ್ಕೂ ಮೊದಲು ಇಂಗ್ಲೆಂಡ್ 2009-10ರ ಡರ್ಬನ್ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 98 ರನ್ನುಗಳ ಗೆಲುವು ಸಾಧಿಸಿತ್ತು. ಹಾಗೆಯೇ 1956-57ರ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಸತತ 2 ಟೆಸ್ಟ್ ಪಂದ್ಯಗಳನ್ನು ಗೆದ್ದ ಹಿರಿಮೆಯೂ ಇಂಗ್ಲೆಂಡಿನದ್ದಾಯಿತು.
ಅಂತಿಮ ವಿಕೆಟಿಗೆ 99 ರನ್
ದ್ವಿತೀಯ ಇನ್ನಿಂಗ್ಸ್‌ನಲ್ಲೂ ತೀವ್ರ ಕುಸಿತಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ ಇನ್ನೂ ದೊಡ್ಡ ಅಂತರದಲ್ಲಿ ಸೋಲುವ ಸಾಧ್ಯತೆ ಇತ್ತು. ಡು ಪ್ಲೆಸಿಸ್ ಬಳಗದ 9 ವಿಕೆಟ್ 138ಕ್ಕೆ ಉದುರಿ ಹೋಗಿತ್ತು. ಆದರೆ ಕೊನೆಯ ವಿಕೆಟಿಗೆ ಜತೆಗೂಡಿದ ಕೇಶವ್ ಮಹಾರಾಜ್ (71) ಮತ್ತು ಡೇನ್ ಪ್ಯಾಟರ್ಸನ್ (ಅಜೇಯ 39) 99 ರನ್ ಪೇರಿಸಿ ಸೋಲಿನ ಅಂತರ ತಗ್ಗಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-9 ವಿಕೆಟಿಗೆ 499 ಡಿಕ್ಲೇರ್. ದಕ್ಷಿಣ ಆಫ್ರಿಕಾ-209 ಮತ್ತು 237 (ಮಹಾರಾಜ್ 71, ಪ್ಯಾಟರ್ಸನ್ ಅಜೇಯ 39, ಡು ಪ್ಲೆಸಿಸ್ 36, ರೂಟ್ 87ಕ್ಕೆ 4, ವುಡ್ 32ಕ್ಕೆ 3). ಪಂದ್ಯಶ್ರೇಷ್ಠ: ಓಲೀ ಪೋಪ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.