ಕಾಂಗರೂ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾ
Team Udayavani, Mar 3, 2018, 6:55 AM IST
ಡರ್ಬನ್: ಡರ್ಬನ್ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಪ್ರವಾಸಿ ಆಸ್ಟ್ರೇಲಿಯ ಮೇಲುಗೈ ಸಾಧಿಸಿದೆ. ಕಾಂಗರೂ ದಾಳಿಗೆ ತೀವ್ರ ಕುಸಿತ ಕಂಡ ದಕ್ಷಿಣ ಆಫ್ರಿಕಾ ಅಂತಿಮ ಅವಧಿಯ ಆಟದಲ್ಲಿ 162 ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯ 351ಕ್ಕೆ ಆಲೌಟ್ ಆಗಿತ್ತು. ಇದರೊಂದಿಗೆ ಸ್ಮಿತ್ ಪಡೆಗೆ 189 ರನ್ನುಗಳ ಭಾರೀ ಮುನ್ನಡೆ ಲಭಿಸಿದೆ.
ದಕ್ಷಿಣ ಆಫ್ರಿಕಾ ಪತನದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಸ್ಪಿನ್ನರ್ ನಥನ್ ಲಿಯೋನ್ ಮಹತ್ವದ ಪಾತ್ರ ವಹಿಸಿದರು. ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಲಿಯೋನ್ 3 ವಿಕೆಟ್ ಕಿತ್ತರು. ಆಫ್ರಿಕಾ ಪರ ಎಬಿ ಡಿ ವಿಲಿಯರ್ ಏಕಾಂಗಿಯಾಗಿ ಹೋರಾಡಿ ಅಜೇಯ 71 ರನ್ ಮಾಡಿದರು.
ಆಸ್ಟ್ರೇಲಿಯ 5ಕ್ಕೆ 225 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಮಿಚೆಲ್ ಸ್ಟಾರ್ಕ್ ಕೇವಲ 4 ರನ್ ಕೊರತೆಯಿಂದ 3ನೇ ಟೆಸ್ಟ್ ಶತಕದಿಂದ ವಂಚಿತರಾದರು. ಆತಿಥೇಯ ತಂಡದ ಪರ ಸ್ಪಿನ್ನರ್ ಕೇಶವ್ ಮಹಾರಾಜ್ 5, ಫಿಲಾಂಡರ್ 3, ರಬಾಡ 2 ವಿಕೆಟ್ ಕಿತ್ತರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.