Test; ಅಮೋಘ ಗೆಲುವಿನೊಂದಿಗೆ 2024 ರ ಅಭಿಯಾನ ಆರಂಭಿಸಿದ ಟೀಮ್ ಇಂಡಿಯಾ
ಹೀನಾಯ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿ
Team Udayavani, Jan 4, 2024, 5:18 PM IST
ಕೇಪ್‌ಟೌನ್: ಕೇಪ್‌ಟೌನ್ ಟೆಸ್ಟ್ ಎರಡೇ ದಿನದಲ್ಲಿ ಕೊನೆಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಜಯ ಸಾಧಿಸಿ ಸರಣಿಯನ್ನು 1-1 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದ ಭಾರತ ತಂಡ 2024 ರ ಕ್ರಿಕೆಟ್ ಅಭಿಯಾನವನ್ನು ಗೆಲುವಿನ ಸಂಭ್ರಮದೊಂದಿಗೆ ಆರಂಭಿಸಿದೆ.
ಬೌಲರ್ ಗಳು ವಿಕ್ರಮ ಮೆರೆದ ಪಂದ್ಯ ನಿರೀಕ್ಷೆಗೂ ಮೀರಿ ಎರಡು ದಿನದ ಆಟದ ಅಂತ್ಯಕ್ಕೂ ಮುನ್ನ ಫಲಿತಾಂಶ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿ ಮೊದಲ ಇನ್ನಿಂಗ್ಸ್ ನಲ್ಲಿ ಅಗ್ಗದ 55 ರನ್ ಗಳಿಗೆ ಆಲೌಟಾಗಿದ್ದ ದಕ್ಷಿಣ ಆಫ್ರಿಕಾ ಎರಡನೇಇನ್ನಿಂಗ್ಸ್ ನಲ್ಲಿ ಸ್ವಲ್ಪ ಚೇತರಿಕೆ ಕಂಡುಕೊಂಡು 176 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಇನ್ನಿಂಗ್ಸ್ ಅನ್ನು153 ಕ್ಕೆ ಮುಗಿಸಿದ್ದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಅಲ್ಪ ಗುರಿಯನ್ನು 12 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 80 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.
ಪಂದ್ಯದ ಮೊದಲ ದಿನವೇ 23 ವಿಕೆಟ್ ಗಳು ಪತನಗೊಂಡಿದ್ದವು. ಎರಡನೇ ಇನ್ನಿಂಗ್ಸ್ ಆರಂಭಿಸಿ 3 ವಿಕೆಟಿಗೆ 62 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮ್ಯಾನ್ ಗಳು ಭಾರತದ ಬಿಗಿ ದಾಳಿಗೆ ನಲುಗಿ 176 ರನ್ ಗಳನ್ನಷ್ಟೇ ಗಳಿಸಲು ಶಕ್ತರಾದರು.
36 ರನ್ ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಮಾರ್ಕ್‌ರಮ್ ಬ್ಯಾಟಿಂಗ್ ವೈಭವ ತೋರಿ ಪಂದ್ಯದ ಏಕಮಾತ್ರ ಆಕರ್ಷಕ ಶತಕ ಸಿಡಿಸುವಲ್ಲಿ ಯಶಸ್ವಿಯಾದರು.ಒತ್ತಡದಲ್ಲಿಯೂ ಅಮೋಘ ಆಟವಾಡಿ 103 ಎಸೆತಗಳಲ್ಲಿ 106 ರನ್ ಗಳಿಸಿ ಔಟಾದರು. ಉಳಿದ ಯಾವ ಆಟಗಾರರು ನೆಲಕಚ್ಚಿ ಆಡುವಲ್ಲಿ ವಿಫಲರಾದರು.
ಭಾರತದ ಪರ ಬುಮ್ರಾ 6 ವಿಕೆಟ್ ಕಿತ್ತು ಗಮನ ಸೆಳೆದರು. ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ್ದ ಸಿರಾಜ್ ಏಕಮಾತ್ರ ವಿಕೆಟ್ ಎರಡನೇ ಇನ್ನಿಂಗ್ಸ್ ನಲ್ಲಿ ಪಡೆದರು. ಮುಖೇಶ್ ಕುಮಾರ್ 2, ಪ್ರಸಿದ್ ಕೃಷ್ಣ ಒಂದು ವಿಕೆಟ್ ಪಡೆದರು.
ಭಾರತದ ಬ್ಯಾಟಿಂಗ್ ನಲ್ಲಿ ಜೈಸ್ವಾಲ್ 28, ನಾಯಕ ರೋಹಿತ್ ಶರ್ಮ ಔಟಾಗದೆ 17 ರನ್ , ಗಿಲ್ 10,ಕೊಹ್ಲಿ 12 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 4 ರನ್ ಗಳಿಸಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸೋಲಿಗೆ ಸಿಲುಕಿ ಅವಮಾನ ಅನುಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.