T20; ದಕ್ಷಿಣ ಆಫ್ರಿಕಾಕ್ಕೆ ಭಾರಿ ಸೋಲು: ಸರಣಿ ಸಮಬಲ ಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿ
ಸೂರ್ಯ ಶತಕದ ಪ್ರತಾಪ... 5 ವಿಕೆಟ್ ಕಿತ್ತು ಕಮಾಲ್ ಮಾಡಿದ ಕುಲದೀಪ್
Team Udayavani, Dec 14, 2023, 11:54 PM IST
ಜೋಹಾನ್ಸ್‌ಬರ್ಗ್ : ಇಲ್ಲಿನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 106 ರನ್ ಗಳ ಅತ್ಯಮೋಘ ಗೆಲುವು ಸಾಧಿಸಿ ಸರಣಿಯನ್ನು ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 20 ಓವರ್ ಗಳಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಶತಕ ದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. 202 ರನ್ ಗಳ ಸವಾಲು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿತು. 13.5 ಓವರ್ ಗಳಲ್ಲಿ 95 ರನ್ ಗಳಿಗೆ ಆಲೌಟಾಯಿತು.
ನಾಯಕ ಐಡೆನ್ ಮಾರ್ಕ್ರಾಮ್ 25, ಡೇವಿಡ್ ಮಿಲ್ಲರ್ 35 ರನ್ ಗರಿಷ್ಠ ಸ್ಕೋರ್ , ಉಳಿದವರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು.
ಭಾರತದ ಬೌಲಿಂಗ್ ನಲ್ಲಿ ಮಿಂಚಿದ ಕುಲದೀಪ್ ಯಾದವ್ 5 ವಿಕೆಟ್ ಪಡೆದು ಮಿಂಚಿದರು. 2.5 ಓವರ್ ಎಸೆದು 17 ರನ್ ಗಳನ್ನು ಮಾತ್ರ ನೀಡಿದರು. ರವೀಂದ್ರ ಜಡೇಜಾ 2 ವಿಕೆಟ್ ಕಿತ್ತರೆ, ಮುಖೇಶ್ ಕುಮಾರ್, ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಕಿತ್ತರು.
ಅಮೋಘ ಬ್ಯಾಟಿಂಗ್ ವೈಭವ
ಯಶಸ್ವಿ ಜೈಸ್ವಾಲ್ 60(41ಎಸೆತ) ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 12, ತಿಲಕ್ ವರ್ಮ ಶೂನ್ಯಕ್ಕೆ ಔಟಾದರು. ಅಮೋಘ ಆಟವಾಡಿ ಅಬ್ಬರಿಸಿದ ಸೂರ್ಯ 56 ಎಸೆತಗಳಲ್ಲಿ100 ರನ್ ಪೂರ್ಣ ಗಳಿಸಿ ಔಟಾದರು. 7 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸಿಡಿಸಿದರು. ರಿಂಕು ಸಿಂಗ್ 14 ರನ್ ಗಳಿಸಿ ಔಟಾದರು.
ಕೇಶವ ಮಹಾರಾಜ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದರು. ನಾಂದ್ರೆ ಬರ್ಗರ್,ತಬ್ರೈಜ್ ಶಮ್ಸಿ ತಲಾ ಒಂದು ವಿಕೆಟ್ ಪಡೆದರು.
ಟಿ 20ಯ ಆಗ್ರ ಶ್ರೇಯಾಂಕದ ಬ್ಯಾಟ್ಸ್ ಮ್ಯಾನ್ ಸೂರ್ಯ ಕುಮಾರ್ ಯಾದವ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.