ದಕ್ಷಿಣ ಆಫ್ರಿಕಾ-ಜಿಂಬಾಬ್ವೆ: 4 ದಿನಗಳ ಟೆಸ್ಟ್
Team Udayavani, Dec 15, 2017, 7:50 AM IST
ಜೊಹಾನ್ಸ್‌ಬರ್ಗ್: ಸಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ಮತ್ತೂಂದು ಪರಿವರ್ತನೆಯತ್ತ ಮುಖ ಮಾಡಲಿದೆ. ಮೊನ್ನೆ ಮೊನ್ನೆ “ಅಡಿಲೇಡ್ ಓವಲ್’ನಲ್ಲಿ ಮೊತ್ತಮೊದಲ ಹಗಲು-ರಾತ್ರಿ ಆ್ಯಶಸ್ ಟೆಸ್ಟ್ ಮುಗಿದಿರುವ ಬೆನ್ನಲ್ಲೇ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಕೂಡ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಅಣಿಯಾಗಲಿವೆ. ಇದು ವರ್ಷಾಂತ್ಯದ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯವಾಗಿದ್ದು, 5 ದಿನಗಳ ಬದಲು 4 ದಿನಗಳ ಕಾಲ ಸಾಗಲಿರುವುದು ವಿಶೇಷ.
4 ದಿನಗಳ ಟೆಸ್ಟ್ ಪಂದ್ಯಗಳಿಗೆ ಐಸಿಸಿ ಮಾನ್ಯತೆ ನೀಡಿದ ಬಳಿಕ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಪೋರ್ಟ್ ಎಲಿಜಬೆತ್‌ನ “ಸೇಂಟ್ ಜಾಜ್Õì ಪಾರ್ಕ್’ನಲ್ಲಿ ಇದು ಡಿ. 26ರಿಂದ ಆರಂಭವಾಗಲಿದೆ. ಪ್ರವಾಸಿ ಜಿಂಬಾಬ್ವೆಗೆ ಇದು ಮೊದಲ ಹಗಲು-ರಾತ್ರಿ ಟೆಸ್ಟ್ ಎಂಬುದು ವಿಶೇಷ. ಟೆಸ್ಟ್ ಪಂದ್ಯ ಐದರಿಂದ 4 ದಿನಗಳಿಗೆ ಇಳಿಯುವ ಈ ಸಂದರ್ಭದಲ್ಲಿ ಇದಕ್ಕೆ 5 ದಿನಗಳ ಪಂದ್ಯದ ನಿಮಯಮವನ್ನೇ ಅಳವಡಿಸುವ ಹಾಗಿಲ್ಲ. ಇದಕ್ಕಾಗಿ ಐಸಿಸಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.
5 ದಿನಗಳ ಟೆಸ್ಟ್‌ನಲ್ಲಿ ದಿನಕ್ಕೆ 90 ಓವರ್‌ಗಳನ್ನು ಎಸೆಯಲಾಗುತ್ತಿದೆ. ಆದರೆ 4 ದಿನದ ಟೆಸ್ಟ್ ವೇಳೆ ದೈನಂದಿನ ಓವರ್‌ಗಳ ಸಂಖ್ಯೆಯನ್ನು 98ಕ್ಕೆ ಏರಿಸಲಾಗಿದೆ. ಆಗ 4 ದಿನಗಳಲ್ಲಿ ಒಟ್ಟು 392 ಓವರ್ ಎಸೆದಂತಾಗುತ್ತದೆ. ಅಂದರೆ 5 ದಿನಗಳ ಮಾಮೂಲು ಟೆಸ್ಟ್ ಪಂದ್ಯಗಳಿಗಿಂತ ಕೇವಲ 58 ಓವರ್ ಕಡಿಮೆ.
ದಿನಂಪ್ರತಿ 8 ಓವರ್‌ಗಳನ್ನು ಹೆಚ್ಚಿಗೆ ಎಸೆಯಬೇಕಾಗಿರುವುದರಿಂದ ದಿನದಾಟದ ಅವಧಿಯನ್ನು ಅರ್ಧ ಗಂಟೆ ಕಾಲ ವಿಸ್ತರಿಸಲಾಗುತ್ತದೆ. ಆಟದ ಮೊದಲೆರಡು ಅವಧಿಗಳಲ್ಲಿ ಈ ಸಮಯವನ್ನು ಹೊಂದಿಸಿಕೊಳ್ಳಲಾಗುವುದು. ಈ 2 ಅವಧಿಯ ಆಟ 2 ಗಂಟೆಗಳ ಬದಲು 2 ಗಂಟೆ, 15 ನಿಮಿಷಗಳ ಕಾಲ ಸಾಗಲಿದೆ. ಟೀ ವಿರಾಮಕ್ಕೆ 20 ನಿಮಿಷ, “ಸೂಪರ್ ಬ್ರೇಕ್’ಗೆ 40 ನಿಮಿಷಗಳ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದೆ.
ಫಾಲೋಆನ್‌ನಲ್ಲೂ ಬದಲಾವಣೆ
ಮಾಮೂಲು ಟೆಸ್ಟ್ ಪಂದ್ಯಗಳಲ್ಲಿ 200 ರನ್ನುಗಳ ಮೊದಲ ಇನ್ನಿಂಗ್ಸ್ ಅಂತರಕ್ಕೆ ಫಾಲೋಆನ್ ವಿಧಿಸಲಾಗುತ್ತದೆ. ಆದರೆ ಇಲ್ಲಿ ಈ ಅಂತರವನ್ನು 150 ರನ್ನಿಗೆ ಇಳಿಸಲಾಗಿದೆ.ಪೋರ್ಟ್ ಎಲಿಜಬೆತ್ ಕಾಲಮಾನ ಪ್ರಕಾರ ಮಧ್ಯಾಹ್ನ 1.30ಕ್ಕೆ ಈ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಸಂಜೆ 7.45ಕ್ಕೆ ಸೂರ್ಯಾಸ್ತವಾಗಲಿದ್ದು, ಅಂತಿಮ ಅವಧಿಯ ಆಟವಷ್ಟೇ ಹೊನಲು ಬೆಳಕಿನಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.