South Africa; ವಿಶ್ವಕಪ್ ತಂಡ ಪ್ರಕಟವಾಗುತ್ತಿದ್ದಂತೆ ವಿದಾಯ ಘೋಷಿಸಿದ ಕ್ವಿಂಟನ್ ಡಿಕಾಕ್
Team Udayavani, Sep 5, 2023, 4:04 PM IST
ಕೇಪ್ ಟೌನ್: ಮುಂದಿನ ಏಕದಿನ ವಿಶ್ವಕಪ್ ಗಾಗಿ ದಕ್ಷಿಣ ಆಫ್ರಿಕಾ ತಮ್ಮ 15-ಮಂದಿಯ ತಂಡವನ್ನು ಘೋಷಿಸಿದ ಕೆಲವೇ ನಿಮಿಷಗಳ ನಂತರ ವಿಕೆಟ್ ಕೀಪರ್ ಬ್ಯಾಟ್ಸಮನ್ ಕ್ವಿಂಟನ್ ಡಿ ಕಾಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರ ನಂತರ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಹೊಂದುವುದಾಗಿ ಕ್ವಿಂಟನ್ ಡಿ ಕಾಕ್ ಮಂಗಳವಾರ ಘೋಷಿಸಿದ್ದಾರೆ.
2013 ರಲ್ಲಿ ದಕ್ಷಿಣ ಆಫ್ರಿಕಾ ಪರ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಡಿ ಕಾಕ್ ಹರಿಣಗಳ ಪರ 140 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 44.85 ಸರಾಸರಿಯಲ್ಲಿ 17 ಶತಕಗಳು ಮತ್ತು 29 ಅರ್ಧಶತಕಗಳೊಂದಿಗೆ 5966 ರನ್ ಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ:Mysore; ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆಗೆ ಬಂದ ದಸರಾ ಗಜಪಡೆ; ಗೈರಾದ ಅರ್ಜುನ
30 ವರ್ಷ ಪ್ರಾಯದ ಡಿ ಕಾಕ್ ಅವರ ನಿರ್ಧಾರವು ಅಭಿಮಾನಿಗಳಿಗೆ ದೊಡ್ಡ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ಅವರು ಟಿ20 ಗಳಲ್ಲಿ ಮತ್ತು ಫ್ರಾಂಚೈಸ್ ಕ್ರಿಕೆಟ್ ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ.
ಅವರು ಇತ್ತೀಚೆಗೆ ಬಿಬಿಎಲ್ ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಗೆ ಸಹಿ ಹಾಕಿದ್ದಾರೆ. ಡಿಸೆಂಬರ್ 10-21 ರಿಂದ ಭಾರತದ ವಿರುದ್ಧ ಸ್ವದೇಶದಲ್ಲಿ ದಕ್ಷಿಣ ಆಫ್ರಿಕಾದ ಟಿ20 ಸರಣಿಯ ವೇಳೆಯೇ ನಡೆಯುವ ಬಿಗ್ ಬ್ಯಾಷ್ ಲೀಗ್ ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲು ಸಿದ್ಧರಾಗಿದ್ದಾರೆ.
ಏಕದಿನ ವಿಶ್ವಕಪ್ ಗೆ 15 ಜನರ ತಂಡವನ್ನು ದಕ್ಷಿಣ ಆಫ್ರಿಕಾ ಇಂದು ಪ್ರಕಟಿಸಿದೆ. ತೆಂಬ ಬುವುಮಾ ತಂಡವನ್ನು ಮುನ್ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ನಾ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜೆನ್ಸನ್, ಹೆನ್ರಿಚ್ ಕ್ಲಾಸೆನ್, ಸಿಸಂದಾ ಮಗಾಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನೋಕ್ಯಾ, ಕಗಿಸೋ ರಬಾಡಾ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸ್ಸೆನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.