ಸೌತ್ ಏಶ್ಯನ್ ಗೇಮ್ಸ್: ಆ್ಯತ್ಲೆಟಿಕ್ಸ್ ನಲ್ಲಿ ಭಾರತಕ್ಕೆ 10 ಪದಕ
Team Udayavani, Dec 3, 2019, 11:57 PM IST
ಕಾಠ್ಮಂಡು: ಇಲ್ಲಿ ಸಾಗುತ್ತಿರುವ 13ನೇ ಸೌತ್ ಏಶ್ಯನ್ ಗೇಮ್ಸ್‌ನ ಆ್ಯತ್ಲೆಟಿಕ್ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್‌ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಅರ್ಚನಾ ಸುಶೀಂದ್ರನ್, ಎಂ. ಜಸ್ನಾ, ಸರ್ವೇಶ್ ಅನಿಲ್ ಕುಶಾರೆ ಮತ್ತು ಅಜಯ್ ಕುಮಾರ್ ಸರೋಜ್ ಆ್ಯತ್ಲೆಟಿಕ್ಸ್ ಸ್ಪರ್ಧೆಯ ಮೊದಲ ದಿನ ಚಿನ್ನ ಗೆದ್ದ ಸಾಧಕರಾಗಿದ್ದಾರೆ.
ಅತೀ ವೇಗದ ಓಟಗಾರ್ತಿ
ವನಿತೆಯರ 100 ಮೀ. ಓಟದಲ್ಲಿ ಅರ್ಚನಾ ಸುಶೀಂದ್ರನ್ 11.80 ಸೆ.ನಲ್ಲಿ ಗುರಿ ತಲುಪಿ ಗೇಮ್ಸ್ ನ ಅತೀವೇಗದ ಓಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಶ್ರೀಲಂಕಾದ ತನುಜಿ ಅಮಶಾ ಬೆಳ್ಳಿ ಮತ್ತು ಲಕ್ಷಿಕಾ ಸುಗಂದ್ ಕಂಚು ಗೆದ್ದಿದ್ದಾರೆ. ವನಿತೆಯರ ಹೈಜಂಪ್‌ನಲ್ಲಿ ಜಸ್ನಾ 1.73 ಮೀ. ಹಾರಿ ಚಿನ್ನ ತಮ್ಮದಾಗಿಸಿಕೊಂಡರೆ ರಬಿನಾ ಯಾದವ್ ಕಂಚು ಪಡೆದರು. ಪುರುಷರ ಹೈಜಂಪ್‌ನ ಚಿನ್ನವೂ ಭಾರತದ ಪಾಲಾಯಿತು. ಸರ್ವೇಶ್ ಕುಶಾರೆ 2.21 ಮೀ. ಹಾರಿ ಚಿನ್ನ ಪಡೆದರೆ ಚೇತನ್ ಬಾಲಸುಬ್ರಹ್ಮಣ್ಯ ಬೆಳ್ಳಿ ಗೆದ್ದರು. ಈ ಮೂಲಕ ಭಾರತ ಚಿನ್ನ, ಬೆಳ್ಳಿ ಗೆಲ್ಲುವಂತಾಯಿತು.
ಪುರುಷರ 1,500 ಮೀ.ನಲ್ಲಿ ಅಜಯ್ ಕುಮಾರ್ ಸರೋಜ್ 3:54.18 ಸೆ.ನಲ್ಲಿ ಗುರಿ ತಲುಪಿ ಚಿನ್ನ ಪಡೆದರೆ ಅಜೀತ್ ಕುಮಾರ್ ಬೆಳ್ಳಿ ಜಯಿಸಿದರು. ನೇಪಾಲದ ಟಿಂಕ ಕಾರ್ಕಿ ಕಂಚು ಪಡೆದರು. ಕವಿತಾ ಯಾದವ್ ವನಿತೆಯರ 10,000 ಮೀ. ಓಟದಲ್ಲಿ ಭಾರತಕ್ಕೆ ಇನ್ನೊಂದು ಬೆಳ್ಳಿ ದೊರಕಿಸಿಕೊಟ್ಟರು.
ಈ ಮೊದಲು ವನಿತೆಯರ 1,500 ಮೀ.ನಲ್ಲಿ ಭಾರತದ ಚಂದಾ ಬೆಳ್ಳಿ ಗೆದ್ದರೆ ತಂಡ ಸದಸ್ಯೆ ಚಿತ್ರಾ ಪಲಕೀಝ್ ಕಂಚು ಪಡೆದರು.
ಆ್ಯತ್ಲೆಟಿಕ್ಸ್ ಸ್ಪರ್ಧೆಯ ಮೊದಲ ದಿನ ಭಾರತ 4 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ.
ಶೂಟಿಂಗ್: 4 ಚಿನ್ನ
ಭಾರತೀಯ ಶೂಟರ್‌ಗಳು ನಾಲ್ಕು ಚಿನ್ನ ಸಹಿತ 9 ಪದಕ ಗೆದ್ದುಕೊಂಡಿದ್ದಾರೆ. 19ರ ಹರೆಯದ ಮೆಹುಲಿ, ಚೈನ್ ಸಿಂಗ್, ಯೊಗೇಶ್ ಸಿಂಗ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದರೆ 10 ಮೀ. ಏರ್‌ರೈಫಲ್‌ನಲ್ಲಿ ಭಾರತೀಯ ತಂಡ ಚಿನ್ನ ಜಯಿಸಿದೆ. ಫೈನಲ್‌ನಲ್ಲಿ ಮೆಹುಲಿ 253.3 ಅಂಕ ಗಳಿಸಿ ಚಿನ್ನ ಗೆದ್ದರು. ಇದು ಹಾಲಿ ವಿಶ್ವದಾಖಲೆಯ ಸಾಧನೆಗಿಂತ (252.9) 0.4 ಅಂಕ ಹೆಚ್ಚು. ಈ ವಿಶ್ವದಾಖಲೆ ಭಾರತೀಯ ಶೂಟರ್ ಅಪೂರ್ವ ಚಾಂಡೇಲ ಅವರ ಹೆಸರಲ್ಲಿದೆ.
ಒಟ್ಟಾರೆ 18 ಚಿನ್ನ ಸಹಿತ 43 ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.