2020 ಟೋಕಿಯೋ ಒಲಿಂಪಿಕ್ಸ್ : 206 ರಾಷ್ಟ್ರ, 11 ಸಾವಿರ ಸ್ಪರ್ಧಿಗಳು
Team Udayavani, Sep 17, 2019, 7:40 PM IST
ಮುಂದಿನ ವರ್ಷ ನಡೆಯಲ್ಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭರದಿಂದ ಸಿದ್ಧತೆ ಕಾರ್ಯಗಳು ನಡೆಯುತ್ತಿದ್ದು, ಸದ್ಯ ಈ ಸಲದ ಒಲಿಂಪಿಕ್ಸ್ ಹೇಗೆ ವಿಶೇಷವಾಗಿರುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಕ್ರೀಡಾಭಿಮಾನಿಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಈ ಸಲದ ಒಲಿಂಪಿಕ್ಸ್ ಕ್ರೀಡಾಕೂಟ ಹೊಸದಾದ ಅನುಭವ ನೀಡಲಿದೆ ಎಂದು ಕ್ರೀಡಾಕೂಟದ ಆಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗಾದರೆ ಟೋಕಿಯೋ ಆಯೋಜಿಸಿಕೊಂಡಿರುವ ಯೋಜನೆಯಾದರೂ ಏನು ? 2020 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಏನೆಲ್ಲಾ ವಿಶೇಷತೆಗಳಿರುತ್ತದೆ ಎಂಬೆಲ್ಲಾ ಮಾಹಿತಿ ಇಲ್ಲಿವೆ.
ಸ್ವಾಗತಮಾಡುವ ರೊಬೋಟ್‌ಗಳು
ಈ ಬಾರಿಯ ಒಲಿಂಪಿಕ್ಸ್ ಹಾಗೂ ಪ್ಯಾರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ವಿಶೇಷ ವ್ಯಕ್ತಿಗಳು ಗಮನ ಸೆಳೆಯಲ್ಲಿದ್ದು, ಬಂದ ಗಣ್ಯರನ್ನು, ಸ್ಪರ್ಧಿಗಳನ್ನು ಹಾಗೂ ಕ್ರೀಡಾಭಿಮಾನಿಗಳನ್ನು ಈ ಸ್ಪೆಷಲ್ ವ್ಯಕ್ತಿಗಳೇ ಸ್ವಾಗತಿಸಲ್ಲಿದ್ದಾರೆ. ಜತಗೆ ಕ್ರೀಡಾ ಪರಿಕರಣಗಳನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಸಾಗಿಸಲು ಈ ರೊಬೋಟ್‌ಗಳು ನೆರವಾಗಲಿದ್ದು. ಕ್ರೀಡೆಯನ್ನು ಮತ್ತಷ್ಟು ಸನೀಹವಾಗಿ ನೋಡಲು ಈ ರೊಬೋಟ್‌ಗಳು ಸಹಾಯವಾಗಲಿದೆ.
ಹಳೆಯ ಗ್ಯಾಜೆಟ್ಸ್‌ಗಳಿಂದ ಪದಕಗಳು
2020 ರ ಒಲಿಂಪಿಕ್ಸ್ ಹೊಸ ಇತಿಹಾಸ ಬರೆಯಲ್ಲಿದ್ದು, ಮೊಟ್ಟ ಮೊದಲ ಬಾರಿಗೆ ದೀರ್ಘಕಾಲ ಉಳಿಯಬಲ್ಲ ಪದಕಗಳನ್ನು ತಯಾರಿಸಿದೆ. ಮತ್ತೂ ವಿಶೇಷವೆಂದರೆ ಪದಕಗಳನ್ನು ಹಳೆಯ ಗ್ಯಾಜೆಟ್ಸ್‌ಗಳಿಂದ, ಮೊಬೈಲ್ ಫೋನ್‌ಗಳಿಂದ ರಚಿಸಿದ್ದು, ಇಂತಹ ನೂತನ ಪ್ರಯೋಗ ಮಾಡಿದ ದೇಶ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗಿದೆ.
6.21 ಮಿಲಿಯನ್ ತ್ಯಾಜ್ಯ ಬಳಕೆ
ಕ್ರೀಡಾಪಟುಗಳಿಗೆ ನೀಡಲಾಗುವ ಪದಕಗಳನ್ನು ಕಲಾವಿದರಾದ ಜುನಿಶಿ ಕವಾಶಿನಿ ಅವರು ವಿನ್ಯಾಸಗೊಳಿಸಿದ್ದು, ಸುಮಾರು 6.21 ಮಿಲಿಯನ್ ಅಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಪದಕ ತಯಾರಿಕೆಯಲ್ಲಿ ಬಳಸಲಾಗಿದೆ.
206 ರಾಷ್ಟ್ರಗಳು -11 ಸಾವಿರ ಸ್ಪರ್ಧಿಗಳು
2020 ರಲ್ಲಿ ನಡೆಯಲ್ಲಿರುವ ಒಲಿಂಪಿಕ್ಸ್ ಕೂಟದಲ್ಲಿ ಸುಮಾರು 206 ದೇಶದ 11 ಸಾವಿರ ಕ್ರೀಡಾಪಟುಗಳು ಭಾಗವಹಿಸಲ್ಲಿದ್ದಾರೆ. ಮತ್ತೂಂದು ಗಮನಾರ್ಹವಾದ ವಿಷಯ ಎಂದರೆ ಇದೇ ಮೊದಲ ಬಾರಿಗೆ ಅಧಿಕ ಮಟ್ಟದಲ್ಲಿ ಚಿನ್ನದ ಪದಕಗಳನ್ನು ತಯಾರಿಸಿದ್ದು, ಸಮರ್ ಒಲಿಂಪಿಕ್ಸ್‌ನ ಒಂದೇ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ 339 ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ.
3ಡಿ ಟೆಕ್ನಾಲಾಜಿ
ಕ್ರೀಡಾಕೂಟದಲ್ಲಿ, 3ಡಿ ಅಥ್ಲೆಟ್ ಟ್ರ್ಯಾಕಿಂಗ್ (3 ಡಿಎಟಿ) ತಂತ್ರಜ್ಞಾನವನ್ನು ಬಳಸುವ ಮೂಲಕ ಕ್ರೀಡಾಭಿಮಾನಿಗಳಿಗೆ ಹೊಸದಾದ ಅನುಭವಗಳನ್ನು ನೀಡಲು ಮುಂದಾಗಿರುವ ಆಯೋಜಕರು ಇಂಟೆಲ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಭಿಮಾನಿಗಳು ಮತ್ತಷ್ಟು ಹತ್ತಿರದಿಂದ ಪಂದ್ಯಾಟಗಳನ್ನು ನೋಡುವಂತೆ 3ಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಜತೆಗೆ ಅಥ್ಲೆಟ್‌ಗಳ ಚಲನವಲನಗಳನ್ನು ಪರೀಕ್ಷಿಸಲು ಇದು ಸಹಕಾರಿಯಾಗಲಿದೆ.
ವಿಶೇಷ ಉಪಗ್ರಹ ಬಳಕೆ
ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಉಪಗ್ರಹದ ಬಳಕೆ ಮಾಡುತ್ತಿದ್ದು, ಕ್ರೀಡಾಕೂಟ ಮುಗಿಯುವವರೆಗೂ ಭೂಮಿಯ ಕಕ್ಷೆಯ ಸುತ್ತ ಸುತ್ತುವಂತೆ ಉಪಗ್ರಹವನ್ನು ನಿಯೋಜಿಸ ಬೇಕೆಂಬ ಉದ್ದೇಶವನ್ನಿಟ್ಟುಕೊಂಡಿದ್ದಾರೆ. ಕ್ರೀಡಾಕೂಟ ಅಂತ್ಯಗೊಂಡ ನಂತರ ಈ ಉಪಗ್ರಹವನ್ನು ರಾಕೆಟ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ತೆಗೆದುಕೊಂಡು ಹೋಗಲಿದ್ದು, ಅಲ್ಲಿ ಅದನ್ನು ಉಡಾಯಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.