ಬುಮ್ರಾ ದೀ ಗ್ರೇಟ್‌ : ಇಪ್ಪತ್ತು ತಿಂಗಳು ಹನ್ನೆರಡು ಟೆಸ್ಟ್‌ ಅರವತ್ತೆರಡು ವಿಕೆಟ್‌ಗಳು

Team Udayavani, Oct 6, 2019, 6:39 PM IST

Jasprit-Bumrah-730

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬೌಲಿಂಗ್‌ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತದ ವೇಗದ ಬೌಲರ್‌ ಜಸ್‌ ಪ್ರೀತ್‌ ಬೂಮ್ರಾ ಅವರ ಸಾಧನೆಯನ್ನು ಬಿಂಬಿಸಲು ಈ ಮೂರು ಸಾಲುಗಳಷ್ಟೇ ಸಾಕಲ್ಲವೇ?

2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌  ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ಇವತ್ತು ಇಡೀ ಕ್ರಿಕೆಟ್‌ ಜಗತ್ತನ್ನು ಆವರಿಸಿಕೊಂಡಿರುವ ಬೌಲರ್‌. ತನಗಿಂತಲೂ ಅನುಭವಿಗಳಾದ ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌ ಮತ್ತು ಇಶಾಂತ್‌ ಶರ್ಮಾ ಅವರ ಪೈಪೋಟಿಯನ್ನು ಮೀರಿ ಬೆಳೆದಿರುವ 25 ವರ್ಷದ ಬುಮ್ರಾ ಈಗ ಏಕದಿನ ಕ್ರಿಕೆಟ್‌ನಲ್ಲಿಯೂ ಅಗ್ರ ಶ್ರೇಯಾಂಕಿತ.

ನಿಗದಿತ ಓವರ್ ಗಳ ಕ್ರಿಕೆಟ್‌ ನಲ್ಲಿ ಡೆತ್‌ ಓವರ್‌ ಪರಿಣತನಾಗಿ ಬ್ಯಾಟ್ಸ್‌ಮನ್‌ ಗಳಿಗೆ ಮೈಚಳಿ ಬಿಡಿಸಿರುವ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಮಿಂಚುವುದು ಕಷ್ಟ, ಏಕೆಂದರೆ ದೀರ್ಘ‌ ಮಾದರಿಯಲ್ಲಿ ಫಿಟ್ನೆಸ್‌ ಮುಖ್ಯ.

ಟ್ವೆಂಟಿ-20ಯಲ್ಲಿ ನಾಲ್ಕು ಓವರ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 10 ಓವರ್‌ ಮಾತ್ರ ಬೌಲಿಂಗ್‌ ಮಾಡಬೇಕು. ಆದರೆ ಟೆಸ್ಟ್‌ನಲ್ಲಿ ಸುದೀರ್ಘ‌ ಸ್ಪೆಲ್‌ ಗ‌ಳು ಇರುತ್ತವೆ. ಇದು ನಿಜಕ್ಕೂ ಟೆಸ್ಟ್ ಎಂದು ಹಲವು ದಿಗ್ಗಜರು ಅನುಮಾನಿಸಿದ್ದರು. ವೈಟ್‌ ಬಾಲ್‌ ಮತ್ತು ರೆಡ್‌ ಬಾಲ್‌ ಕ್ರಿಕೆಟ್ ಗೆ ವ್ಯತ್ಯಾಸ ಇದೆ ಅಂದಿದ್ದರು.

ಅಂದು 85ನೇ ಶ್ರೇಯಾಂಕದೊಂದಿಗೆ ಕಣಕ್ಕಿಳಿದಿದ್ದ ಬೂಮ್ರಾ ದಕ್ಷಿಣ  ಆಫ್ರಿಕಾ ಪ್ರವಾಸದ ಮೂರು ಟೆಸ್ಟ್‌ಗಳು ಮುಗಿದಾಗ 42ನೇ ಸ್ಥಾನಕ್ಕೇರಿದ್ದರು. 14 ವಿಕೆಟ್‌ಗಳು ಅವರ ಖಾತೆಯಲ್ಲಿದ್ದವು. ನಂತರ ಇಂಗ್ಲೆಂಡ್‌ ಪ್ರವಾಸದಲ್ಲಿ ಅವರ ಜಾದೂ ಮುಂದುವರಿಯಿತು. ಭಾರತ ಸರಣಿ ಸೋತರೂ ಬೂಮ್ರಾ ವಿಕೆಟ್‌ ಬೇಟೆ ನಿರಂತರವಾಗಿತ್ತು. ಶ್ರೇಯಾಂಕದಲ್ಲಿ ಒಂಬತ್ತು ಸ್ಥಾನಗಳ ಬಡ್ತಿ ಪಡೆದರು. ಆಸ್ಟ್ರೇಲಿಯಾದಲ್ಲಿಯೂ ಅವರು ಮಿಂಚಿದರು.

ಬೂಮ್ರಾ ತಮ್ಮ ವಿಶಿಷ್ಟ ಶೈಲಿಯ ಛಾಪು ಮೂಡಿಸಿ ಮೂಡಿಸಿದ್ದಾರೆ. ಆಡಿರುವ ಒಂದು ಡಜನ್‌ ಪಂದ್ಯಗಳಲ್ಲಿಯೇ ಐದು ಸಲ ಐದು ವಿಕೆಟ್‌ ಗೊಂಚಲುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.  ಈಚೆಗೆ ವೆಸ್ಟ್‌ ಇಂಡೀಸ್‌ ತಂಡದ ಎದುರಿನ ಸರಣಿಯ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್‌ ಕೂಡ ಗಳಿಸಿದರು.

ವಿದೇಶಿ ನೆಲದ ಸಾಧಕ
ಬೂಮ್ರಾ ಸಾಧನೆಯ ಹಾದಿ ಇನ್ನೊಂದು ವಿಶೇಷ ಏನು ಗೊತ್ತಾ? ಅವರು ಇದುವರೆಗೆ ಭಾರತದಲ್ಲಿ ಒಂದೇ ಒಂದು ಪಂದ್ಯ ಆಡಿಲ್ಲ. ಎಲ್ಲ ಪಂದ್ಯಗಳನ್ನೂ ಅವರು ಆಡಿರುವುದು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ದೇಶಗಳಲ್ಲಿ. ಮಧ್ಯಮ ವೇಗಿಗಳಿಗೆ ನೆರವು ನೀಡುವ ಪಿಚ್‌ ಗಳು ಅಲ್ಲಿವೆ. ಆದರೆ, ಅ ಪಿಚ್‌ ಗಳಿಗೆ ಹೊಂದಿಕೊಂಡು ಬೌಲಿಂಗ್‌ ಮಾಡುವುದು ಕೂಡ ಕಷ್ಟಸಾಧ್ಯವಾದ ಸಾಧನೆ.

ವಿಂಡೀಸ್ ನಲ್ಲಿ ವಿಪರೀತ ಬಿಸಿಲಿನಲ್ಲಿ ಪಿಚ್‌ ವರ್ತಿಸಿದ ರೀತಿಯನ್ನು ನೋಡಿದ್ದೇವೆ. ಅಲ್ಲಿಯ ಬೌಲರ್‌ ಗಳೇ ಲಯ ಕಂಡುಕೊಳ್ಳಲು ಪರದಾಡಿದ್ದರು. ಆದರೆ ಅದೇ ಪಿಚ್ ನಲ್ಲಿ ಅಹಮದಾಬಾದಿನ ಹುಡುಗ ಜಸ್ಸಿ ಹ್ಯಾಟ್ರಿಕ್‌ ಮಾಡಿದ್ದರು. ಒಂದೇ ಇನಿಂಗ್ಸ್‌ ನಲ್ಲಿ ಆರು ವಿಕೆಟ್‌ ಕೂಡ ಕಬಳಿಸಿದ್ದರು. ನಾನು  ತಂಡದಲ್ಲಿ ಹೊಸಬ. ಆದ್ದರಿಂದ ಹಿರಿಯ ಆಟಗಾರರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಕಲಿಯುವ ಅವಕಾಶವನ್ನು ಬಿಡುವುದಿಲ್ಲ’ ಎಂದು ಹೇಳುವ ಬುಮ್ರಾ, ಈ ಹ್ಯಾಟ್ರಿಕ್‌ ಸಾಧನೆಯನ್ನು ನಾಯಕ ವಿರಾಟ್‌ ಕೊಹ್ಲಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ.

ಭಾರತ ತಂಡದ ಸಾಧನೆಗಳ ಇತಿಹಾಸವನ್ನು ನೋಡಿದಾಗ. ವಿದೇಶಿ ನೆಲದಲ್ಲಿ ಹೆಚ್ಚು ಯಶಸ್ವಿಯಾದ ನಾಯಕರ  ಬಳಗದಲ್ಲಿ ಪರಿಣಾಮಕಾರಿ ಮಧ್ಯಮ ವೇಗಿಗಳಿದ್ದರು. ಮೊಹಮ್ಮದ್‌ ಅಜರುದ್ದೀನ್ ಅವರಿಗೆ ಜಾವಗಲ್‌ ಶ್ರೀನಾಥ್‌ ಸೌರವ್‌ ಗಂಗೂಲಿಗೆ ಜಹೀರ್‌ ಖಾನ್‌, ಇಶಾಂತ್‌ ಶರ್ಮಾ ಅವರ ಸಾಥ್‌ ಸಿಕ್ಕಿತ್ತು. ಮಹೇಂದ್ರಸಿಂಗ್‌ ಧೋನಿ ಸಮಯದಲ್ಲಿ ಜಹೀರ್‌, ಇರ್ಫಾನ್‌,ಉಮೇಶ್‌ ಯಾದವ್, ಇಶಾಂತ್‌, ಶಮಿ, ಭುವನೇಶ್ವರ್‌ ಅವರಂತಹ ಬೌಲರ್‌ಗಳು ಮಿಂಚಿದ್ದರು.

ಮಧ್ಯಮವೇಗಿಗಳು ಗಾಯಗೊಳ್ಳುವುದು ಹೆಚ್ಚು ಅದರಲ್ಲೂ ಇಂದಿನ ಕ್ರಿಕೆಟ್ ನಲ್ಲಿ ಆಟಗಾರರು ಬಿಡುವಿಲ್ಲದೇ ಆಡುತ್ತಿದ್ದಾರೆ. ಮೂರೂ ಮಾದರಿಗಳಲ್ಲಿ ದೇಶಿ-ವಿದೇಶಿ ಟೂರ್ನಿ ಇದೆಲ್ಲದರಲ್ಲಿಯೂ ಮಿಂಚುವ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಸವಾಲು ಮಧ್ಯಮ ವೇಗಿಗಳಿಗೆ ಇದೆ. ಬ್ಯಾಟ್ಸ್‌ಮನ್‌ ಗಳಿಗೆ ಸಿಕ್ಕಷ್ಟು ತಾರಾಮೌಲ್ಯ ಬೌಲರ್‌ಗಳಿಗೆ ಸಿಗುವುದು ಕಡಿಮೆ. ಕಪಿಲ್, ಶ್ರೀನಾಥ್‌, ಜಹೀರ್‌ ಅವರು ಆ ಸಾಧನೆ ಮಾಡಿದ ಪ್ರಮುಖರು.

ಇದೀಗ ಬುಮ್ರಾ ಅದೇ ಹಾದಿಯಲ್ಲಿದ್ದಾರೆ. ಇಂಗ್ಲೆಂಡ್‌ನ‌ ಜೋಫ್ರಾ ಆರ್ಚರ್‌, ಆ್ಯಂಡರ್ಸನ್‌  ಸ್ಟುವರ್ಟ್‌ ಬ್ರಾಡ್‌, ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌.  ನ್ಯೂಜಿಲ್ಯಾಂಡ್‌ನ‌  ಟ್ರೆಂಟ್‌ ಬೌಲ್ಟ್, ಟಿಮ್‌ ಸೌಥಿ, ಪಾಕಿಸ್ಥಾನದ ಮೊಹಮ್ಮದ್‌ ಆಮಿರ್‌, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಲುಂಗಿ ಗಿಡಿ ಅವರ ಪೈಪೋಟಿಯೂ ಬೂಮ್ರಾಗೆ ಇದೆ.  ಸದ್ಯಕ್ಕಂತೂ ಅವರೆಲ್ಲರನ್ನೂ ಹಿಂದಿಕ್ಕಿ ಮುಂದೆ ಸಾಗುತ್ತಿರುವ ಬುಮ್ರಾ ಎಷ್ಟು ಸಮಯದವರೆಗೆ ಉತ್ತುಂಗ ಶಿಖರದಲ್ಲಿ ಮೆರೆಯುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿ ವಲಯದಲ್ಲಿ ಗರಿಗೆದರಿದೆ.

ನೋಬಾಲ್‌ ಕಳಂಕಮೀರಿದ ಸಾಧಕ
ಎರಡು ವರ್ಷಗಳ ಹಿಂದೆ ಪಂದ್ಯದ ಮಹತ್ವದ ಘಟ್ಟದಲ್ಲಿ ನೋಬಾಲ್‌ ಎಸೆತಗಳನ್ನು ಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಬೂಮ್ರಾ. ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಅವರ ಈ ನೋಬಾಲ್‌ ಭಾರತ ತಂಡದ ಗೆಲುವಿಗೂ ಅಡ್ಡಿಯಾಗಿತ್ತು.  ಆದರೆ ಸತತ ಪರಿಶ್ರಮ ಮತ್ತು ಛಲದಿಂದ ಆ ದೌರ್ಬಲ್ಯವನ್ನು ಮೀರಿ ನಿಂತರು.

ತಮ್ಮ ಬೌಲಿಂಗ್‌ ಲೈನಪ್‌ ನಲ್ಲಿ ತುಸು ಬದಲಾವಣೆ ಮಾಡಿಕೊಂಡ ಅವರು ಮೊದಲಿಗಿಂತಲೂ ಪರಿಣಾಮಕಾರಿ ಬೌಲರ್‌ ಆಗಿ ರೂಪುಗೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಶ್ರೇಯಾಂಕ ಗಳಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಬೂಮ್ರಾ ತನ್ನ ಮಿಂಚನ್ನು ಹರಿಸಿದ್ದರು

– ಅಭಿ

ಟಾಪ್ ನ್ಯೂಸ್

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Max movie review

Max movie review: ಮಾಸ್‌ ಮನಸುಗಳಿಗೆ ʼಮ್ಯಾಕ್ಸ್‌ʼ ಅಭಿಷೇಕ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

Pro Kabaddi League-11: ಇಂದು ಎಲಿಮಿನೇಟರ್‌ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

ICC : 904 ರೇಟಿಂಗ್‌ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್‌ ಬುಮ್ರಾ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

3-madikeri

Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.