ಸ್ಪಿನ್ ಟ್ರ್ಯಾಕ್ನಲ್ಲಿ ಮಿಂಚಿದ ಪೇಸರ್: ಕೊಹ್ಲಿ ಖುಷ್
Team Udayavani, Oct 7, 2019, 5:52 AM IST
ಭಾರತದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪೇಸ್ ಬೌಲರ್ಗಳ ಸಾಧನೆಯನ್ನು ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ. ಸ್ಪಿನ್ ಟ್ರ್ಯಾಕ್ನಲ್ಲಿ ಮಿಂಚಿದ ಪೇಸ್ ಬೌಲಿಂಗ್ ಸಾಹಸಕ್ಕೆ ಶಾಬಾಸ್ ಹೇಳಿದ್ದಾರೆ.
“ಇದು ಸ್ಪಿನ್ ಟ್ರ್ಯಾಕ್ ಆಗಿತ್ತು. ಹೀಗಾಗಿ ವೇಗಿಗಳಿಗೆ ಇಲ್ಲಿ ಸಣ್ಣ ಸ್ಪೆಲ್ಗಳಷ್ಟೇ ಲಭಿಸುತ್ತಿತ್ತು. ಇದರಲ್ಲೂ ಅವರು ನೂರು ಪ್ರತಿಶತ ಸಾಧನೆಯೊಂದಿಗೆ ಮಿಂಚಿದರು. ಶಮಿ 5 ವಿಕೆಟಿಗೆ ಕೇವಲ 10 ಚಿಲ್ಲರೆ ಓವರ್ಗಳನ್ನಷ್ಟೇ ತೆಗೆದುಕೊಂಡರು’ ಎಂದರು.
“ಸ್ಪಿನ್ನರ್ಗಳೇ ವಿಕೆಟ್ ಕೀಳುವುದು ಎಂದಾದರೆ ತಮಗೇನು ಕೆಲಸ ಎಂದು ಪೇಸ್ ಬೌಲರ್ ಭಾವಿಸಿದರೆ ಅವರಿಗೆ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದು. ಲಭಿ ಸಿದ ಅವಕಾಶವನ್ನೇ ಬಳಸಿಕೊಳ್ಳುವುದು ಜಾಣತನ.
ಇಲ್ಲಿ ಶಮಿ, ಇದಕ್ಕೂ ಮೊದಲು ಬುಮ್ರಾ, ಇಶಾಂತ್, ಉಮೇಶ್ ಯಾದವ್ ಅವರೆಲ್ಲ ಇದಕ್ಕೆ ನಿದರ್ಶನವಾಗಿದ್ದಾರೆ’ ಎಂದು ಕೊಹ್ಲಿ ಹೇಳಿದರು.
ತಂಡದ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, “ಈ ಪಂದ್ಯದಲ್ಲಿ ಮಾಯಾಂಕ್ ಮತ್ತು ರೋಹಿತ್ ಅದ್ಭುತ ಪ್ರದರ್ಶನ ನೀಡಿದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಪೂಜಾರ ಉತ್ತಮ ಬ್ಯಾಟಿಂಗ್ ನಡೆಸಿದರು’ ಎಂದರು.
ಸೋಲಿಗೆ ಶಮಿಯೇ ಕಾರಣ!
ತಮ್ಮ ಸೋಲಿಗೆ ಮೊಹಮ್ಮದ್ ಶಮಿ ಅವರ ಘಾತಕ ಬೌಲಿಂಗೇ ಕಾರಣ ಎಂದವರು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾ ಡು ಪ್ಲೆಸಿಸ್.
“ಸೆಕೆಂಡ್ ಇನ್ನಿಂಗ್ಸ್ ಚೇಸಿಂಗ್ ಯಾವತ್ತೂ ಕಠಿನ. 4ನೇ ದಿನದ ತನಕ ನಾವು ಉತ್ತಮ ಪ್ರದರ್ಶನವನ್ನೇ ಕಾಯ್ದುಕೊಂಡು ಬಂದಿ ದ್ದೆವು. ಆದರೆ ಇಂದು ಎಲ್ಲವೂ ತಲೆ ಕೆಳಗಾ ಯಿತು. ಮೊಹಮ್ಮದ್ ಶಮಿ ಘಾತಕವಾಗಿ ಪರಿಣಮಿಸಿ ಪಂದ್ಯದ ವ್ಯತ್ಯಾಸಕ್ಕೆ ಕಾರಣ ರಾದರು’ ಎಂದು ಡು ಪ್ಲೆಸಿಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.