ದಿನಗೂಲಿ ಮಾಡುತ್ತಿದ್ದ ಚಿನ್ನ ವಿಜೇತನಿಗೆ ಕೇಂದ್ರ ನೆರವು
Team Udayavani, Jul 25, 2018, 6:00 AM IST
ಹೊಸದಿಲ್ಲಿ: ದೇಶದ ಕ್ರೀಡಾಪಟುಗಳ ದುಃಸ್ಥಿತಿಗೆ ಇದು ಮತ್ತೂಂದು ಉದಾಹರಣೆ. 2008ರಲ್ಲಿ ನಡೆದ ದಕ್ಷಿಣ ಏಶ್ಯ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಭಾರತದ ಬಿಲ್ಗಾರ ಅಶೋಕ್ ಸೊರೆನ್ ಈಗ ದಿನಗೂಲಿ ನೌಕರನಾಗಿ ಜೀವನ ಸವೆಸುತ್ತಿದ್ದಾರೆ. ಇವರ ದುಃಸ್ಥಿತಿ ಕೇಂದ್ರ ಸರಕಾರದ ಗಮನಕ್ಕೆ ಬಂದ ಕಾರಣ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ.
ಪ್ರಸ್ತುತ ಜಾರ್ಖಂಡ್ನ ಜಮ್ಶೆಡ್ಪುರದಲ್ಲಿರುವ 28 ವರ್ಷದ ಅಶೋಕ್ ಸೊರೆನ್ ಕೇಂದ್ರ ಸರಕಾರದ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೇಂದ್ರ ಸರಕಾರದ ನೆರವಿನಿಂದ ಸೊರೆನ್ ನಿಟ್ಟುಸಿರು ಬಿಟ್ಟಿದ್ದಾರೆ.
ಸೊರೆನ್ ಜತೆಗೆ ಅರ್ಜುನ ಪ್ರಶಸ್ತಿ ವಿಜೇತ ಬಿಲ್ಗಾರ ಲಿಂಬಾರಾಮ್ ಅವರಿಗೂ 5 ಲಕ್ಷ ರೂ. ನೆರವನ್ನು ಕೇಂದ್ರ ನೀಡಿದೆ. ಲಿಂಬಾರಾಮ್ ನ್ಯೂರೋಡೀಜನರೇಟಿವ್ ಎಂಬ ರೋಗದಿಂದ ಬಳಲುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.