ಟೋಕಿಯೊ ಎಂಬ ಬೆಳಕಿಂಡಿಯಿಂದ ಕಂಡಾಗ…
ಭಾರತದ 2021ರ ಕ್ರೀಡಾ ಭರವಸೆ
Team Udayavani, Jan 1, 2021, 7:23 AM IST
2020ರ ಆಗಮನವಾದಾಗ ಕ್ರೀಡಾಲೋಕದ ಮೇಲೆ ಬೆಳ್ಳಿರೇಖೆಯೊಂದು ಹಾದು ಹೋಗಿತ್ತು. ಆ ಟ್ವೆಂಟಿ-ಟ್ವೆಂಟಿ ಹೆಸರಲ್ಲೇ ಅದ್ಭುತ ಸೆಳೆತವಿತ್ತು. 2020ರಲ್ಲೇ ಟಿ20 ವಿಶ್ವಕಪ್ ನಡೆಯಲಿತ್ತು ಎಂಬುದು ಕಾಕತಾಳೀಯ. ಜತೆಗೆ ಟೋಕಿಯೊ ಒಲಿಂಪಿಕ್ಸ್ ಗೂ ಸ್ವಾಗತ ಕೋರಬೇಕಿತ್ತು. ಹೀಗೆ… ಕ್ರೀಡಾಪ್ರೇಮಿಗಳು ಈ ಕ್ರೀಡಾಪರ್ವವನ್ನು ಆಸ್ವಾದಿಸಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಕೊರೊನಾ ಬೌನ್ಸರ್‌ಗೆ ತತ್ತರಿಸಿದ ಜಾಗತಿಕ ಕ್ರೀಡಾಕೂಟಗಳೆಲ್ಲ ಒಂದೊಂದಾಗಿ ರದ್ದುಗೊಂಡವು, ಇಲ್ಲವೇ ಮುಂದೂಡಲ್ಪಟ್ಟವು. ಮುಂದಿನದು 2021ರ ಭರವಸೆ. 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್, ಟಿ20 ವಿಶ್ವಕಪ್ ಜತೆಗೆ ಹೊಸತಾಗಿ ಸೇರ್ಪಡೆಯಾದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳೆಲ್ಲ ಮರು ನಿರೀಕ್ಷೆಯನ್ನು ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ಭಾರತದ ಕ್ರೀಡಾ ಸಾಧನೆ ಹೇಗಿದ್ದೀತು ಎಂಬುದರ ಒಂದು ಮುನ್ನೋಟ.
ಒಲಿಂಪಿಕ್ಸ್ ಮಿಂಚುಗಳು
ವಿಶ್ವದ ಮಹಾನ್ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಿಂದಲೇ ಆರಂಭಿಸುವುದಾದರೆ ಭಾರತಕ್ಕೆ ಎಷ್ಟು ಪದಕ ಬಂದೀತು ಎಂಬುದು ಮೊದಲ ಕೌತುಕ. ಇನ್ನೂ ಕೆಲವು ಪ್ರಮುಖ ಕ್ರೀಡಾಕೂಟಗಳ ಅರ್ಹತಾ ಸುತ್ತು ಮುಗಿದಿಲ್ಲವಾದರೂ ಲೆಕ್ಕಾಚಾರಕ್ಕೇನೂ ಅಡ್ಡಿ ಇಲ್ಲ. ಕುಸ್ತಿ, ಶೂಟಿಂಗ್, ಬ್ಯಾಡ್ಮಿಂಟನ್ ಮತ್ತು ಟೆನಿಸ್ ಸ್ಪರ್ಧೆಗಳು ಭಾರತದ ಪದಕದ ದೃಷ್ಟಿಯಿಂದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಹಾಕಿ ಬಗ್ಗೆ ಇದೇ ಮಾತನ್ನು ಹೇಳುವಂತಿಲ್ಲ. ಭಾರತವೀಗ ಹಾಕಿಯಲ್ಲಿ ಹಿಂದುಳಿದ ರಾಷ್ಟ್ರ. ಪ್ರಬಲ ಯೂರೋಪ್ ರಾಷ್ಟ್ರಗಳನ್ನು ಮಣಿಸಿ ನಾಕೌಟ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆಯಾದೀತು.
ಶೂಟಿಂಗ್‌ಗೆ ಮನು
ಶೂಟಿಂಗ್‌ನಲ್ಲಿ ಯುವ ತಾರೆ ಮನು ಭಾಕರ್ ಪದಕವೊಂದಕ್ಕೆ ಗುರಿ ಇಡಬಹುದೆಂಬ ನಿರೀಕ್ಷೆ ಬಹಳವಿದೆ. 4 ಐಎಸ್‌ಎಸ್‌ಎಫ್ ಚಿನ್ನದ ಜತೆಗೆ ಏಶ್ಯನ್ ಶೂಟಿಂಗ್‌ನ ಮತ್ತೆರಡು ಸ್ವರ್ಣ ಸಾಧನೆ ಎನ್ನುವುದು ಮನು ಅವರ ಒಲಿಂಪಿಕ್ಸ್ ಪದಕವೊಂದಕ್ಕೆ ಸ್ಫೂರ್ತಿಯಾಗಬೇಕಿದೆ.
ಕುಸ್ತಿಯ ಆಸ್ತಿ
ಕುಸ್ತಿಯಲ್ಲಿ ವಿನೇಶ್ ಫೋಗಾಟ್ ಮತ್ತು ಭಜರಂಗ್ ಪೂನಿಯ ಮೇಲೆ ದೇಶ ಭಾರೀ ಭರವಸೆ ಇರಿಸಿದೆ. ರಿಯೋ ಒಲಿಂಪಿಕ್ಸ್‌ನಲ್ಲಿ ವಿನೇಶ್ ಕ್ವಾರ್ಟರ್ ಫೈನಲ್ ತನಕ ಬಂದಿದ್ದರು. ಆದರೆ ಇಲ್ಲಿಂದ ಮುಂದೆ ವಿನೇಶ್ ಸಾಧನೆ ಗಮನಿಸಿದಾಗ ಟೋಕಿಯೊ ಪದಕವೊಂದನ್ನು ಕತ್ತೆತ್ತಿ ನೋಡುವಂತೆ ಮಾಡಿದೆ. 2018ರ ಏಶ್ಯಾಡ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಗಳೆರಡರಲ್ಲೂ ಅವರು ಬಂಗಾರಕ್ಕೆ ಕೊರಳೊಡ್ಡಿದ್ದರು. ಈ ಸಾಲಿಗೆ ಟೋಕಿಯೊ ಪದಕವೂ ಸೇರಲಿ ಎಂಬುದೊಂದು ಹಾರೈಕೆ. ಪುರುಷರ ಕುಸ್ತಿಯಲ್ಲಿ ಭಜರಂಗ್ ಪೂನಿಯ ಭಾರತದ ಸ್ಟಾರ್ ರೆಸ್ಲರ್. ಏಶ್ಯಾಡ್ ಮತ್ತು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸಾಧಕ. ವಿಶ್ವ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಜರಂಗ್, ಇದೇ ಸಾಧನೆಯನ್ನು ಟೋಕಿಯೊದಲ್ಲಿ ಪುನರಾವರ್ತಿಸಿದರೆ ಪದಕವೊಂದು ಕೈ ಹಿಡಿದೀತು.
ಬ್ಯಾಡ್ಮಿಂಟನ್ ಭರವಸೆ
ರಿಯೋದಲ್ಲಿ ಗೆದ್ದ ಬೆಳ್ಳಿಗೆ ಹಳದಿ ಹೊಳಪು ನೀಡಲು ಪಿ.ವಿ. ಸಿಂಧು ಕಾತರದಿಂದ ಇದ್ದಾರೆ. ಆದರೆ ಇದು ಭಾರೀ ಸವಾಲಿನ ಕೆಲಸ. ಅವರ 2021ರ ಮೊದಲರ್ಧದ ಫಾರ್ಮ್ ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಕ್ರಿಕೆಟ್ ಕನವರಿಕೆ
2021ರ ವಿಶೇಷ ಕ್ರಿಕೆಟ್ ಆಕರ್ಷಣೆಯೆಂದರೆ, ಭಾರತದ ಆತಿಥ್ಯದಲ್ಲೇ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿ. 5 ವರ್ಷ ಗಳ ಸುದೀರ್ಘ ವಿರಾಮದ ಬಳಿಕ ಈ ಕೂಟ ನಡೆಯಲಿದೆ. 2007ರ ಆರಂಭಿಕ ವಿಶ್ವಕಪ್ ಬಳಿಕ ಭಾರತ ಮತ್ತೆ ಚಾಂಪಿಯನ್ ಆದದ್ದಿಲ್ಲ. ಹೀಗಾಗಿ ತವರಿನಲ್ಲಿ ಇಂಥದೊಂದು ಕ್ಷಣವನ್ನು ಕಣ್ತುಂಬಿಸಿಕೊಳ್ಳುವುದು ಕ್ರಿಕೆಟ್ ಅಭಿಮಾನಿಗಳ ಬಯಕೆ. ಹಾಗೆಯೇ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಕೂಡ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಸದ್ಯ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಭಾರತ ತಂಡಗಳ ನಡುವೆ ಫೈನಲ್ ಪ್ರವೇಶಕ್ಕೆ ತುರುಸಿನ ಸ್ಪರ್ಧೆ ಇದೆ. 60, 50 ಹಾಗೂ 20 ಓವರ್‌ಗಳ ವಿಶ್ವಕಪ್ ಗೆದ್ದ ಭಾರತಕ್ಕೆ ಟೆಸ್ಟ್ ವರ್ಲ್ಡ್ಕಪ್ ಟ್ರೋಫಿಯೊಂದು ಭಾರವೇ?!
ಐಪಿಎಲ್ ಎಲ್ಲಿ?
2020ರಲ್ಲಿ ಬಹುತೇಕ ಕ್ರೀಡೆಗಳಿಗೆ ಕೊರೊನಾ ಕಂಟಕ ಎದುರಾಗಿರಬಹುದು, ಆದರೆ ಐಪಿಎಲ್ ಮಾತ್ರ ಇದನ್ನು ಮೀರಿ ನಿಂತು ಯಶಸ್ಸು ಕಂಡಿದೆ. ಯುಎಇಯಲ್ಲಿ ನಡೆದರೂ ಪ್ರೇಕ್ಷಕರಿಗೆ ನಿರ್ಬಂಧವಿದ್ದರೂ ಐಪಿಎಲ್ ವರ್ಚಸ್ಸಿಗೆ ಯಾವುದೇ ಹಾನಿ ಯಾಗಿಲ್ಲ. 2021ರ ಪ್ರಶ್ನೆಯೆಂದರೆ, ಐಪಿಎಲ್ ಭಾರತದಲ್ಲೇ ನಡೆದೀತೇ, ವೀಕ್ಷಕರಿಗೆ ಪ್ರವೇಶ ಲಭಿಸೀತೇ ಎಂಬುದು. ಬೇರೆಲ್ಲ ಟಿ20 ಲೀಗ್‌ಗಳು ಆಯಾ ದೇಶದಲ್ಲೇ ನಡೆಯುತ್ತಿರುವಾಗ ಐಪಿಎಲ್ ಕೂಟವನ್ನು ಗಡೀಪಾರು ಮಾಡಬೇಕೇಕೆ?!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ದಬಾಂಗ್ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್
India Vs Newzeland Test: ವಾಂಖೇಡೆ: ರೋಹಿತ್ ಶರ್ಮಾ ಪಡೆಗೆ ಅಗ್ನಿಪರೀಕ್ಷೆ
IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್ ಲಿಸ್ಟ್
WPL: ಬೆಂಗಳೂರು ವನಿತಾ ತಂಡದ ಪಾಲಾದ ಇಂಗ್ಲೆಂಡ್ ಆಲ್ ರೌಂಡರ್ ವ್ಯಾಟ್
IPL: ನಾಯಕತ್ವ ವಿಚಾರದಲ್ಲಿ ಬಿರುಕು: ಡೆಲ್ಲಿ ಫ್ರಾಂಚೈಸಿ ತೊರೆಯಲು ಪಂತ್ ನಿರ್ಧಾರ
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.