ದ್ವಿತೀಯ ಟೆಸ್ಟ್ : ಶ್ರೀಲಂಕಾ 338 ಆಲೌಟ್; ದಿನೇಶ್ ಚಂಡಿಮಾಲ್ ಶತಕ
Team Udayavani, Mar 17, 2017, 10:48 AM IST
ಕೊಲಂಬೊ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು 338 ರನ್ ಗಳಿಸಿ ಆಲೌಟಾಗಿದೆ.
ಇದಕ್ಕುತ್ತರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶವು ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿದ್ದು 214 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಪ್ರವಾಸಿ ತಂಡ ಇನ್ನೂ 124 ರನ್ ಗಳಿಸಬೇಕಾಗಿದೆ.
7 ವಿಕೆಟಿಗೆ 238 ರನ್ನಿನಿಂದ ದ್ವಿತೀಯ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡವನ್ನು ಚಂಡಿಮಾಲ್ ಆಧ ರಿಸಿದರು. ಅವರ ಸೊಗಸಾದ ಶತಕದಿಂದಾಗಿ ತಂಡ ಉತ್ತಮ ಮೊತ್ತ ಪೇರಿಸುವಂತಾಯಿತು. 86 ರನ್ನಿನಿಂದ ಆಟ ಮುಂದುವರಿಸಿದ ಚಂಡಿಮಾಲ್ ಟೆಸ್ಟ್‌ನಲ್ಲಿ 8ನೇ ಶತಕ ದಾಖಲಿಸಿ ಸಂಭ್ರಮಿಸಿದರು. 9ನೆಯವರಾಗಿ ಔಟಾ ಗುವ ಮೊದಲು 300 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 138 ರನ್ ಗಳಿಸಿದರು. ಚಂಡಿಮಾಲ್ ಬಾಲಂಗೋಚಿಗಳ ನೆರವಿ ನಿಂದ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಲು ಯಶಸ್ವಿ ಯಾದರು. 195 ರನ್ ತಲುಪಿದಾಗ ತಂಡ 7 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಅಂತಿಮ ಮೂರು ವಿಕೆಟ್ ಕಳೆದುಕೊಂಡಾಗ ತಂಡ 143 ರನ್ ಪೇರಿಸಿತ್ತು. ಇದರಿಂದಾಗಿ ತಂಡ 338 ರನ್ ಗಳಿಸಿ ಆಲೌಟಾಯಿತು.
ಬಾಂಗ್ಲಾ ದಿಟ್ಟ ಉತ್ತರ: ಈ ಟೆಸ್ಟ್ ಬಾಂಗ್ಲಾ ಪಾಲಿಗೆ 100ನೇ ಟೆಸ್ಟ್ ಪಂದ್ಯವಾಗಿದೆ. ಈ ಐತಿಹಾಸಿಕ ಪಂದ್ಯ ದಲ್ಲಿ ಬಾಂಗ್ಲಾದ ಆರಂಭಿಕರಾದ ತಮಿಮ್ ಇಕ್ಬಾಲ್ ಮತ್ತು ಸೌಮ್ಯ ಸರ್ಕಾರ್ ಮೊದಲ ವಿಕೆಟಿಗೆ 95 ರನ್ನು ಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡಕ್ಕೆ ಆಸರೆ ಯಾಗಿದ್ದಾರೆ. 49 ರನ್ ಗಳಿಸಿದ ಇಕ್ಬಾಲ್ ಮೊದಲಿಗ ರಾಗಿ ಔಟಾದರು. ಸರ್ಕಾರ್ ಮತ್ತು ಇಮ್ರುಲ್ ಕಯಿಸ್ ಮತ್ತೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಇವರಿಬ್ಬರ ಪತನದ ಬಳಿಕ ತಂಡ ಮತ್ತೆ ಎರಡು ವಿಕೆಟನ್ನು ಬೇಗನೇ ಕಳೆದುಕೊಂಡಿದ್ದರಿಂದ ಒತ್ತಡಕ್ಕೆ ಸಿಲುಕಿತು.
ದಿನದಾಟದ ಅಂತ್ಯಕ್ಕೆ ತಂಡ 5 ವಿಕೆಟಿಗೆ 214 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ತಂಡ 124 ರನ್ ಗಳಿಸಬೇಕಾಗಿದೆ.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 338 (ದಿನೇಶ್ ಚಂಡಿಮಾಲ್ 138, ದನಂಜಯ ಡಿ’ಸಿಲ್ವ 34, ನಿರೋಶಾನ್ ಡಿಕ್ವೆಲ್ಲ 34, ರಂಗನ ಹೆರಾತ್ 25, ಸುರಂಕ ಲಕ್ಮಲ್ 35, ಮುಸ್ತಾಫಿಜುರ್ ರೆಹಮಾನ್ 50ಕ್ಕೆ 2, ಸುಭಾಷಿಷ್ ರಾಯ್ 53ಕ್ಕೆ 2, ಮೆಹದಿ ಹಸನ್ ಮಿರಾಜ್ 90ಕ್ಕೆ 3, ಶಕಿಮ್ ಅಲ್ ಹಸನ್ 80ಕ್ಕೆ 2); ಬಾಂಗ್ಲಾದೇಶ 5 ವಿಕೆಟಿಗೆ 214 (ತಮಿಮ್ ಇಕ್ಬಾಲ್ 49, ಸೌಮ್ಯ ಸರ್ಕಾರ್ 61, ಇಮ್ರುಲ್ ಕಯಿಸ್ 34, ಶಬ್ಬೀರ್ ರೆಹಮಾನ್ 42, ಲಕ್ಷಣ್ ಸಂಡಕನ್ 65ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.