ಅಭಿಮನ್ಯು ದ್ವಿಶತಕ, ಒತ್ತಡದಲ್ಲಿ ಸಿಂಹಳೀಯರು

ಆತಂಕದಲ್ಲಿ ಶ್ರೀಲಂಕಾ 'ಎ' 622ರನ್‌ಗೆ ಡಿಕ್ಲೇರ್‌ ಘೋಷಿಸಿದ ಭಾರತ 'ಎ' ತಂಡ

Team Udayavani, May 27, 2019, 6:06 AM IST

26BGV-11

ಬೆಳಗಾವಿ: ಅಭಿಮನ್ಯು ಈಶ್ವರನ್‌ ದ್ವಿಶತಕ (233 ರನ್‌) ಹಾಗೂ ಅನ್ಮೋಲ್ಪ್ರೀತ್‌ ಸಿಂಗ್‌ ಅಜೇಯ ಶತಕ (116 ರನ್‌) ನೆರವಿನಿಂದ ಶ್ರೀಲಂಕಾ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ‘ಎ’ 5 ವಿಕೆಟ್‌ಗೆ 622ಕ್ಕೆ ಡಿಕ್ಲೇರ್‌ ಮಾಡಿಕೊಂಡಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಪ್ರವಾಸಿ ಲಂಕಾ ಆಟಗಾರರು ಭಾರೀ ವೈಫಲ್ಯ ಕಂಡರು. ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಲಂಕಾ 2ನೇ ದಿನದಾಟದ ಅಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡು 83 ರನ್‌ ಗಳಿಸಿ ಆತಂಕದಲ್ಲಿದೆ.

ಇಲ್ಲಿಯ ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ಬೃಹತ್‌ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ದ್ವಿಶತಕ ಬಾರಿಸಿದ ಅಭಿಮನ್ಯು ಒಟ್ಟಾರೆ 500 ನಿಮಿಷ ಕ್ರೀಸ್‌ನಲ್ಲಿ ನೆಲೆನಿಂತರು. 22 ಬೌಂಡರಿ, 3 ಸಿಕ್ಸರ್‌ ನೆರವಿನಿಂದ 317 ಎಸೆತಗಳಲ್ಲಿ 233 ರನ್‌ ಗಳಿಸಿದರು. ಅನ್ಮೋಲ್ಪ್ರೀತ್‌ ಶತಕ ಹಾಗೂ ಎಸ್‌.ಡಿ.ಲಾಡ್‌ 76 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು.

ಕುಸಿದ ಶ್ರೀಲಂಕಾ ‘ಎ’: ಶ್ರೀಲಂಕಾ ‘ಎ’ ಮೊದಲ ಇನಿಂಗ್‌ನ ಆರಂಭದಲ್ಲಿಯೇ ಮುಗ್ಗರಿಸಿತು. ಮಧ್ಯಾಹ್ನ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಎರಡನೇ ಮುಕ್ತಾಯದೊಳಗೆ 4 ವಿಕೆಟ್ ಕಳೆದುಕೊಂಡು ವೈಫಲ್ಯ ಪ್ರದರ್ಶನ ನೀಡಿತು. ಶಿವಂ ದುಬೆ ಹಾಗೂ ಸಂದೀಪ್‌ ವಾರಿಯರ್‌ ಬೌಲಿಂಗ್‌ಗೆ ಲಂಕಾ ತಂಡ ಮುಗ್ಗರಿಸಿತು. ಎದುರಾಳಿಗಳ ಬೌಲಿಂಗ್‌ಗೆ ನಲುಗಿದ ಆರಂಭಿಕ ಆಟಗಾರ ಸಂಗೀತ ಕೂರೆ(0) ಎರಡನೇ ಓವರ್‌ನಲ್ಲಿ ವಾರಿಯರ್‌ ಎಸೆತದಲ್ಲಿ ಬೌಲ್ಡ್ ಆದರು. ಭಾನುಕಾ ರಾಜಪಕ್ಷ(0) ಕೂಡ ಒಂದೇ ಎಸೆತ ಎದುರಿಸಿ ಶಿವಮ್‌ ದುಬೆ ಬಾಲಿಂಗ್‌ನಲ್ಲಿ ಪಾಂಚಾಲ್ಗೆ ಕ್ಯಾಚ್ ನೀಡಿದರು. ದುಬೆ ಹಾಗೂ ವಾರಿಯರ್‌ ತಲಾ 2 ವಿಕೆಟ್ ಕಬಳಿಸಿ ಲಂಕೆಯ ಆಟಗಾರರ ಬೆವರಿಳಿಸಿದರು. ಸದೀರಾ ಸಮರವಿಕ್ರಮ್‌ 56 ಎಸೆತ ಎದುರುಸಿ 31 ರನ್‌ ಗಳಿಸಿ ಔಟಾದರು. ನಾಯಕ ಆಶನ್‌ ಪ್ರಿಯರಂಜನ್‌ ಹಾಗೂ ನಿರೋಶನ್‌ ಡಿಕ್‌ವೆಲ್ಲಾ ತಲಾ 22 ರನ್‌ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’ 1ನೇ ಇನಿಂಗ್ಸ್‌ 622/5 (ಅಭಿಮನ್ಯು 233, ಅನ್ಮೋಲ್ಪ್ರೀತ್‌ 116*, ಫ‌ರ್ನಾಂಡೊ 83ಕ್ಕೆ2), ಶ್ರೀಲಂಕಾ ‘ಎ’ 1ನೇ ಇನಿಂಗ್ಸ್‌ 28 ಓವರ್‌ಗೆ 83/4 (ಸಮರವಿಕ್ರಮ 31, ನಿರೋಶನ್‌ 22*,ಶಿವಂ ದುಬೆ 11ಕ್ಕೆ2)

-ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

1-qwewqe

Varanasi; ಇದೇನಾ ‘ಸ್ವಚ್ಛ ಭಾರತ’?: ಫೋಟೋ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ ಅಖಿಲೇಶ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

INDvsBAN: ಟೆಸ್ಟ್‌ ನಲ್ಲಿ ಟಿ20ಯಂತೆ ಬ್ಯಾಟ್‌ ಬೀಸಿದ ಭಾರತ; ರೋಚಕತೆಯತ್ತ ಪಂದ್ಯ

INDvsBAN: ಟೆಸ್ಟ್‌ ನಲ್ಲಿ ಟಿ20ಯಂತೆ ಬ್ಯಾಟ್‌ ಬೀಸಿದ ಭಾರತ; ರೋಚಕತೆಯತ್ತ ಪಂದ್ಯ

INDvsBAN; ಮುಗಿಯಿತು ಮಳೆಯಾಟ, ಇನ್ನು ಟೆಸ್ಟ್‌ ಪಂದ್ಯಾಟ; ಕಾನ್ಪುರದಲ್ಲಿ ಪಂದ್ಯಾರಂಭ

INDvsBAN; ಮುಗಿಯಿತು ಮಳೆಯಾಟ, ಇನ್ನು ಟೆಸ್ಟ್‌ ಪಂದ್ಯಾಟ; ಕಾನ್ಪುರದಲ್ಲಿ ಪಂದ್ಯಾರಂಭ

1-asdadad

IPL; ತಂಡಗಳಲ್ಲಿ ಉಳಿದುಕೊಳ್ಳಬಲ್ಲ ಸಂಭಾವ್ಯ ಆಟಗಾರರು ಯಾರ್ಯಾರು?

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

modi (4)

PM Modi ಯಿಂದ ನೆತನ್ಯಾಹುಗೆ ಕರೆ:ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ..

arre

Kumble: ಮಾವನ ಕೊಲೆಗೆ ಯತ್ನ: ಆರೋಪಿ ಬಂಧನ

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

5

Malpe: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.