ಮ್ಯಾಚ್ ಫಿಕ್ಸಿಂಗ್ ಸಾಬೀತು:ಚಾಮರ ಸಿಲ್ವಾಗೆ ನಿಷೇಧ
Team Udayavani, Sep 18, 2017, 6:05 AM IST
ಕೊಲಂಬೊ: ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮಾಜಿ ಕ್ರಿಕೆಟಿಗ ಚಾಮರ ಸಿಲ್ವ ಅವರಿಗೆ 2 ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ಕೂಟದ ವೇಳೆ ಸಿಲ್ವ ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಆರೋಪ ಎದುರಿಸಿದ್ದರು.
ಈಗ ಸಿಲ್ವ ಮೇಲಿನ ಆರೋಪ ದೃಢಪಟ್ಟಿದೆ. ಕಳೆದ ಜನವರಿ 23ರಿಂದ 25ರ ವರೆಗೆ ನಡೆದಿದ್ದ ಪಾನಡೂರ ಕ್ರಿಕೆಟ್ ಕ್ಲಬ್ ಹಾಗೂ ಕಲುಟರ ಫಿಸಿಕಲ್ ಕಲ್ಚರ್ ಕ್ಲಬ್ ತಂಡಗಳ ನಡುವಿನ ಪಂದ್ಯದ ವೇಳೆ ಸಿಲ್ವ ಫಿಕ್ಸಿಂಗ್ ನಡೆಸಿದ್ದರು ಎನ್ನುವ ದೂರು ದಾಖಲಾಗಿತ್ತು. ಈ ಕುರಿತಂತೆ ಕಳೆದ 7 ತಿಂಗಳಿನಿಂದ ತನಿಖೆ ನಡೆಯುತ್ತಿತ್ತು. ತನಿಖಾ ವರದಿ ಬಂದಿದ್ದು, ಸಿಲ್ವ ಫಿಕ್ಸಿಂಗ್ ನಡೆಸಿರುವುದು ಖಚಿತಗೊಂಡಿದೆ.
ಚಾಮರ ಸಿಲ್ವ ಶ್ರೀಲಂಕಾ ಪರ 11 ಟೆಸ್ಟ್ ಆಡಿ ಒಂದು ಶತಕ, 2 ಅರ್ಧ ಶತಕ ಸೇರಿದಂತೆ 537 ರನ್ ಗಳಿಸಿದ್ದಾರೆ. 75 ಏಕದಿನ ಪಂದ್ಯಗಳನ್ನಾಡಿ ಒಂದು ಶತಕ, 15 ಅರ್ಧ ಶತಕ ಸೇರಿದಂತೆ 1,587 ರನ್ ಬಾರಿಸಿದ್ದಾರೆ. 16 ಟಿ-20 ಪಂದ್ಯಗಳನ್ನೂ ಆಡಿದ್ದು, 175 ರನ್ ಗಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.