ನುವಾನ್ ಪ್ರದೀಪ್ ಸರಣಿಯಿಂದಲೇ ಔಟ್
Team Udayavani, Aug 5, 2017, 6:35 AM IST
ಕೊಲಂಬೊ: ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಮತ್ತೂಬ್ಬ ಕ್ರಿಕೆಟಿಗನ ಸೇವೆಯಿಂದ ವಂಚಿತವಾಗಲಿದೆ. ತಂಡದ ಏಕೈಕ ಭರವಸೆಯ ವೇಗಿ ಎನಿಸಿದ್ದ ನುವಾನ್ ಪ್ರದೀಪ್ ಅವರೇ ಈ ನತದೃಷ್ಟ ಆಟಗಾರ.
ಕೊಲಂಬೊ ಟೆಸ್ಟ್ ಪಂದ್ಯದ ಮೊದಲ ದಿನ ಹೊಸ ಚೆಂಡನ್ನು ಕೈಗೆತ್ತಿಕೊಂಡು 4 ಎಸೆತ ಎಸೆಯುವಷ್ಟರಲ್ಲಿ ಪ್ರದೀಪ್ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿದರು. ಅನಂತರ ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ.
ಪ್ರದೀಪ್ ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾಗಿದ್ದು, ಅವರಿಗೆ ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ. ಹೀಗಾಗಿ ಭಾರತದೆದುರಿನ ಅಂತಿಮ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.
ಪ್ರದೀಪ್ ಪಂದ್ಯದ ನಡುವೆಯೇ ಹೊರಗುಳಿದದ್ದು ಲಂಕೆಗೆ ಎದುರಾದ ಭಾರೀ ಹೊಡೆತವಾಗಿದೆ. ಗಾಲೆ ಟೆಸ್ಟ್ ವೇಳೆ ಆಲ್ರೌಂಡರ್ ಅಸೇಲ ಗುಣರತ್ನೆ ಅವರಿಗೂ ಇಂಥದೇ ಕಂಟಕ ಎದುರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.