ಲಂಕೆಗೆ ಇಂದಿನಿಂದ ಮೊದಲ ಅಭ್ಯಾಸ


Team Udayavani, Nov 11, 2017, 6:35 AM IST

Sri-Lanka-team-80010.jpg

ಕೋಲ್ಕತಾ: ಭಾರತದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಪಂದ್ಯವೊಂದನ್ನು ಗೆಲ್ಲುವ ಕನಸಿನಲ್ಲಿ ವಿಹರಿಸುತ್ತಿರುವ ಶ್ರೀಲಂಕಾ ತಂಡ, ತನ್ನ ಪೂರ್ಣ ಪ್ರಮಾಣದ ಪ್ರವಾಸವನ್ನು ಶನಿವಾರದಿಂದ ಆರಂಭಿಸಲಿದೆ. ಇದು 2 ದಿನಗಳ ಅಭ್ಯಾಸ ಪಂದ್ಯವಾಗಿದ್ದು, ಪ್ರವಾಸಿಗರ ಎದುರಾಳಿ ಬೋರ್ಡ್‌ ಪ್ರಸಿಡೆಂಟ್ಸ್‌ ಇಲೆವೆನ್‌.

1982ರಲ್ಲಿ ಭಾರತದಲ್ಲೇ ತನ್ನ ಟೆಸ್ಟ್‌ ಇತಿಹಾಸದ ಮೊದಲ ಪಂದ್ಯವಾಡಿದ ಶ್ರೀಲಂಕಾ ಈವರೆಗೆ ಇಲ್ಲಿ 16 ಪಂದ್ಯಗಳನ್ನು ಆಡಿದೆ. ಒಂದರಲ್ಲೂ ಗೆದ್ದಿಲ್ಲ. ಹತ್ತರಲ್ಲಿ ಸೋಲನುಭವಿಸಿದೆ. 2009-10ರ ಬಳಿಕ ಭಾರತದಲ್ಲಿ ಮೊದಲ ಟೆಸ್ಟ್‌ ಆಡಲಿದೆ. 2 ತಿಂಗಳ ಹಿಂದಷ್ಟೇ ತವರಿನಲ್ಲಿ ಭಾರತದೆದುರು ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನು ಸೋತ ಸಂಕಟದಲ್ಲಿದೆ ಲಂಕಾ ಪಡೆ!

ಈ ಬಾರಿ ಶ್ರೀಲಂಕಾ ತಂಡ ದಿನೇಶ್‌ ಚಂಡಿಮಾಲ್‌ ನಾಯಕತ್ವದಲ್ಲಿ ಆಗಮಿಸಿದೆ. ಚಂಡಿಮಾಲ್‌ ಇನ್ನೂ ಭಾರತದಲ್ಲಿ ಟೆಸ್ಟ್‌ ಆಡಿಲ್ಲ. 7 ವರ್ಷಗಳ ಹಿಂದೆ ಭಾರತದಲ್ಲಿ 2-0 ಸೋಲನುಭವಿಸಿದಾಗ ಲಂಕಾ ತಂಡದಲ್ಲಿದ್ದ ಆಟಗಾರರ ಪೈಕಿ ಇಬ್ಬರಷ್ಟೇ ಈಗಿನ ತಂಡದಲ್ಲಿದ್ದಾರೆ. ಇವರೆಂದರೆ ಏಂಜೆಲೊ ಮ್ಯಾಥ್ಯೂಸ್‌ ಮತ್ತು ರಂಗನ ಹೆರಾತ್‌.
ಭಾರತದೆದುರು ತವರಿನಲ್ಲಿ ಮಣ್ಣು ಮುಕ್ಕಿದ ಬಳಿಕ ಯುಎಇಯಲ್ಲಿ ಪಾಕಿಸ್ಥಾನ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಿದ ಶ್ರೀಲಂಕಾ ಇವೆರಡನ್ನೂ ಗೆದ್ದು ತಲೆಯೆತ್ತಿ ನಿಂತಿತು. ಆದರೆ ಏಕದಿನ ಹಾಗೂ ಟ20 ಸರಣಿಯ ಅಷ್ಟೂ ಪಂದ್ಯಗಳಲ್ಲಿ ಎಡವಿ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಪಾಕ್‌ ಎದುರಿನ ಸರಣಿಯಿಂದ ಹೊರಗುಳಿದಿದ್ದ ಮ್ಯಾಥ್ಯೂಸ್‌ ಮರಳಿ ತಂಡವನ್ನು ಕೂಡಿಕೊಂಡಿದ್ದಾರೆ. ಭಾರತದೆದುರು ಉತ್ತಮ ಪ್ರದರ್ಶನ ನೀಡುವ ಆಟಗಾರರಲ್ಲಿ ಮ್ಯಾಥ್ಯೂಸ್‌ ಕೂಡ ಒಬ್ಬರು.

ತೃತೀಯ ದರ್ಜೆಯ ತಂಡ
ಆತಿಥೇಯ ತಂಡ ವಿಶೇಷ ಬಲಿಷ್ಠವೇನಲ್ಲ. ಇದೊಂದು ತೃತೀಯ ದರ್ಜೆಯ ತಂಡ. 5ನೇ ಸುತ್ತಿನ ರಣಜಿ ಪಂದ್ಯದಿಂದ ಹೊರಗುಳಿದಿರುವ ಹೈದರಾಬಾದ್‌, ಕೇರಳ, ಮಧ್ಯಪ್ರದೇಶ ಮತ್ತು ಪಂಜಾಬ್‌ ಆಟಗಾರರು ಈ ತಂಡದಲ್ಲಿದ್ದಾರೆ. ರಣಜಿಯಲ್ಲಿ ಚತ್ತೀಸ್‌ಗಢ ವಿರುದ್ಧ ಜೀವನಶ್ರೇಷ್ಠ 267 ರನ್‌ ಬಾರಿಸಿದ ಅನ್ಮೋಲ್‌ಪ್ರೀತ್‌ ಸಿಂಗ್‌, ಹಿಮಾಚಲ ವಿರುದ್ಧ ಪಾದಾರ್ಪಣಾ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಅಭಿಷೇಕ್‌ ಗುಪ್ತಾ ಈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಇವರಿಬ್ಬರೂ ಪಂಜಾಬಿನವರು. ಕೇರಳದ ಸಂದೀಪ್‌ ವಾರಿಯರ್‌, ಮಧ್ಯಪ್ರದೇಶದ ಆವೇಶ್‌ ಖಾನ್‌, ಹೈದರಾಬಾದ್‌ನ ಲೆಗ್ಗಿ ಆಕಾಶ್‌ ಭಂಡಾರಿ, ಆಲ್‌ರೌಂಡರ್‌ ಜಲಜ್‌ ಸಕ್ಸೇನಾ ಬೌಲಿಂಗ್‌ ವಿಭಾಗದಲ್ಲಿದ್ದಾರೆ. ತಂಡವನ್ನು ಮುನ್ನಡೆಸಬೇಕಿದ್ದ ನಮನ್‌ ಓಜಾ ಗಾಯಾಳಾದ್ದರಿಂದ ಸಂಜು ಸ್ಯಾಮ್ಸನ್‌ಗೆ ನಾಯಕತ್ವ ಒಲಿದಿದೆ. ಭಾರತದ ಮಾಜಿ ಸ್ಪಿನ್ನರ್‌ ನರೇಂದ್ರ ಹಿರ್ವಾನಿ ಇವರಿಗೆ ತರಬೇತಿ ನೀಡಿದ್ದಾರೆ.

ಪಾಕಿಸ್ಥಾನ ವಿರುದ್ಧ 16 ವಿಕೆಟ್‌ ಹಾರಿಸಿದ ಹಿರಿಯ ಸ್ಪಿನ್ನರ್‌ ರಂಗನ ಹೆರಾತ್‌, ಚೈನಾಮನ್‌ ಬೌಲರ್‌ ಲಕ್ಷಣ ಸಂದಕನ್‌, ಪಾಕ್‌ ವಿರುದ್ಧ 93 ಹಾಗೂ 196 ರನ್‌ ಸಿಡಿಸಿ ಬಂದ ಎಡಗೈ ಆರಂಭಕಾರ ದಿಮುತ್‌ ಕರುಣರತ್ನೆ, ನಾಯಕ ಚಂಡಿಮಾಲ್‌, ಕೀಪರ್‌ ಡಿಕ್ವೆಲ್ಲ ಮೇಲೆ ಲಂಕಾ ಹೆಚ್ಚಿನ ಭರವಸೆ ಇರಿಸಿದೆ.

ಈ ಅಭ್ಯಾಸ ಪಂದ್ಯ ಕೋಲ್ಕತಾದ “ಜಾಧವಪುರ್‌ ಯುನಿವರ್ಸಿಟಿ ಕ್ಯಾಂಪಸ್‌ ಗ್ರೌಂಡ್‌’ನಲ್ಲಿ ನಡೆಯಲಿದ್ದು, ಇದು ಸೀಮ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಸರಣಿಯ ಮೊದಲ ಟೆಸ್ಟ್‌ ಪಂದ್ಯ ನ. 16ರಿಂದ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಆರಂಭವಾಗಲಿದೆ.

ತಂಡಗಳು
ಶ್ರೀಲಂಕಾ: ದಿನೇಶ್‌ ಚಂಡಿಮಾಲ್‌ (ನಾಯಕ), ದಿಮುತ್‌ ಕರುಣರತ್ನೆ, ಸದೀರ ಸಮರವಿಕ್ರಮ, ಲಹಿರು ತಿರಿಮನ್ನೆ, ನಿರೋಷನ್‌ ಡಿಕ್ವೆಲ್ಲ, ದಿಲುÅವಾನ್‌ ಪೆರೆರ, ರಂಗನ ಹೆರಾತ್‌, ಸುರಂಗ ಲಕ್ಮಲ್‌, ಲಹಿರು ಗಾಮಗೆ, ಧನಂಜಯ ಡಿ’ಸಿಲ್ವ, ಏಂಜೆಲೊ ಮ್ಯಾಥ್ಯೂಸ್‌, ಲಕ್ಷಣ ಸಂದಕನ್‌, ವಿಶ್ವ ಫೆರ್ನಾಂಡೊ, ದಸುನ್‌ ಶಣಕ, ರೋಷನ್‌ ಸಿಲ್ವ.

ಮಂಡಳಿ ಅಧ್ಯಕ್ಷರ ಇಲೆವೆನ್‌: ಸಂಜು ಸ್ಯಾಮ್ಸನ್‌ (ನಾಯಕ), ಅಭಿಷೇಕ್‌ ಗುಪ್ತಾ, ಆಕಾಶ್‌ ಭಂಡಾರಿ, ಆವೇಶ್‌ ಖಾನ್‌, ಜಲಜ್‌ ಸಕ್ಸೇನಾ, ಜೀವನ್‌ಜೋತ್‌ ಸಿಂಗ್‌, ರವಿಕಿರಣ್‌, ರೋಹನ್‌ ಪ್ರೇಮ್‌, ಬಿ. ಸಂದೀಪ್‌, ತನ್ಮಯ್‌ ಅಗರ್ವಾಲ್‌, ಸಂದೀಪ್‌ ವಾರಿಯರ್‌, ಅನ್ಮೋಲ್‌ಪ್ರೀತ್‌ ಸಿಂಗ್‌.

ಟಾಪ್ ನ್ಯೂಸ್

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

US; Mike Waltz is the new security adviser

US; ಮೈಕ್‌ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

udupi-lawrence

Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್‌ ಸಿ. ಡಿ’ಸೋಜಾ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

women asian hockey champions trophy; India demolished South Korea

Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ

ATP Rankings; Sinner won year-end No.1 rank trophy

ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್‌ ಟ್ರೋಫಿ

champions trophy 2025

ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್‌ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ

Mohammed Shami finally returned to professional cricket

Shami: ಕೊನೆಗೂ ವೃತ್ತಿಪರ ಕ್ರಿಕೆಟ್‌ ಗೆ ಮರಳಿದ ಮೊಹಮ್ಮದ್‌ ಶಮಿ

Japan: ಇಂದಿನಿಂದ ಕುಮಮೋಟೊ ಓಪನ್‌: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ

Japan: ಇಂದಿನಿಂದ ಕುಮಮೋಟೊ ಓಪನ್‌: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

US; Mike Waltz is the new security adviser

US; ಮೈಕ್‌ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ

U.P: ಪತ್ನಿ, ಮಕ್ಕಳ  ಕೊಂದು ಸ್ಟೇಟಸ್‌ ಹಾಕಿದ!

U.P: ಪತ್ನಿ, ಮಕ್ಕಳ  ಕೊಂದು ಸ್ಟೇಟಸ್‌ ಹಾಕಿದ!

Centralized system to solve pension disbursement problem soon: Minister

Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.