ಏಷ್ಯಾ ಕಪ್ ಕ್ರಿಕೆಟ್: ಶ್ರೀಲಂಕಾ ಸೂಪರ್ 4 ಹಂತಕ್ಕೆ
Team Udayavani, Sep 2, 2022, 1:46 AM IST
ದುಬಾೖ: ಆಸಿತಾ ಫೆರ್ನಾಂಡೊ ಅವರ ಅಸಾಧಾರಣ ಆಟದ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವು ಗುರುವಾರ ನಡೆದ ಲೀಗ್ ಪಂದ್ಯದಲ್ಲಿ ರೋಚಕವಾಗಿ ಹೋರಾಡಿ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಸೋಲಿಸಿ ಏಷ್ಯಾ ಕಪ್ ಕ್ರಿಕೆಟ್ ಕೂಟದ ಸೂಪರ್ ಫೋರ್ ಹಂತಕ್ಕೇರಿತು.
ಕೊನೆ ಹಂತದಲ್ಲಿ ಆಸಿತಾ ಫೆರ್ನಾಂಡೊ ಎರಡು ಬೌಂಡರಿ ಬಾರಿಸಿದ್ದರಿಂದ ಶ್ರೀಲಂಕಾ ತಂಡವು 19.2 ಓವರ್‌ಗಳಲ್ಲಿ 8 ವಿಕೆಟಿಗೆ 184 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೊದಲು ಬಾಂಗ್ಲಾದೇಶವು 7 ವಿಕೆಟಿಗೆ 183 ರನ್ ಗಳಿಸಿತ್ತು.
ಕುಸಲ್ ಮೆಂಡಿಸ್ (60 ರನ್) ಮತ್ತು ನಾಯಕ ದಾಸುನ್ ಶನಕ (45) ಉತ್ತಮವಾಗಿ ಆಡಿದ್ದರೂ ತಂಡಕ್ಕೆ ಗೆಲ್ಲುವ ಸಾಧ್ಯತೆ ಕಷ್ಟವಿತ್ತು. ಆದರೆ ಆಸಿತಾ ಫೆರ್ನಾಂಡೊ 19ನೇ ಓವರಿನ ಕೊನೆಯ ಮತ್ತು 20ನೇ ಓವರಿನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದರಿಂದ ತಂಡದ ಗೆಲುವು ಖಚಿತವಾಯಿತು.
ಈ ಗೆಲುವಿನಿಂದ ಶ್ರೀಲಂಕಾ ತಂಡವು ಏಷ್ಯಾ ಕಪ್‌ನಲ್ಲಿ ತನ್ನ ಆರು ಪಂದ್ಯಗಳ ಸೋಲಿನ ಸರಮಾಲೆಯನ್ನು ಅಂತ್ಯಗೊಳಿಸಿತು. ತಂಡವು 2016ರಲ್ಲಿ ಯುಎಇ ತಂಡವನ್ನು ಸೋಲಿಸಿದ ಬಳಿಕ ಇದೇ ಮೊದಲ ಬಾರಿ ಗೆಲುವು ಕಂಡಿದೆ.
ಈ ಪಂದ್ಯದ ವೇಳೆ ಶಕಿಬ್ ಅಲ್ ಹಸನ್ ಟಿ20 ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಿದ ಬಾಂಗ್ಲಾದ ಕೇವಲ 2ನೇ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.