ಎಂಬುಲ್ದೇನಿಯ-ರೂಟ್ ಗ್ರೇಟ್ ಫೈಟ್
Team Udayavani, Jan 24, 2021, 11:47 PM IST
ಗಾಲೆ: ಗಾಲೆ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಇಬ್ಬರ ದಿಟ್ಟ ಹೋರಾಟಕ್ಕೆ ಸಾಕ್ಷಿಯಾಯಿತು. ಒಂದೆಡೆ ಲಂಕೆಯ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯ ವಿಕೆಟ್ ಬೇಟೆಯಾಡುತ್ತ ಹೋದರೆ, ಇನ್ನೊಂದೆಡೆ ಇಂಗ್ಲೆಂಡ್ ಕಪ್ತಾನ ಜೋ ರೂಟ್ ಗಟ್ಟಿಯಾಗಿ ಬೇರುಬಿಟ್ಟು ಮತ್ತೂಂದು ಅಮೋಘ ಇನ್ನಿಂಗ್ಸ್ ಕಟ್ಟಿದರು.
ಶ್ರೀಲಂಕಾದ 381 ರನ್ನಿಗೆ ಜವಾಬು ನೀಡುತ್ತಿದ್ದ ಇಂಗ್ಲೆಂಡ್ 3ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ. ಇದರಲ್ಲಿ ರೂಟ್ ಕೊಡುಗೆ ಅಮೋಘ 186 ರನ್ (309 ಎಸೆತ, 18 ಬೌಂಡರಿ). ಇನ್ನೊಂದು ಕಡೆಯಿಂದ ಎಂಬುಲೆªàನಿಯ 132ಕ್ಕೆ 7 ವಿಕೆಟ್ ಹಾರಿಸಿ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು.
ಇದು ರೂಟ್ ಅವರ 19ನೇ ಶತಕವಾದರೆ, ಗಾಲೆಯಲ್ಲಿ ಬಾರಿಸಿದ ಸತತ 2ನೇ ಶತಕ. ಮೊದಲ ಟೆಸ್ಟ್‌ನಲ್ಲಿ 228 ರನ್ ಅವರು ಪೇರಿಸಿದ್ದರು. ದಿನದ ಆಂತಿಮ ಓವರ್‌ನಲ್ಲಿ ರನೌಟಾಗುವುದರೊಂದಿಗೆ ರೂಟ್ ಅವರ ಅಮೋಘ ಇನ್ನಿಂಗ್ಸ್ ಕೊನೆಗೊಂಡಿತು. ಸದ್ಯ ಇಂಗ್ಲೆಂಡ್ 42 ರನ್ ಹಿನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-381. ಇಂಗ್ಲೆಂಡ್-9 ವಿಕೆಟಿಗೆ 339 (ರೂಟ್ 186, ಬಟ್ಲರ್ 55, ಬೆಸ್ 32, ಬೇರ್‌ಸ್ಟೊ 28 ಎಂಬುಲ್ದೇನಿಯ 132ಕ್ಕೆ 7).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.