ಗಾಲೆ ಟೆಸ್ಟ್ : 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ
2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ; ದಿಮುತ್ ಕರುಣರತ್ನೆ ಆಕರ್ಷಕ ಶತಕ
Team Udayavani, Aug 19, 2019, 5:37 AM IST
ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್ ಎದು ರಿನ ಗಾಲೆ ಟೆಸ್ಟ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಗೆಲುವಿಗೆ 268 ರನ್ನುಗಳ ಗುರಿ ಪಡೆದ ಶ್ರೀಲಂಕಾ 4 ವಿಕೆಟ್ ನಷ್ಟದಲ್ಲಿ ಈ ಗುರಿ ಮುಟ್ಟಿತು. 4ನೇ ದಿನದಾಟದ ಕೊನೆಯಲ್ಲಿ ವಿಕೆಟ್ ನಷ್ಟವಿಲ್ಲದೆ 133 ರನ್ ಗಳಿಸಿದಾಗಲೇ ಲಂಕಾ ಗೆಲುವು ಖಾತ್ರಿಯಾಗಿತ್ತು.
ದಿಮುತ್ ಕರುಣರತ್ನೆ 122
71 ರನ್ ಮಾಡಿ ನಾಟೌಟ್ ಆಗಿ ಉಳಿದಿದ್ದ ಆರಂಭಕಾರ, ತಂಡದ ನಾಯಕನೂ ಆಗಿರುವ ದಿಮುತ್ ಕರುಣರತ್ನೆ 122ರ ತನಕ ಬ್ಯಾಟಿಂಗ್ ವಿಸ್ತರಿಸಿ ಗೆಲುವನ್ನು ಸುಲಭಗೊಳಿಸಿದರು. ಇದು ಅವರ 9ನೇ ಟೆಸ್ಟ್ ಶತಕ. 243 ಎಸೆತಗಳ ಈ ಜವಾಬ್ದಾರಿಯುತ ಇನ್ನಿಂಗ್ಸ್‌ನಲ್ಲಿ ಕೇವಲ 6 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಗೆಲುವಿಗೆ ಭರ್ತಿ 50 ರನ್ ಬೇಕಿರುವಾಗ ಕರುಣರತ್ನೆ 3ನೇ ವಿಕೆಟ್ ರೂಪದಲ್ಲಿ ಔಟಾದರು.
ಮತ್ತೂಬ್ಬ ಆರಂಭಕಾರ ಲಹಿರು ತಿರಿಮನ್ನೆ 64 ರನ್ ಮಾಡಿದರು (163 ಎಸೆತ, 4 ಬೌಂಡರಿ). ಇವರಿಬ್ಬರಿಂದ ಮೊದಲ ವಿಕೆಟಿಗೆ 60.2 ಓವರ್‌ಗಳಿಂದ 161 ರನ್ ಒಟ್ಟುಗೂಡಿತು.
ಕುಸಲ್ ಮೆಂಡಿಸ್ 10, ಕುಸಲ್ ಪೆರೆರ 23, ಏಂಜೆಲೊ ಮ್ಯಾಥ್ಯೂಸ್ ಅಜೇಯ 28 ರನ್ ಹೊಡೆದರು. ಮೊದಲ 3 ದಿನಗಳ ಕಾಲ ಬೌಲಿಂಗಿಗೆ ನೆರವು ನೀಡುತ್ತಿದ್ದ ಗಾಲೆ ಟ್ರ್ಯಾಕ್ ಕೊನೆಯ ಹಂತದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗಿಗೆ ಸಹಕರಿಸಿತು. ನ್ಯೂಜಿಲ್ಯಾಂಡ್ ಪರ ಬೌಲ್ಟ್, ಸೌಥಿ, ಸೋಮರ್‌ವಿಲ್ಲೆ ಮತ್ತು ಪಟೇಲ್ ಒಂದೊಂದು ವಿಕೆಟ್ ಕೆಡವಿದರು.
ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್ ಆ. 22ರಿಂದ ಕೊಲಂಬೋದಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲ್ಯಾಂಡ್-249 ಮತ್ತು 285. ಶ್ರೀಲಂಕಾ-267 ಮತ್ತು 4 ವಿಕೆಟಿಗೆ 268.
ಪಂದ್ಯಶ್ರೇಷ್ಠ: ದಿಮುತ್ ಕರುಣರತ್ನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್‌ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.