ಮೂರೇ ದಿನದಲ್ಲಿ ಮುಗಿದ ಟೆಸ್ಟ್ ಬಾಂಗ್ಲಾದಲ್ಲಿ ಸರಣಿ ಗೆದ್ದ ಲಂಕಾ
Team Udayavani, Feb 11, 2018, 6:20 AM IST
ಢಾಕಾ: ಬೌಲರ್‌ಗಳ ಮೇಲಾಟವಾಗಿ ಪರಿಣಮಿಸಿದ ಢಾಕಾ ಟೆಸ್ಟ್ ಪಂದ್ಯ ಮೂರೇ ದಿನದಲ್ಲಿ ಮುಗಿದಿದ್ದು, ಪ್ರವಾಸಿ ಶ್ರೀಲಂಕಾ 215 ರನ್ ಜಯದೊಂದಿಗೆ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.
ಪಂದ್ಯದ ಮೂರನೇ ದಿನವಾದ ಶನಿವಾರ 339 ರನ್ ಗುರಿ ಪಡೆದ ಆತಿಥೇಯ ಬಾಂಗ್ಲಾದೇಶ, ಸ್ಪಿನ್ನರ್‌ಗಳಾದ ಅಖೀಲ ಧನಂಜಯ ಮತ್ತು ರಂಗನ ಹೆರಾತ್ ದಾಳಿಗೆ ತತ್ತರಿಸಿ 123 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಧನಂಜಯ 24 ರನ್ನಿತ್ತು 5 ವಿಕೆಟ್ ಹಾರಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದ್ದು, ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಉರುಳಿಸಿದ್ದು ಇದೇ ಮೊದಲು. ಹೆರಾತ್ ಸಾಧನೆ 49ಕ್ಕೆ 4 ವಿಕೆಟ್. ಬ್ಯಾಟಿಂಗಿಗೆ ಕಠಿನವಾದ ಟ್ರ್ಯಾಕ್‌ನಲ್ಲೂ 56 ಹಾಗೂ ಅಜೇಯ 76 ರನ್ ಬಾರಿಸಿ ಮಿಂಚಿದ ಲಂಕಾದ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ರೋಷನ್ ಸಿಲ್ವ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಚಿತ್ತಗಾಂಗ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 200 ರನ್ ಗಳಿಸಿದ್ದ ಶ್ರೀಲಂಕಾ ಬ್ಯಾಟಿಂಗ್ ಮುಂದುವರಿಸಿ 226ಕ್ಕೆ ಆಲೌಟ್ ಆಯಿತು. ಬಾಂಗ್ಲಾದ ದ್ವಿತೀಯ ಸರದಿ ಕೇವಲ 29.3 ಓವರ್‌ಗಳಲ್ಲಿ ಕೊನೆಗೊಂಡಿತು. ಮೊಮಿನುಲ್ ಹಕ್ ಸರ್ವಾಧಿಕ 33 ರನ್, ಮುಶ್ಫಿಕರ್ ರಹೀಂ 25 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-222 ಮತ್ತು 226. ಬಾಂಗ್ಲಾದೇಶ-110 ಮತ್ತು 123 (ಮೊಮಿನುಲ್ 33, ರಹೀಂ 25, ಕಯೆಸ್ 17, ಧನಂಜಯ 24ಕ್ಕೆ 5, ಹೆರಾತ್ 49ಕ್ಕೆ 4). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ರೋಷನ್ ಸಿಲ್ವ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.