ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ
Team Udayavani, Oct 18, 2021, 2:59 PM IST
ಕೊಲಂಬೋ: ಶ್ರೀಲಂಕಾ ಟೆಸ್ಟ್ ತಂಡದ ಮೊತ್ತಮೊದಲ ನಾಯಕ ಬಂದುಲಾ ವರ್ಣಾಪುರ ಇಂದು ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಂದುಲಾ ವರ್ಣಾಪುರ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಬಲಗೈ ಬ್ಯಾಟ್ಸಮನ್ ಆಗಿದ್ದ ಬಂದುಲಾ ವರ್ಣಾಪುರ 1982ರ ಫೆಬ್ರವರಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿದ್ದರು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು.
ಇದನ್ನೂ ಓದಿ:ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!
ಮೊದಲ ನಾಯಕನಾಗಿದ್ದರೂ ಬಂದುಲಾ ವರ್ಣಾಪುರ ಆಡಿದ್ದು ಕೇವಲ ನಾಲ್ಕು ಟೆಸ್ಟ್ ಮಾತ್ರ. 12ರ ಸರಾಸರಿಯಲ್ಲಿ 96 ರನ್ ಮಾತ್ರ ಬಂದುಲಾ ಕಲೆಹಾಕಿದ್ದರು. ಅದೇ ವರ್ಷ ಚೆನ್ನೈ ನಲ್ಲಿ ಭಾರತದ ವಿರುದ್ಧ ಅವರು ಕೊನೆಯ ಪಂದ್ಯವಾಡಿದ್ದರು.
Sri Lanka Cricket is deeply saddened to learn of the passing away of Bandula Warnapura, Sri Lanka’s first Test Captain.
We wish to express our condolences to the family at this difficult time on behalf of Sri Lanka’s Cricketing fraternity.
READ:https://t.co/V1ukJxeHO8 pic.twitter.com/ORdvXT3nZT
— Sri Lanka Cricket ?? (@OfficialSLC) October 18, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.