ಶ್ರೀಲಂಕಾಕ್ಕೆ ಇನ್ನಿಂಗ್ಸ್, 118 ರನ್ ಸೋಲು
Team Udayavani, Jan 15, 2017, 9:12 AM IST
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ತಂಡದ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಪ್ರವಾಸಿ ಶ್ರೀಲಂಕಾ ತಂಡವು ಇಲ್ಲಿನ ವಾಂಡರರ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 118 ರನ್ನುಗಳಿಂದ ಸೋಲನ್ನು ಕಂಡಿದೆ. ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.
ಪಂದ್ಯದ ಮೂರನೇ ದಿನದಾಟದಲ್ಲಿ ಶ್ರೀಲಂಕಾದ 16 ವಿಕೆಟ್‌ಗಳು ಉರುಳಿದ ಕಾರಣ ದಕ್ಷಿಣ ಆಫ್ರಿಕಾ ಕ್ಲೀನ್‌ಸಿÌàಪ್ ಮೂಲಕ ಸರಣಿ ಗೆದ್ದು ಸಂಭ್ರಮಿಸಿದೆ. ದಕ್ಷಿಣ ಆಫ್ರಿಕಾದ 426 ರನ್ನಿಗೆ ಉತ್ತರವಾಗಿ 4 ವಿಕೆಟಿಗೆ 80 ರನ್ನಿನಿಂದ ಮೂರನೇ ದಿನದಾಟ ಮುಂದುವರಿಸಿದ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 131 ರನ್ನಿಗೆ ಆಲೌಟಾಯಿತು. ಫಾಲೋಆನ್ ಪಡೆದ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕುಸಿತ ಕಂಡಿದ್ದು 177 ರನ್ನಿಗೆ ಆಲೌಟಾಗಿ ಸಂಪೂರ್ಣ ಶರಣಾಯಿತು.
ವೆರ್ನನ್ ಫಿಲಾಂಡರ್, ಕಾಗಿಸೊ ರಬಡ, ಹೊಸಬ ಡ್ವಾನೆ ಆಲಿವಿಯರ್ ಮತ್ತು ವೇನ್ ಪಾರ್ನೆಲ್ ಬಿಗು ದಾಳಿ ಸಂಘಟಿಸಿ ಶ್ರೀಲಂಕಾದ ಆಟ ಮುಗಿಸಲು ಯಶಸ್ವಿಯಾದರು.
ಜೀನ್‌ಪಾಲ್ ಡ್ಯುಮಿನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಡೀನ್ ಎಲ್ಗರ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 426, ಶ್ರೀಲಂಕಾ 131 (ಕುಸಲ್ ಮೆಂಡಿಸ್ 41, ಉಪುಲ್ ತರಂಗ 24, ವೆರ್ನನ್ ಫಿಲಾಂಡರ್ 28ಕ್ಕೆ 3, ವೇನ್ ಪಾರ್ನೆಲ್ 38ಕ್ಕೆ 2, ಡ್ವಾನೆ ಆಲಿವಿಯರ್ 19ಕ್ಕೆ 2, ರಬಡ 44ಕ್ಕೆ 3) ಮತ್ತು 177 (ದಿಮುತ್ ಕರುಣರತ್ನ 50, ಕುಸಲ್ ಮೆಂಡಿಸ್ 24, ಉಪುಲ್ ತರಂಗ 26, ಸುರಂಗ ಲಕ್ಮಲ್ 31, ರಬಡ 50ಕ್ಕೆ 2, ಪಾರ್ನೆಲ್ 51ಕ್ಕೆ 4, ಆಲಿವಿಯರ್ 38ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.