ಮತ್ತೆ ಸೋತ ಸಿಂಧು ಕ್ವಾ.ಫೈನಲ್‌ಗೆ ಶ್ರೀಕಾಂತ್
Team Udayavani, Apr 5, 2019, 6:00 AM IST
ಕೌಲಾಲಂಪುರ: “ಮಲೇಶ್ಯ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಕೆ. ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪಿ.ವಿ. ಸಿಂಧು ಸೋತು ಹೊರಬಿದ್ದಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಥಾಯ್ಲೆಂಡ್‌ನ ಖೊಶಿಟ್ ಫೆಟ್‌ಪ್ರಾದಬ್ ವಿರುದ್ಧ 21-11, 21-15 ಅಂತರದ ಸುಲಭ ಜಯ ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಕೊರಿಯಾದ ಚೆನ್ ಲಾಂಗ್ ವಿರುದ್ಧ ಸೆಣಸಲಿದ್ದಾರೆ. ಇದು ಶ್ರೀಕಾಂತ್‌ಗೆ ಕಠಿನ ಸ್ಪರ್ಧೆಯಾಗುವ ಸಾಧ್ಯತೆ ಇದೆ. ಶ್ರೀಕಾಂತ್ ವಿರುದ್ಧ ಲಾಂಗ್ 5-1 ಗೆಲುವಿನ ದಾಖಲೆ ಹೊಂದಿದ್ದಾರೆ. ಶ್ರೀಕಾಂತ್ ಅವರ ಏಕೈಕ ಗೆಲುವು 2017ರ “ಆಸ್ಟ್ರೇಲಿಯನ್ ಓಪನ್’ನಲ್ಲಿ ದಾಖಲಾಗಿತ್ತು. ಈ ಕೂಟದಲ್ಲಿ ಶ್ರೀಕಾಂತ್ ಭಾರತದ ಏಕೈಕ ಭರವಸೆಯಾಗಿದ್ದಾರೆ.
ಸಿಂಧು ನಿರಾಸೆ
ವನಿತಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಆಶಾಕಿರಣವಾಗಿದ್ದ ಸಿಂಧು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಸುಂಗ್ ಜಿ ಯುನ್ ವಿರುದ್ಧ 18-21, 7-21 ಗೇಮ್‌ಗಳಿಂದ ಸೋತರು. “ಆಲ್ ಇಂಗ್ಲೆಂಡ್’ ಕೂಟದ ಸೋಲಿನ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸಿಂಧು ಇಲ್ಲಿಯೂ ಯುನ್ ವಿರುದ್ಧ ಹೀನಾಯವಾಗಿ ಸೋತರು.
ಮಿಕ್ಸೆಡ್ ಡಬಲ್ಸ್ 2ನೇ ಸುತ್ತಿನಲ್ಲಿ ಭಾರತದ ಪ್ರಣವ್ ಚೆರ್ರಿ ಜೋಪ್ರಾ-ಸಿಕ್ಕಿ ಎನ್. ರೆಡ್ಡಿ ಜೋಡಿ ಅತಿಥೇಯ ನಾಡಿನ ತಾನ್ ಕಿಯಾನ್ ಮೆಂಗ್-ಲಾಯಿ ಪೈ ಜಿಂಗ್ ಜೋಡಿ ವಿರುದ್ಧ 21-15, 17-21, 13-21 ಗೇಮ್‌ಗಳಿಂದ ಪರಾಭವಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.