ಶ್ರೀಕಾಂತ್, ಸೈನಾ, ಚಿರಾಗ್ ಜೋಡಿಗೆ ಗೆಲುವು
ಪಂದ್ಯ ತ್ಯಜಿಸಿದ ಗಾಯಾಳು ಕಶ್ಯಪ್. ಸೌರಭ್ ವರ್ಮ ಪರಾಭವ
Team Udayavani, Jan 14, 2021, 6:20 AM IST
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕೆ. ಶ್ರೀಕಾಂತ್, ಸೈನಾ ನೆಹ್ವಾಲ್ ಚಿರಾಗ್ ಶೆಟ್ಟಿ-ಸಾತ್ವಿಕ್ ಗೆಲುವಿನ ಆರಂಭ ಪಡೆದಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಗಾಯಾಳಾಗಿ ಪಂದ್ಯವನ್ನು ತ್ಯಜಿಸುವ ಸಂಕಟಕ್ಕೆ ಸಿಲುಕಿದರು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿ. ಕಶ್ಯಪ್ ಕೆನಡಾದ ಜಾಸನ್ ಆ್ಯಂಟನಿ ಹೋ ಸೇ ವಿರುದ್ಧ 3ನೇ ಗೇಮ್‌ನಲ್ಲಿ ತೀವ್ರ ಸ್ನಾಯು ಸೆಳೆತಕ್ಕೆ ಸಿಲುಕಿ ಪಂದ್ಯ ತ್ಯಜಿಸಿದರು. ಆಗ ಅವರು 8-14ರ ಹಿನ್ನಡೆಯಲ್ಲಿದ್ದರು. ಮೊದಲ ಗೇಮ್ ಕಳೆದುಕೊಂಡ ಕಶ್ಯಪ್ (9-21), ದ್ವಿತೀಯ ಗೇಮ್‌ನಲ್ಲಿ ತೀವ್ರ ಪೈಪೋಟಿ ನೀಡಿ 21-13ರಿಂದ ಪಂದ್ಯವನ್ನು ಸಮಬಲಕ್ಕೆ ತಂದಿದ್ದರು.
ಮತ್ತೂಂದು ಸಿಂಗಲ್ಸ್ ಮುಖಾ ಮುಖೀ ಕೆ. ಶ್ರೀಕಾಂತ್-ಸೌರಭ್ ವರ್ಮ ನಡುವಿನ “ಆಲ್ ಇಂಡಿಯನ್ ಮ್ಯಾಚ್’ ಆಗಿತ್ತು. ಇದನ್ನು ಶ್ರೀಕಾಂತ್ 21-12, 21-11 ಅಂತರದಿಂದ ಸುಲಭದಲ್ಲಿ ಗೆದ್ದರು.
ಚಿರಾಗ್-ಸಾಯಿರಾಜ್ ಜಯ :
ಭಾರತದ ಸ್ಟಾರ್ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ದಕ್ಷಿಣ ಕೊರಿಯಾದ ಕಿಮ್ ಜಿ ಗೀ-ಲೀ ಯೋಂಗ್ ಡೇ ವಿರುದ್ಧ 19-21, 21-16, 21-14 ಅಂತರದಿಂದ ಗೆಲುವು ಸಾಧಿಸಿದರು. ಆದರೆ ಪುರುಷರ
ವಿಭಾಗದ ಮತ್ತೂಂದು ಜೋಡಿ :
ಅರ್ಜುನ್ ಮಡತಿಲ್ ರಾಮ ಚಂದ್ರನ್ ಮತ್ತು ಧ್ರುವ ಕಪಿಲ ಮಲೇಶ್ಯದ ಓಂಗ್ ಯ್ಯೂ ಸಿನ್-ಟಿಯೋ ಇ ಯಿ ವಿರುದ್ಧ 13-21, 21-8, 24-22 ಅಂತರದಿಂದ ಪರಾಭವಗೊಂಡಿತು.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಎನ್. ಸಿಕ್ಕಿ ರೆಡ್ಡಿ-ಸುಮೀತ್ ರೆಡ್ಡಿ ಕೂಡ ಸೋಲನುಭವಿಸಿದರು. ಇವರ ವಿರುದ್ಧ ಹಾಂಕಾಂಗ್‌ನ ಚುಂಗ್ ಮ್ಯಾನ್ ಥಾಂಗ್-ಯೋಂಗ್ ಸೂಟ್ ತ್ಸೆ 22-20, 21-17 ನೇರ ಗೇಮ್‌ಗಳ ಜಯ ಸಾಧಿಸಿದರು.
ದ್ವಿತೀಯ ಸುತ್ತು ತಲುಪಿದ ಸೈನಾ ನೆಹ್ವಾಲ್ ;
ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರದ ಪಂದ್ಯದಲ್ಲಿ ಮಲೇಶ್ಯದ ಸೆಲ್ವದುರೈ ಕಿಸೋನಾ ವಿರುದ್ಧ 21-15, 21-15 ನೇರ ಗೇಮ್‌ಗಳ ಜಯ ಸಾಧಿಸಿದರು. ಅವರಿನ್ನು ಆತಿಥೇಯ ನಾಡಿನ ಬುಸಾನನ್ ಒಂಗ್ಬಾಮ್ರುಂಗಫಾನ್ ವಿರುದ್ಧ ಸೆಣಸಲಿದ್ದಾರೆ.
“ಮಂಗಳವಾರದ ಕೊರೊನಾ ವರದಿಯಲ್ಲಿ ಪಾಸಿಟಿವ್ ಫಲಿತಾಂಶದ ಆಘಾತಕ್ಕೆ ಸಿಲುಕಿದ್ದೆ. ನನಗೆ ಕಳೆದ ನವೆಂಬರ್‌ನಲ್ಲೇ ಕೊರೊನಾ ಬಂದು ಹೋಗಿದೆ, ನಾನು ಚೇತರಿಸಿಕೊಂಡಿದ್ದೇನೆ ಎಂದು ಮನದಟ್ಟು ಮಾಡಿದೆ. ಕೊನೆಗೆ ನನ್ನ ರಕ್ತ ಪರೀಕ್ಷೆ ಹಾಗೂ ಎಕ್ಸ್-ರೇ ಪರಿಶೀಲಿಸಿದ ವೈದ್ಯರು ಓಕೆ ಹೇಳಿದರು. ನನ್ನಲ್ಲಿ ಕೋವಿಡ್‌ನ ಯಾವುದೇ ಲಕ್ಷಣವಿಲ್ಲ. ವೈದ್ಯರಿಗೆ ಕೃತಜ್ಞತೆಗಳು’ ಎಂದು ಗೆಲುವಿನ ಬಳಿಕ ಸೈನಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.