ಸುಪ್ರೀಂ ಕೋರ್ಟ್ ಆದೇಶಕ್ಕೆ ಶ್ರೀನಿ, ನಿರಂಜನ್ ಶಾ ಕೊಕ್ಕೆ
Team Udayavani, Jul 13, 2017, 7:32 AM IST
ನವದೆಹಲಿ: ಬಿಸಿಸಿಐ ಆಡಳಿತಾತ್ಮಕ ಸುಧಾರಣೆ ಮಾಡಲು ಆದೇಶ ಹೊರಡಿಸಿರುವ ಸರ್ವೋಚ್ಚ ನ್ಯಾಯಾಲಯ ಈ ಕುರಿತ ಸ್ಥಿತಿಗತಿಗಳನ್ನು ತಿಳಿಯಲು ಜು.14ರಂದು ವಿಚಾರಣೆ ನಡೆಸಲಿದೆ.
ಈ ಸಂಬಂಧ ನ್ಯಾಯಪೀಠಕ್ಕೆ ಸ್ಥಿತಿ ಗತಿ ವರದಿ ಸಲ್ಲಿಸಿದ ನಿಯೋಜಿತ ಆಡಳಿತಾಧಿಕಾರಿಗಳು ಬಿಸಿಸಿಐ ಪದಚ್ಯುತ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಮಾಜಿ ಕಾರ್ಯದರ್ಶಿ ನಿರಂಜನ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್ ಆದೇಶದ ಪ್ರಕಾರ ಅನರ್ಹಗೊಂಡಿರುವ ಈ ಇಬ್ಬರು ವ್ಯಕ್ತಿಗಳೇ ಸುದಾರಣೆಗಳನ್ನು ಜಾರಿ ಮಾಡಲು ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 70 ವರ್ಷ ವಯೋಮಿತಿ ದಾಟಿದವರು ಬಿಸಿಸಿಐ ಹುದ್ದೆ ಹೊಂದುವಂತಿಲ್ಲ ಎಂಬ ನ್ಯಾಯಾಲಯದ ಆದೇಶದ ಪ್ರಕಾರ ಶ್ರೀನಿವಾಸನ್, ನಿರಂಜನ್ ಶಾ ಅನರ್ಹಗೊಂಡಿದ್ದಾರೆ.
ಶ್ರೀನಿ, ನಿರಂಜನ್ ಪಿತೂರಿ ದಾರರು:
ನ್ಯಾಯಾಲಯದ ಆದೇ ಶಕ್ಕೆ ಕೊಕ್ಕೆ ಹಾಕುತ್ತಿರುವವರಲ್ಲಿ ಶ್ರೀನಿ ವಾಸನ್, ನಿರಂಜನ್ ಶಾ ಅವರೇ ಮುಖ್ಯ ಪಿತೂರಿದಾರರು. ಜೂ.26ರ ಬಿಸಿಸಿಐ ಸಭೆಯಲ್ಲಿ ಹಲವು ಅನರ್ಹರೂ ಭಾಗವಹಿಸಿದ್ದರು. ಇದರಲ್ಲಿ ಶ್ರೀನಿವಾಸನ್, ನಿರಂಜನ್ ಶಾ ಕೂಡ ಸೇರಿದ್ದಾರೆ.
ಇವರಿಗೆಲ್ಲ ಸ್ವಹಿತಾಸಕ್ತಿ ಇದೆ ಎಂದು ಆಡಳಿತಾಧಿಕಾರಿಗಳು ಕಿಡಿಕಾರಿದ್ದಾರೆ.
ಅಮಿತಾಭ್‌ಗೆ ಹೊಗಳಿಕೆ: ವಿನೋದ್ ರಾಯ್ ನೇತೃತ್ವದ ಆಡಳಿತಾಧಿಕಾರಿಗಳು ತಮ್ಮ ವರದಿಯಲ್ಲಿ ಬಿಸಿಸಿಐ ಹಂಗಾಮಿ
ಕಾರ್ಯದರ್ಶಿ ಅಮಿತಾಭ್ ಚೌಧರಿಯನ್ನು ಹೊಗಳಿದ್ದಾರೆ. ಅಮಿತಾಭ್ ನ್ಯಾಯಾಲಯದ ಆದೇಶವನ್ನು ಜಾರಿ ಮಾಡಲು
ಶ್ರಮ ಹಾಕಿದ್ದಾರೆಂದು ಶ್ಲಾ ಸಿದೆ. ಆದರೆ ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿಯನ್ನು ತೆಗಳಿದೆ. ಅನಿರುದ್ಧ ಅವರು ಶ್ರೀನಿ ನಿಷ್ಠಾವಂತ ವ್ಯಕ್ತಿ, ಇವರು ಕೇವಲ ವೀಕ್ಷಕರಂತೆ ವರ್ತಿಸುತ್ತಿದ್ದಾರೆಂದು ತಿಳಿಸಿದೆ.
ರಾಜ್ಯ ಸಂಸ್ಥೆಗಳು ಒಪ್ಪಿಕೊಳ್ಳುತ್ತಿಲ್ಲ:
ಸುಧಾರಣೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಲು ರಾಜ್ಯ ಕ್ರಿಕೆಟ್ ಮಂಡಳಿಗಳ ಮನವೊಲಿಸಲು ಆಡಳಿತಾಧಿಕಾರಿಗಳು
ಬಯಸಿದ್ದರು. ಇದಕ್ಕೆ ರಾಜ್ಯ ಸಂಸ್ಥೆಗಳು ಸಹಕರಿಸುತ್ತಿಲ್ಲವೆಂದು ಆಡಳಿತಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.