ರಾಷ್ಟ್ರ ಪ್ರತಿನಿಧಿಸಿದ್ದರೂ ರಾಜ್ಯ ಹಾಕಿ ಪಟುಗಳಿಲ್ಲ ಸರ್ಕಾರಿ ನೌಕರಿ!
Team Udayavani, Nov 30, 2017, 6:00 AM IST
ಬೆಂಗಳೂರು: ಅದೊಂದು ಕಾಲವಿತ್ತು. ಕರ್ನಾಟಕದಿಂದಲೇ ಹಾಕಿ ಭಾರತದ ಗತವೈಭವ ಸಾರುವ ದಿನಗಳು. ಆದರೀಗ ಕಾಲ ಬದಲಾಗಿದೆ. ರಾಜ್ಯದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಕಿ ಕೂಟಕ್ಕೆ ಆಯ್ಕೆಯಾಗುವವರ ಸಂಖ್ಯೆಯಲ್ಲಿಯೇ ಗಣನೀಯ ಕುಸಿತವಾಗತೊಡಗಿದೆ. ಹಾಕಿ ಪಟುಗಳು ಅತಂತ್ರಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ರಾಜ್ಯ ಸರ್ಕಾರ ಹಾಕಿ ಪಟುಗಳಿಗೆ ನೌಕರಿ ನೀಡಿ ಬೆಂಬಲಿಸದಿರುವುದು.
ಹೌದು, ಹೊಟ್ಟೆ ಹೊರೆಯುವುದಕ್ಕಾಗಿ, ಬದುಕಿನ ಅನಿವಾರ್ಯತೆಗಾಗಿ ಈಗ ಹಾಕಿಯನ್ನೇ ಬಿಟ್ಟು ಖಾಸಗಿ ನೌಕರಿಯತ್ತ ಕೆಲವು ಹಾಕಿ ಪಟುಗಳು ವಲಸೆ ಹೋಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಪ್ರತಿಭಾವಂತರು. ಇದು ತೀವ್ರ ಆತಂಕಕ್ಕೆ ಕಾರಣವಾಗಿರುವ ವಿಷಯ. ಇಂತಹದೊಂದು ಸ್ಫೋಟಕ ಸುದ್ದಿಯನ್ನು ಕರ್ನಾಟಕ ಹಾಕಿ ಸಂಸ್ಥೆ ಅಧ್ಯಕ್ಷ ಎಬಿ.ಸುಬ್ಬಯ್ಯ ಉದಯವಾಣಿಗೆ ತಿಳಿಸಿದ್ದಾರೆ. ಪ್ರತಿಭಾವಂತ ಹಾಕಿಪಟುಗಳು ಖಾಸಗಿ ನೌಕರಿಗೆ ಹೋಗುವುದನ್ನು ತಡೆಯುವುದು, ಕ್ರೀಡಾಕ್ಷೇತ್ರದಲ್ಲೇ ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಡುವುದು, ಜೀವನಕ್ಕೊಂದು ಭದ್ರತೆ ಕಲ್ಪಿಸಿಕೊಡುವುದು, ಇದೆಲ್ಲದರಲ್ಲೂ ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಂಪೂರ್ಣ ವಿಫಲವಾಗಿರುವುದು ವಿಪರ್ಯಾಸವೇ ಸರಿ.
ಬರಡಾಗಲಿದೆ ಹಾಕಿ ತವರೂರು?: ಇಂದು ಹಾಕಿ ತವರೂರು ಎಂದೆನಿಸಿಕೊಂಡಿರುವ ಕರ್ನಾಟಕದಿಂದ ಹಾಕಿ ಪಟುಗಳೇ ತಯಾರಾಗುತ್ತಿಲ್ಲ. ಇದ್ದರೂ ಬೆರಳೆಣಿಕೆಯಷ್ಟು. ಇದು ಹೀಗೆಯೇ ಸಾಗಿದರೆ ಮುಂದೊಂದು ದಿನ ರಾಜ್ಯದಿಂದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಯಾವೊಬ್ಬ ಆಟಗಾರನೂ ಇರುವುದಿಲ್ಲ. ರಾಜ್ಯದಲ್ಲಿ ಹಾಕಿ ಸಂಪೂರ್ಣವಾಗಿ ನೆಲಕಚ್ಚುವ ಭೀತಿ ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಬೆರಳೆಣಿಕೆ ಹಾಕಿ ಪಟುಗಳಿಗೆ ಮಾತ್ರ ನೌಕರಿ: ಕರ್ನಾಟಕ ಹಾಕಿ ಸಂಸ್ಥೆಯಡಿಯಲ್ಲಿ ಆಡಿ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಪ್ರತಿನಿಧಿಸಿದ ನೂರಾರು ಹಾಕಿ ಪಟುಗಳಲ್ಲಿ ಸರ್ಕಾರಿ ನೌಕರಿ ಪಡೆದವರ ಸಂಖ್ಯೆ ಶೇ.10ಕ್ಕಿಂತಲೂ ಕಡಿಮೆ. ಇದರೊಳಗೆ ಕೆಲವರು ಖಾಸಗಿ ನೌಕರಿ ಪಡೆದುಕೊಂಡಿದ್ದಾರೆ. ಕೆಲವರು ಸರ್ಕಾರಿ ಉದ್ಯೋಗ ಸಿಗದ ಕಾರಣಕ್ಕೆ ಅರ್ಧದಲ್ಲೇ ಹಾಕಿಯನ್ನು ಬಿಟ್ಟಿದ್ದಾರೆ. ರಾಜ್ಯದ ಮಹಿಳಾ ಹಾಕಿ ಆಟಗಾರ್ತಿಯರಲ್ಲಿ ಶೇ.99ರಷ್ಟು ಮಂದಿಗೆ ಸರ್ಕಾರಿ ಉದ್ಯೋಗವಿಲ್ಲ. ರಾಜ್ಯದಲ್ಲಿ ಪುರುಷರ ಹಾಕಿಪಟುಗಳಿಗೆ ಹೋಲಿಸಿದರೆ ಮಹಿಳಾ ಹಾಕಿ ಪಟುಗಳ ಪರಿಸ್ಥಿತಿ ಶೋಚನೀಯವಾಗಿದೆ. ಸ್ವತಃ ಈ ಬಗ್ಗೆ ಎಬಿ ಸುಬ್ಬಯ್ಯ ಮಾತನಾಡಿ ಹೇಳಿದ್ದು ಹೀಗೆ. ಹಾಕಿ ಇಂಡಿಯಾಕ್ಕೆ ಆಡಿದ ಎಲ್ಲರಿಗೂ ಸರ್ಕಾರಿ ನೌಕರಿ ದೊರಕಿದೆ. ಆದರೆ ಕರ್ನಾಟಕ ತಂಡವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಿದವರಿಗೆ ಸರ್ಕಾರಿ ನೌಕರಿ ಸಿಕ್ಕಿರುವುದು ಕೆಲವರಿಗೆ ಮಾತ್ರ. ವರ್ಷದಲ್ಲಿ ಹಲವಾರು ಮಂದಿ ನಿರುದ್ಯೋಗಿಗಗಳಾಗುತ್ತಿದ್ದಾರೆ.
ಉದ್ಯೋಗ ಸಮಸ್ಯೆಗೆ ಕಾರಣವೇನು?: ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಗೆ ಕಾರಣ ಪ್ರಾಯೋಜಕರ ಕೊರತೆ. ಸರ್ಕಾರದ ದಿವ್ಯ ನಿರ್ಲಕ್ಷ್ಯ. ಹಾಕಿ ಕರ್ನಾಟಕ ಮುಖ್ಯವಾಗಿ ಪ್ರಾಯೋಜಕರ ಕೊರತೆ ಎದುರಿಸುತ್ತಿದೆ. ಹಿಂದೆ ಐಟಿಐ, ಎಚ್‌ಎಎಲ್, ಕೋಸ್ಟಲ್ ಸೇರಿದಂತೆ ಪ್ರಮುಖ ಕ್ಲಬ್‌ಗಳು ಹಾಕಿ ಪಟುಗಳನ್ನು ಖರೀದಿಸುತ್ತಿದ್ದವು. ಇಂದು ಸುಮಾರು 8-10 ಕ್ಲಬ್‌ಗಳು ಬಾಗಿಲು ಮುಚ್ಚಿದೆ. ಇರುವುದರಲ್ಲಿ ಕೆಎಸ್‌ಪಿ (ಕರ್ನಾಟಕ ಸ್ಟೇಟ್ ಪೊಲೀಸ್) ಏಕೈಕ ಹಾಗೂ ಅಂತ್ಯಂತ ಹಳೆಯ ಕ್ಲಬ್. ಆದರೆ ಅದು ಕೂಡ ಇತ್ತೀಚೆಗೆ ಹೊಸ ಆಟಗಾರರನ್ನು ತಂಡಕ್ಕೆ ಖರೀದಿ ಮಾಡುತ್ತಿಲ್ಲ. ಹಳೆ ಆಟಗಾರರೇ ಅಲ್ಲಿ ಈಗಲೂ ಆಡುವುದನ್ನು ಕಾಣಬಹುದಾಗಿದೆ. ಒಟ್ಟಾರೆ ಇದನ್ನೆಲ್ಲ ನೋಡುವುದಾದರೆ ರಾಜ್ಯ ಹಾಕಿಯಲ್ಲಿ ಹಲವಾರು ಸಮಸ್ಯೆಗಳಿವೆ ಎನ್ನುತ್ತಾರೆ ಏರ್ ಇಂಡಿಯಾ ಉದ್ಯೋಗಿ ರಾಜ್ಯದ ಹಾಕಿ ಆಟಗಾರ ವಿನಯ್.
ರಾಜ್ಯ ಸರ್ಕಾರವೇ ನೇರ ಹೊಣೆ: ಹಾಕಿ ಅಭಿವೃದ್ದಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಯುವಸಬಲೀಕರಣ ಉದ್ಯೋಗ ನೀಡುವಂತಹ ಯೋಜನೆ ಪ್ರಕಟಿಸಿಲ್ಲ. ಒಟ್ಟಾರೆ ರಾಜ್ಯದಲ್ಲಿ ಹಾಕಿ ಬೆಳವಣಿಗೆ ಕುಂಠಿತವಾಗಲು ರಾಜ್ಯ ಸರ್ಕಾರ ಒಂದು ರೀತಿಯಲ್ಲಿ ಕಾರಣವಾಗಿದೆ. ಪರಿಣಾಮ ರಾಜ್ಯದಲ್ಲಿ ಇಂದು ಹಾಕಿ ಕುಸಿಯುತ್ತಿದೆ. ಇದನ್ನು ತಡೆಗಟ್ಟಲು ರಾಜ್ಯಾದ್ಯಂತ ವಿವಿಧ ಕಾರ್ಯಗಾರಗಳನ್ನು ಹಮ್ಮಿಕೊಂಡು ಪ್ರತಿಭಾಶೋಧ ನಡೆಸಬೇಕಿದೆ.
ಹಾಕಿ ಇಂಡಿಯಾಕ್ಕೆ ಆಡಿದ ಎಲ್ಲರಿಗೂ ಸರ್ಕಾರಿ ನೌಕರಿ ದೊರಕಿದೆ. ಆದರೆ ಕರ್ನಾಟಕ ತಂಡವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಿದ ಆಟಗಾರನಿಗೆ ಸರ್ಕಾರಿ ನೌಕರಿ ಸಿಕ್ಕಿರುವುದು ಕೆಲವರಿಗೆ ಮಾತ್ರ. ಮಹಿಳಾ ತಂಡದಲ್ಲಿ ಯಾರಿಗೂ ಸರ್ಕಾರಿ ಕೆಲಸ ಆಗಿಲ್ಲ. ವರ್ಷದಲ್ಲಿ ಹಲವಾರು ಮಂದಿ ನಿರುದ್ಯೋಗಿಗಗಳಾಗುತ್ತಿದ್ದಾರೆ.
– ಎಬಿ.ಸುಬ್ಬಯ್ಯ, ಕರ್ನಾಟಕ ಹಾಕಿ ಸಂಸ್ಥೆ ಅಧ್ಯಕ್ಷ
ಸುಮಾರು ಸಲ ರಾಜ್ಯವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸಿದೆ. ಆದರೆ ಸರ್ಕಾರಿ ಉದ್ಯೋಗ ಸಿಗಲೇ ಇಲ್ಲ. ಬಳಿಕ ಹೊಟ್ಟೆಪಾಡಿಗಾಗಿ ಖಾಸಗಿ ಕೆಲಸಕ್ಕೆ ಸೇರಿಕೊಂಡೆ.
– ಹೆಸರು ಹೇಳಚ್ಛಿಸದ ರಾಜ್ಯ ಹಾಕಿಪಟು
ಮಹಿಳಾ ಹಾಕಿ ಆಟಗಾರ್ತಿಯರಿಗೆ ರಾಜ್ಯದಲ್ಲಿ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ರಾಜ್ಯ ತಂಡ ಪ್ರತಿನಿಧಿಸಿದರೂ ನಮಗೆ ಉದ್ಯೋಗ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಕುಟುಂಬ ನಿರ್ವಹಣೆಗಾಗಿ ಹಾಕಿ ಬಿಡಬೇಕಾಗಿ ಬಂತು.
– ಹೆಸರುಹೇಳಲಿಚ್ಛಿಸದ ಮಹಿಳಾ ಆಟಗಾರ್ತಿ
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.