ರಾಜ್ಯ ಮಟ್ಟದ ಆ್ಯತ್ಲೆಟಿಕ್ಸ್: ಆಳ್ವಾಸ್ ಮುನ್ನಡೆ
Team Udayavani, Sep 6, 2017, 9:02 AM IST
ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಆ್ಯತ್ಲೆಟಿಕ್‌ಸ್ಪರ್ಧೆಯ 2ನೇ ದಿನ 5 ಹೊಸ ಕೂಟ ದಾಖಲೆಗಳು ನಿರ್ಮಾಣಗೊಂಡಿವೆ. ಮೂಡಬಿದಿರೆಯ ಆಳ್ವಾಸ್ ನ್ಪೋರ್ಟ್ಸ್ ಕ್ಲಬ್ 2 ದಿನಗಳಲ್ಲಿ ಒಟ್ಟು 6 ಕೂಟ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.
ಆಳ್ವಾಸ್‌ಗೆ 120 ಪದಕ
48 ಚಿನ್ನ, 37 ಬೆಳ್ಳಿ, 35 ಕಂಚಿನ ಸಹಿತ ಒಟ್ಟು 120 ಪದಕಗಳನ್ನು ಗೆದ್ದಿರುವ ಆಳ್ವಾಸ್ ಸಮಗ್ರ ಮುನ್ನಡೆಯತ್ತ ದಾಪುಗಾಲಿಕ್ಕಿದೆ. ಅಂಡರ್-18 ಹುಡುಗಿಯರ ವಿಭಾಗದ ಹ್ಯಾಮರ್ ತ್ರೋನಲ್ಲಿ ಮೈಸೂರು ಡಿವೈಇಎಸ್‌ನ ಹರ್ಷಿತಾ 42.60 ಮೀ. ಎಸೆದು, 2008ರಲ್ಲಿ ವನಿತಾ ರಾಥೋಡ್ ನಿರ್ಮಿಸಿದ್ದ 41.45 ಮೀ. ದಾಖಲೆಯನ್ನು ಹಿಂದಿಕ್ಕಿದರು.
ಅಂಡರ್-18 ಬಾಲಕರ 400 ಮೀ. ಓಟದಲ್ಲಿ ಬೆಂಗಳೂರಿಗೆ ಅರ್ಜುನ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸಂಸ್ಥೆಯ ನಿಹಾಲ್ ಜೊಯಲ್ 48.70 ಸೆಕೆಂಡ್ಸ್ ಕ್ರಮಿಸುವುದರೊಂದಿಗೆ ಸಾಧನೆ ಮಾಡಿದ್ದು, 2000ದಲ್ಲಿ ಶಶಿಧರ್ ನಿರ್ಮಿಸಿದ್ದ 49.2 ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಅಂಡರ್-16 ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ ಆಳ್ವಾಸ್‌ನ ನಾಗೇಂದ್ರ ಅಣ್ಣಪ್ಪ ನಾಯ್ಕ 14.55 ಎಸೆದು ಹಾಗೂ ಅಂಡರ್-20 ಹುಡುಗರ ಭಾಗದ 1,500 ಮೀ. ಓಟದಲ್ಲಿ ಬೆಂಗಳೂರು ಆ್ಯತ್ಲೆಟಿಕ್ಸ್ ಅಸೋಸಿಯೇಶನ್‌ನ ಈರಪ್ಪ ಹಲಗಣ್ಣ ಕೂಟ ದಾಖಲೆಯನ್ನು ಮಾಡಿದ್ದಾರೆ.
ಆಳ್ವಾಸ್‌ನ ರಿನ್ಸ್ ಜೋಸೆಫ್ ಅಂಡರ್-16 ಬಾಲಕರ 400 ಮೀ. ಓಟದಲ್ಲಿ 50.6 ಸೆಕೆಂಡ್ಸ್ ಕ್ರಮಿಸಿ ನೂತನ ಕೂಟ ದಾಖಲೆ ನಿರ್ಮಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.