State level sports event: ಮೊದಲ ದಿನ 3 ಕೂಟ ದಾಖಲೆ
Team Udayavani, Dec 3, 2023, 11:36 PM IST
ಸಯ್ಯದ್ ಶಾಬೀರ್, ಧನ್ಯಾ ನಾಯಕ್
ಪುತ್ತೂರು: ಇಲ್ಲಿನ ಕೊಂಬೆಟ್ಟು ಮೈದಾನದಲ್ಲಿ ನಡೆಯುತ್ತಿರುವ 17ರ ವಯೋಮಾನದ ಪ್ರೌಢಶಾಲಾ ಬಾಲಕ- ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದ ಮೊದಲನೇ ದಿನ ಮೂರು ಕೂಟ ದಾಖಲೆ ನಿರ್ಮಾಣಗೊಂಡಿತು.
ಬಾಲಕರ 800 ಮೀ. ಓಟದಲ್ಲಿ ವಿದ್ಯಾನಗರ ಕ್ರೀಡಾಶಾಲೆಯ ಸಯ್ಯದ್ ಶಾಬೀರ್ 1.57.05 ಸೆ.ನಲ್ಲಿ ಗುರಿ ತಲುಪಿ 2016-17ರಲ್ಲಿ ಉಡುಪಿ ಜಿಲ್ಲೆಯ ದಿನೇಶ್ ಎಂ. ನಾಯಕ್ (2.00.76) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿದರು. ಬಾಲಕರ ಜಾವೆಲಿನ್ ಎಸೆತದಲ್ಲಿ ಬೀದರ್ ಜಿಲ್ಲೆಯ ಪುಷ್ಪಕ್ ನೆಲವಾಡ್ 57.06 ಮೀ. ದೂರ ಎಸೆದು 2016-17ರಲ್ಲಿ ಬಳ್ಳಾರಿ ಜಿಲ್ಲೆಯ ಸುನಿಲ್ ಕುಮಾರ್ ಎನ್. (53.80 ಮೀ.) ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಬಾಲಕಿಯರ ವಿಭಾಗದ ಹ್ಯಾಮರ್ ಎಸೆತದಲ್ಲಿ ಶಿರಸಿಯ ಧನ್ಯಾ ನಾಯಕ್ 43.34 ಮೀ.ದೂರ ಎಸೆದು, 2022-23ರ ಮೈಸೂರು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ತಾನೇ ಸ್ಥಾಪಿಸಿದ (39.80) ದಾಖಲೆಯನ್ನು ಮುರಿದರು.
ಮೊದಲ ದಿನದ ಫಲಿತಾಂಶದಲ್ಲಿ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುನ್ನಡೆ ಸಾಧಿಸಿದರೆ, ಶಿವಮೊಗ್ಗ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಬಾಲಕರ ವಿಭಾಗದಲ್ಲಿ ಉಡುಪಿ ಜಿಲ್ಲೆ ಮುನ್ನಡೆಯಲ್ಲಿದ್ದು, ಬೆಂಗಳೂರು ವಿದ್ಯಾನಗರ ಕ್ರೀಡಾಶಾಲೆ ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.