ರಾಜ್ಯ ಹಿರಿಯರ ಈಜು ಕೂಟ: ಮೊದಲ ದಿನ 4 ಕೂಟ ದಾಖಲೆ
Team Udayavani, Aug 17, 2017, 11:05 AM IST
ಬೆಂಗಳೂರು: ಉದ್ಯಾನನಗರಿಯ ರಾಮಕೃಷ್ಣ ಹೆಗಡೆ ಈಜು ಕೇಂದ್ರದಲ್ಲಿ ಬುಧವಾರ ರಾಜ್ಯ ಹಿರಿಯರ ಈಜು ಕೂಟಕ್ಕೆ ಚಾಲನೆ ನೀಡಲಾಗಿದೆ. ಮೊದಲ ದಿನದ ಸ್ಪರ್ಧೆಯಲ್ಲಿ 4 ಕೂಟ ದಾಖಲೆ ನಿರ್ಮಾಣವಾಗಿದೆ. ಪುರುಷರ 200 ಮೀ. ಬ್ಯಾಕ್‌ಸ್ಟ್ರೋಕ್‌ನ ಹೀಟ್ಸ್ 1ರಲ್ಲಿ ಶ್ರೀಹರಿ ನಟರಾಜನ್ 2 ನಿಮಿಷ 7.14 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದರು. ಮಹಿಳಾ ವಿಭಾಗದ 200 ಮೀ. ಫ್ರಿಸ್ಟೈಲ್‌ನ ಹೀಟ್ಸ್ 2ರಲ್ಲಿ ವಿ.ಮಾಳವಿಕಾ 2 ನಿಮಿಷ 8.9 ಸೆಕೆಂಡ್ಸ್‌ಗಳಲ್ಲಿ ಗುರಿ ಸೇರಿದರು. ಇನ್ನು ಮಹಿಳಾ 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಹರ್ಷಿತಾ ಜಯರಾಮ್ 1 ನಿಮಿಷ 16.73 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದರು. ಇದೇ ವಿಭಾಗದ ಹೀಟ್ 2ರಲ್ಲಿ ಸಲೋನಿ ದಲಾಲ್ ಕೂಡ 1ನಿಮಿಷ 16.73 ಸೆಕೆಂಡ್ಸ್‌ಗಳಲ್ಲಿ ಗುರಿ ಸೇರಿ ಕೂಟ ದಾಖಲೆ ನಿರ್ಮಿಸಿದರು.
ಒಟ್ಟು ಮೂರು ದಿನ ಕೂಟ ನಡೆಯಲಿದೆ. ಬಸವನಗುಡಿ ಈಜು ಕೇಂದ್ರ, ಪೂಜಾ ಅಕ್ವೆಟಿಕ್ ಸೆಂಟರ್, ಗ್ಲೋಬಲ್ ಸ್ವಿಮ್ಮಿಂಗ್ ಸೆಂಟರ್, ಡಾಲ್ಫಿನ್ ಅಕ್ವೇಟಿಕ್ ಸೆಂಟರ್, ಯಂಗ್ ಚಾಲೆಂಜರ್ ಸ್ವಿಮ್ಮಿಂಗ್ ಕ್ಲಬ್ ಸೇರಿದಂತೆ ಹಲವು ತಂಡಗಳು ಭಾಗವಹಿಸಿವೆ. ಇಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಮಧ್ಯಪ್ರದೇಶದ ಇಂದೋರ್‌ನಲ್ಲಿ ಅ.7ರಿಂದ 11ರವರೆಗೆ ನಡೆಯಲಿರುವ ರಾಷ್ಟ್ರೀಯ ಹಿರಿಯರ ಈಜು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.