ಐಸಿಸಿ ಟೆಸ್ಟ್ ರಾಂಕಿಂಗ್: ಮತ್ತೆ ಅಗ್ರಸ್ಥಾನಕ್ಕೇರಿದ ಸ್ಟೀವ್ ಸ್ಮಿತ್
Team Udayavani, Jun 16, 2021, 5:07 PM IST
ದುಬೈ: ಇಂಗ್ಲೆಂಡ್- ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಸರಣಿ ಅಂತ್ಯವಾದ ಬಳಿಕ ಇದೀಗ ಐಸಿಸಿಯು ಆಟಗಾರರ ರಾಂಕಿಂಗ್ ಬಿಡುಗಡೆ ಮಾಡಿದೆ. ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಅವರು ಮತ್ತೆ ಅಗ್ರ ಸ್ಥಾನಕ್ಕೇರಿದ್ದು, ಮೊದಲ ಸ್ಥಾನದಲ್ಲಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರು ದ್ವಿತೀಯ ಸ್ಥಾನಕ್ಕಿಳಿದಿದ್ದಾರೆ.
ಮೂರನೇ ಸ್ಥಾನದಲ್ಲಿ ಆಸೀಸ್ ನ ಮಾರ್ನಸ್ ಲಬುಶೇನ್ ಇದ್ದು, ಭಾರತ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ಜೋ ರೂಟ್ ಐದನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ:ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ
ಭಾರತದ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಅವರು 747 ಅಂಕಗಳೊಂದಿಗೆ ಜಂಟಿಯಾಗಿ ಆರನೇ ಸ್ಥಾನದಲ್ಲಿದ್ದಾರೆ.
ತಂಡಗಳ ರಾಂಕಿಂಗ್ ನಲ್ಲಿ 123 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ತಂಡ 121 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜೂ.18 ರಂದು ಸೌಥಂಪ್ಟನ್ ನಲ್ಲಿ ಭಾರತ- ನ್ಯೂಜಿಲ್ಯಾಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.