ಧೋನಿಗಿಂತ ಸ್ಮಿತ್ ಬುದ್ಧಿವಂತ: ಈಗ ಸಂಜೀವ್ ಗೊಯೆಂಕಾ ವಿವಾದ
Team Udayavani, May 21, 2017, 3:36 PM IST
ಪುಣೆ: ಎಂ.ಎಸ್.ಧೋನಿ ನಾನು ನೋಡಿದ ಅತೀ ಬುದ್ಧಿವಂತ ವ್ಯಕ್ತಿಗಳಲ್ಲೊಬ್ಬರು, ಆದರೆ ಹಾಲಿ ನಾಯಕ ಸ್ಮಿತ್ ಅವರಿಗಿಂತಲೂ ಬುದ್ಧಿವಂತ: ಇದು ಪುಣೆ ಮಾಲಿಕ ಸಂಜೀವ್ ಗೊಯೆಂಕಾ ಹೇಳಿಕೆ. ಸಂಜೀವ್ ಸಹೋದರ ಹರ್ಷ ಗೊಯೆಂಕಾ ಐಪಿಎಲ್ ಆರಂಭದಲ್ಲಿ ಧೋನಿಯನ್ನು ಬೈದಿದ್ದರು. ಸ್ಮಿತ್ ಧೋನಿಯನ್ನು ಮೀರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು ಅದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲಿಂದ ಅವರು ಬೈಯಿಸಿಕೊಳ್ಳಲು ಆರಂಭವಾಗಿದ್ದು ಇಂದಿಗೂ ನಿಂತಿಲ್ಲ. ಅದರ ಬೆನ್ನಲ್ಲೇ ಅಣ್ಣ ಸಂಜೀವ್ ಹೇಳಿಕೆ ನೀಡಿರುವುದು ಅಭಿಮಾನಿಗಳನ್ನು ಮತ್ತಷ್ಟು ರೊಚ್ಚಿಗೇರಿಸುವ ಸಾಧ್ಯತೆಯಿದೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಸಂಜೀವ್ ಗೊಯೆಂಕಾ ಮೇಲಿನಂತೆ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಕೆಲ ಪಂದ್ಯ ಸೋತ ಬಳಿಕ ಸ್ಮಿತ್ ನಡೆದುಕೊಂಡು ಹಾದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸೋಲು ಅಥವಾ ಗೆಲುವು ಏನೇ ಇರಲಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಸಾಗಿದ ರೀತಿ ತಂಡದ ಮೇಲೆಕಾರಾತ್ಮಕ ಪರಿಣಾಮ ಬೀರಿದೆ ಎಂದು ಗೊಯೆಂಕಾ ಸ್ಮಿತ್ ಕುರಿತ ಹೇಳಿಕೆ ಕುರಿತಂತೆ ಸಮರ್ಥಿಸುತ್ತಾ ಹೋಗಿದ್ದಾರೆ.
ಹರ್ಷ ಏನು ಹೇಳಿದ್ದರು?: ಐಪಿಎಲ್ ಆರಂಭಿಕ ಪಂದ್ಯದಲ್ಲಿ ಪುಣೆ ತಂಡ ಮುಂಬೈಯನ್ನು ಸೋಲಿಸಿತ್ತು. ನೂತನ ನಾಯಕ
ಸ್ಮಿತ್ ಬ್ಯಾಟಿಂಗ್ ಅದಕ್ಕೆ ನೆರವಾಗಿತ್ತು. ಆಗ ಸ್ಮಿತ್‌ರನ್ನು ಹೊಗಳುವ ಭರದಲ್ಲಿ ಹರ್ಷ ಧೋನಿಯನ್ನು ಟೀಕಿಸಿದ್ದರು. ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಸರಿಯಾಗಿದೆ. ಧೋನಿಯನ್ನು ಸ್ಮಿತ್ ಪೂರ್ಣ ಮಸುಕು ಮಾಡಿದ್ದಾರೆ. ಕಾಡಿನ ರಾಜ ಯಾರೆಂದು ಸಾಬೀತು ಮಾಡಿದ್ದಾರೆ ಎಂದು ಹರ್ಷ ಟ್ವೀಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.