ಶಕೀಬ್ ಲಂಕಾಗೆ ಬಂದರೆ ಜನರು ಕಲ್ಲಲ್ಲಿ ಹೊಡೆಯುತ್ತಾರೆ: ಮ್ಯಾಥ್ಯೂಸ್ ಸಹೋದರ
Team Udayavani, Nov 9, 2023, 3:08 PM IST
ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್ 2023ರ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಪಂದ್ಯವು ಅನಿರೀಕ್ಷಿತ ಘಟನೆಯೊಂದರ ಕಾರಣ ದೊಡ್ಡ ಸುದ್ದಿಯಾಗಿತ್ತು. ಲಂಕಾದ ಹಿರಿದ ಆಲ್ ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ಅವರು ಟೈಮ್ ಆಟಾಗಿ ಯಾವುದೇ ಎಸೆತ ಎದುರಿಸದೆ ಪೆವಿಲಿಯನ್ ಗೆ ತೆರಳಬೇಕಾಯಿತು. ಮ್ಯಾಥ್ಯೂಸ್ ಅವರು ಮೈದಾನದಲ್ಲಿ ಬಾಂಗ್ಲಾ ನಾಯಕ ಶಕೀಬ್ ಗೆ ತನ್ನ ಹೆಲ್ಮೆಟ್ ಸರಿಯಿಲ್ಲದ ಬಗ್ಗೆ ಹೇಳಿದರೂ ಶಕೀಬ್ ಅವಕಾಶ ನೀಡಿರಲಿಲ್ಲ.
ಈ ಘಟನೆಯ ಬಗ್ಗೆ ಮಿಶ್ರ ಅಭಿಪ್ರಾಯಗಳು ಕೇಳಿ ಬಂದಿದೆ. ಕೆಲವರು ಶಕೀಬ್ ನಿಯಮದ ಪ್ರಕಾರ ನಡೆದುಕೊಂಡಿದ್ದಾರೆ ಎಂದರೆ ಮತ್ತೆ ಕೆಲವರು ಶಕೀಬ್ ಕ್ರೀಡಾ ಸ್ಪೂರ್ತಿ ಮೆರೆಯಬೇಕಿತ್ತು ಎಂದಿದ್ದಾರೆ.
ಪಂದ್ಯದ ಬಳಿಕ ಮ್ಯಾಥ್ಯೂಸ್ ಕೂಡಾ ಈ ಬಗ್ಗೆ ಕಿಡಿಕಾರಿದ್ದರು. “ಸಂಪೂರ್ಣವಾಗಿ ಅವಮಾನಕರ. ನಾವೆಲ್ಲರೂ ಗೆಲ್ಲಲು ಆಡುತ್ತೇವೆ ಆದರೆ ತಂಡ ಅಥವಾ ಆಟಗಾರ ವಿಕೆಟ್ ಪಡೆಯಲು ಅಂತಹ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ” ಎಂದು ಹೇಳಿದ್ದರು.
ಇದೀಗ ಮ್ಯಾಥ್ಯೂಸ್ ಸಹೋದರ ಟ್ರಾವಿಸ್ ಅವರು ಶಕೀಬ್ ನಡೆಯನ್ನು ಟೀಕಿಸಿದ್ದಾರೆ. “ನಾವು ತುಂಬಾ ನಿರಾಶೆಗೊಂಡಿದ್ದೇವೆ. ಬಾಂಗ್ಲಾದೇಶದ ನಾಯಕನಿಗೆ ಕ್ರೀಡಾ ಮನೋಭಾವವಿಲ್ಲ. ಸಜ್ಜನರ ಆಟದಲ್ಲಿ ಮಾನವೀಯತೆಯನ್ನು ತೋರಿಸಲಿಲ್ಲ. ಶಕೀಬ್ ಅವರನ್ನು ಶ್ರೀಲಂಕಾದಲ್ಲಿ ಸ್ವಾಗತಿಸುವುದಿಲ್ಲ. ಯಾವುದೇ ಅಂತಾರಾಷ್ಟ್ರೀಯ ಅಥವಾ ಎಲ್ ಪಿಎಲ್ ಪಂದ್ಯಗಳನ್ನು ಅವರು ಇಲ್ಲಿಗೆ ಬಂದರೆ ಆಡಲು, ಅವನ ಮೇಲೆ ಕಲ್ಲುಗಳನ್ನು ಎಸೆಯಲಾಗುತ್ತದೆ, ಅಥವಾ ಅವರು ಅಭಿಮಾನಿಗಳ ಕಿರಿಕಿರಿಯನ್ನು ಎದುರಿಸಬೇಕಾಗುತ್ತದೆ” ಎಂದು ಟ್ರೆವಿಸ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.