ಸ್ತ್ರಿ-ಪುರುಷರಿಬ್ಬರೂ ಆಡುವ ಮಿಶ್ರ ವಿಭಾಗ!
Team Udayavani, Nov 15, 2017, 8:13 AM IST
ಪುಣೆ: ಬ್ಯಾಡ್ಮಿಂಟನ್, ಟೆನಿಸ್‌ನಲ್ಲಿ ಮಹಿಳೆ ಮತ್ತು ಪುರುಷರು ಇಬ್ಬರೂ ಸೇರಿ ಆಡುವ ಮಿಶ್ರ ಡಬಲ್ಸ್ ಭಾರೀ ಜನಪ್ರಿಯವಾಗಿದೆ. ಅದೇ ಮಾದರಿ ಯನ್ನು ಹಾಕಿಯಲ್ಲೂ ಅಳವಡಿಸುವ ಯೋಜನೆಯೊಂದನ್ನು ಹಾಕಿ ಇಂಡಿಯಾ ಮಾಡಿದೆ. ಇದೇ ಶನಿವಾರದಿಂದ ಪುಣೆಯಲ್ಲಿ ಈ ವಿಶೇಷ ಪ್ರಯೋಗ ಜಾರಿಯಾಗಲಿದೆ. ಇದರ ಮೂಲಕ ಹಾಕಿಯಲ್ಲೂ ಲಿಂಗ ಸಮಾನತೆ ತರುವ ಯೋಜನೆಗೆ ಮೊದಲ ಬಾರಿ ವೇದಿಕೆ ಸಿಗಲಿದೆ.
ವಿಶೇಷವೆಂದರೆ, ಹಾಕಿಯ ಈ ಮಿಶ್ರ ವಿಭಾಗವನ್ನು ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಎಫ್ಐಎಚ್‌ನ ಪ್ರತಿನಿಧಿಯೂ ವೀಕ್ಷಿಸಲಿದ್ದಾರೆ. 2024ರ ಒಲಿಂಪಿಕ್ಸ್ ದೃಷ್ಟಿಯಿಂದ ಹಾಕಿ ಇಂಡಿಯಾ ಈ ಪ್ರಯೋಗಕ್ಕೆ ಹೊರಟಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಹಾಕಿಯಲ್ಲೂ ಲಿಂಗಸಮಾನತೆ ಬರುವ ಸಮಯ ದೂರವಿಲ್ಲ.
ಏನಿದರ ಉದ್ದೇಶ?
ಕ್ರೀಡೆಯಲ್ಲಿ ಲಿಂಗ ಸಮಾನತೆ ಬರಬೇಕು ಎನ್ನುವುದು ಹಲವರ ಬೇಡಿಕೆ. ಇದಕ್ಕೆ ಇದುವರೆಗೆ ಬ್ಯಾಡ್ಮಿಂಟನ್, ಟೆನಿಸ್‌ನಲ್ಲಿ ಮಾತ್ರ ಅವಕಾಶ ಸಿಕ್ಕಿದೆ. ಈ ಎರಡೂ ಕ್ರೀಡೆಗಳಲ್ಲಿ ಮಿಶ್ರ ವಿಭಾಗ ಜನಪ್ರಿಯವಾಗಿದೆ. ಅಂತಹ ಸಮಾನತೆಯನ್ನು 10, 11 ಮಂದಿ ಆಡುವ ತಂಡ ವಿಭಾಗದಲ್ಲಿ ತರುವುದು ಕಷ್ಟ ಎಂಬ ಕಾರಣಕ್ಕೆ ಹಾಕಿ, ಕ್ರಿಕೆಟ್, ಫುಟ್‌ಬಾಲ್‌ನಲ್ಲಿ ಅದು ಜಾರಿಯಾಗಿರಲಿಲ್ಲ. ಒಂದು ವೇಳೆ ಈ ಪ್ರಯೋಗ ಹಾಕಿಯಲ್ಲಿ ಯಶಸ್ವಿಯಾದರೆ ಫುಟ್‌ಬಾಲ್, ಕ್ರಿಕೆಟ್‌ನಲ್ಲೂ ಶೀಘ್ರದಲ್ಲೇ ಕಾಣಿಸಿಕೊಳ್ಳಬಹುದು.
ಹೇಗಿರುತ್ತೆ ಮಿಶ್ರ ವಿಭಾಗ?
ಈ ವಿಭಾಗದ ಒಂದು ತಂಡದಲ್ಲಿ ಒಟ್ಟಾರೆ 9 ಮಂದಿ ಇರುತ್ತಾರೆ. ಅದರಲ್ಲಿ 5 ಮಂದಿ ಆಡಲಿಳಿಯುತ್ತಾರೆ. ಕನಿಷ್ಠ 2 ಮಹಿಳೆಯರಿಗೆ ಅವಕಾಶ ನೀಡುವುದು ಕಡ್ಡಾಯ. ಉಳಿದಂತೆ ತಂಡದ ರಚನೆ ಹೇಗಿರಬೇಕು ಎನ್ನುವುದು ತಂಡಕ್ಕೆ ಬಿಟ್ಟಿದ್ದಾಗಿರುತ್ತದೆ. ಮೈದಾನದ ಗಾತ್ರ ಮಾಮೂಲಿಯಷ್ಟು ದೊಡ್ಡದಾಗಿರದೇ ಅದರ ಅರ್ಧಗಾತ್ರಕ್ಕೆ ಇಳಿಯಲಿದೆ.
ಯಾರ್ಯಾರು ಆಡುತ್ತಾರೆ?
ಪುರುಷರ ಹಾಕಿಯ ಖ್ಯಾತ ತಾರೆಯರಾದ ದೇವೇಂದ್ರ ವಾಲ್ಮೀಕಿ, ಮಹಿಳಾ ತಂಡದ ತಾರೆಯರಾದ ರಾಣಿ ರಾಮ್‌ಪಾಲ್, ಸವಿತಾ ರಾಣಿ, ಗುರುಪ್ರೀತ್ ಸೇರಿದಂತೆ ಹಲವರು ಈ ಪ್ರಯೋಗದಲ್ಲಿ ಕಾಣಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.