ಇಂದೇ ಕೊನೆಯ ಆಟ..; ಕ್ರಿಕೆಟ್ ಗೆ ವಿದಾಯ ಹೇಳಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
Team Udayavani, Jul 30, 2023, 8:19 AM IST
ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಕಂಡ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಸ್ಟುವರ್ಟ್ ಬ್ರಾಡ್ ಅವರು ಕ್ರಿಕೆಟ್ ವಿಶ್ವಕ್ಕೆ ಅಚ್ಚರಿ ಮೂಡಿಸಿದ್ದಾರೆ. ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಅವರು ತಮ್ಮ ವಿದಾಯ ಘೋಷಣೆ ಮಾಡಿದ್ದು, ಇದೇ ತಮ್ಮ ಕೊನೆಯ ಪಂದ್ಯ ಎಂದು ಹೇಳಿಕೊಂಡಿದ್ದಾರೆ.
37 ವರ್ಷದ ಸ್ಟುವರ್ಟ್ ಬ್ರಾಡ್ ಅವರು ತಮ್ಮ 17 ವರ್ಷದ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. 2007ರ ಟಿ20 ವಿಶ್ವಕಪ್ ನಲ್ಲಿ ಒಂದು ಓವರ್ ನಲ್ಲಿ ಆರು ಸಿಕ್ಸರ್ ಚಚ್ಚಿಸಿಕೊಂಡು ಇಂಗ್ಲೆಂಡ್ ಗೆ ಖಳನಾಯಕರಾಗಿದ್ದ ಬ್ರಾಡ್, ಕ್ರಿಕೆಟ್ ಜೀವನ ಅಂತ್ಯಗೊಳಿಸುವ ಸಂದರ್ಭದಲ್ಲಿ ಇಂಗ್ಲೆಂಡ್ ಲೆಜೆಂಡ್ ಆಗಿ ಬೆಳೆದಿದ್ದಾರೆ.
600 ಟೆಸ್ಟ್ ವಿಕೆಟ್ ಗಳನ್ನು ಪಡೆದ ಇಬ್ಬರು ವೇಗಿಗಳಲ್ಲಿ ಒಬ್ಬರಾದ ಬ್ರಾಡ್, ಆಶಸ್‌ನಲ್ಲಿ 150+ ಟೆಸ್ಟ್ ವಿಕೆಟ್‌ಗಳನ್ನು ಗಳಿಸಿದ ಮೂರನೇ ಬೌಲರ್ ಆಗಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ತಮ್ಮ ವೃತ್ತಿಜೀವನವನ್ನು ಮುಗಿಸುತ್ತಿದ್ದಾರೆ.
ಒಟ್ಟು 165 ಟೆಸ್ಟ್ ಪಂದ್ಯಗಳನ್ನು ಆಡಿರುವ ಬ್ರಾಡ್ 602 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಆರಂಭಿಕ ದಿನಗಳಲ್ಲಿ ತನ್ನ ಬ್ಯಾಟಿಂಗ್ ಗೂ ಹೆಸರಾಗಿದ್ದ ಬ್ರಾಡ್, 3656 ರನ್ ಕೂಡಾ ಗಳಿಸಿದ್ದಾರೆ. ಪಾಕಿಸ್ಥಾನ ವಿರುದ್ದದ 167 ರನ್ ಗಳಿಸಿದ್ದು ಅವರು ಜೀವನಶ್ರೇಷ್ಠ ಬ್ಯಾಟಿಂಗ್ ಸಾಧನೆ. 2016ರಲ್ಲಿ ಕೊನೆಯದಾಗಿ ಏಕದಿನ ಪಂದ್ಯವಾಡಿದ್ದ ಬ್ರಾಡ್ 178 ವಿಕೆಟ್ ಕಬಳಿಸಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 65 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ:ಹೊಸ ತಾಲೂಕು; BEO ನೇಮಕಕ್ಕೆ ತುಕ್ಕು ! ಮುಗಿಯದ ಹಳೇ ತಾಲೂಕು ಕೇಂದ್ರ ಅಲೆದಾಟ
ಆ್ಯಶಸ್ ಟೆಸ್ಟ್ ನ 3ನೇ ದಿನದ ಕೊನೆಯಲ್ಲಿ ಸ್ಕೈ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಬ್ರಾಡ್, “ಇದೊಂದು ಅದ್ಭುತ ಪಯಣವಾಗಿದೆ, ನಾಟಿಂಗ್ ಹ್ಯಾಮ್ ಶೈರ್ ಮತ್ತು ಇಂಗ್ಲೆಂಡ್ ಬ್ಯಾಡ್ಜ್ ಗಳನ್ನು ಧರಿಸುವುದು ಒಂದು ದೊಡ್ಡ ಸವಲತ್ತು. ನಾನು ಎಂದಿನಂತೆ ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದೇನೆ. ನಾನು ಯಾವಾಗಲೂ ಉತ್ತಮವಾಗಿ ಆಡುತ್ತಿರುವಾಗ ಆಟ ಮುಗಿಸಲು ಬಯಸುತ್ತಿದ್ದೆ. ಈ ಸರಣಿಯು ನಾನು ಭಾಗವಾಗಿರುವ ಅತ್ಯಂತ ಆನಂದದಾಯಕ ಸರಣಿಯಲ್ಲಿ ಒಂದಾಗಿದೆ ಎಂದು ಭಾವಿಸುತ್ತಿದೆ.” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.