ಮತ್ತೆ ಅಶಿಸ್ತು ಪ್ರದರ್ಶನ: ಫುಟ್ಬಾಲಿಗ ಸ್ವಾರೆಜ್ಗೆ 2 ಪಂದ್ಯ ನಿಷೇಧ
Team Udayavani, Feb 11, 2017, 3:45 AM IST
ಬಾರ್ಸಿಲೋನಾ: ಇಟಲಿ ಆಟಗಾರ ಚಿಲಿನಿಗೆ 2014ರ ವಿಶ್ವಕಪ್ ಫುಟ್ಬಾಲ್ ಪಂದ್ಯವೊಂದರ ವೇಳೆ ಕಚ್ಚಿ 4 ತಿಂಗಳು ಅಮಾನತ್ತುಗೊಂಡಿದ್ದ ಉರುಗ್ವೆ ಆಟಗಾರ ಲೂಯಿಸ್ ಸ್ವಾರೆಜ್ಗೆ ಮತ್ತೂಮ್ಮೆ ಅಶಿಸ್ತಿನ ಕಾರಣದಿಂದ 2 ಪಂದ್ಯದಿಂದ ನಿಷೇಧಕ್ಕೆ ಒಳಗಾಗಿದ್ದಾರೆ.
ಬಾರ್ಸಿಲೋನಾ ಮತ್ತು ರಿಯಲ್ ಮ್ಯಾಡ್ರಿಡ್ ತಂಡಗಳ ನಡುವಿನ ಕಿಂಗ್ ಕಪ್ ಸೆಮಿಫೈನಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಸ್ವಾರೆಜ್ ಖ್ಯಾತ ಫುಟ್ಬಾಲಿಗ ಮೆಸ್ಸಿ ಒಳಗೊಂಡ ಬಾರ್ಸಿಲೋನಾ ತಂಡದ ಪರ ಆಡುತ್ತಿದ್ದರು. ಪಂದ್ಯದ ವೇಳೆ ಸ್ವಾರೆಜ್ ಅತಿರೇಕದ ವರ್ತನೆ ಪ್ರದರ್ಶಿಸಿದ್ದರು. ಒಂದು ಬಾರಿ ರೆಫ್ರಿ ಹಳದಿ ಕಾರ್ಡ್ ನೀಡಿದ್ದರು. ಈ ವೇಳೆ ರೆಫ್ರಿ ಜತೆಗೆ ಸ್ವಾರೆಜ್ ವಾಗ್ವಾದ ಕೂಡ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಂಘಟಕರು ಸ್ವಾರೆಜ್ಗೆ 2 ಪಂದ್ಯದಿಂದ ನಿಷೇಧ ಹೇರಿದ್ದಾರೆ ಎನ್ನಲಾಗಿದೆ. ಸದ್ಯ ಅಲವೆಸ್ ಕ್ಲಬ್ ವಿರುದ್ಧದ ಫೈನಲ್ ಪಂದ್ಯಕ್ಕೆ ಸ್ವಾರೆಜ್ ಲಭ್ಯವಿರುವುದಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಾರ್ಸಿಲೋನಾ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.