ಅಜ್ಲಾನ್ ಶಾ ಹಾಕಿ: ಅಯರ್‌ಲ್ಯಾಂಡ್ ವಿರುದ್ಧ ಭಾರತಕ್ಕೆ ಸೋಲು
Team Udayavani, Mar 10, 2018, 7:30 AM IST
ಹೊಸದಿಲ್ಲಿ: ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಅಜ್ಲಾನ್ ಶಾ ಹಾಕಿ ಕೂಟದಲ್ಲಿ ಅಯರ್‌ಲ್ಯಾಂಡ್ ವಿರುದ್ಧ 2-3 ಗೋಲುಗಳಿಂದ ಸೋಲುಂಡಿದೆ. ಈ ಮೂಲಕ ಭಾರತಕ್ಕೆ ಫೈನಲ್‌ಗೇರಲು ಇದ್ದ ಸಣ್ಣ ಅವಕಾಶವೂ ಮಣ್ಣುಪಾಲಾಗಿದೆ. ಒಂದು ವೇಳೆ ಭಾರತ ಗೆದ್ದಿ ದ್ದರೆ, ಇತರ ತಂಡಗಳ ಫಲಿತಾಂಶದ ಮೇಲೆ ಫೈನಲ್‌ಗೇರುವ ಅವಕಾಶವಿತ್ತು. ಆದರೆ ಈಗ ಸೋತಿರುವುದ ರಿಂದ ಎಲ್ಲ ಲೆಕ್ಕಾಚಾರಗಳು ಪಲ್ಟಿ ಹೊಡೆದಿವೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಪರ ರಮಣ್‌ದೀಪ್ ಸಿಂಗ್ (10ನೇ ನಿ.), ಅಮಿತ್ ರೋಹಿದಾಸ್ (26ನೇ) ತಲಾ ಒಂದು ಗೋಲು ಸಿಡಿಸಿದರು. ಅಯರ್‌ಲ್ಯಾಂಡ್ ಪರ ಶಾನೆ ಒಡೊನೊಗೆ (24ನೇ), ಸೀನ್ ಮರ್ರೆ (36ನೇ), ಕೂಲೆ (42ನೇ) ತಲಾ ಒಂದು ಗೋಲು ದಾಖಲಿಸಿದರು.
ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿತ್ತು. ಈ ನಿಟ್ಟಿನಲ್ಲಿ ಭಾರತದ ಹೋರಾಟ ಆರಂಭದಲ್ಲಿ ಉತ್ತಮವಾಗಿಯೇ ಇತ್ತು. ಆದರೆ, ಅನಂತರದ ಹಂತದಲ್ಲಿ ಅಯರ್‌ಲ್ಯಾಂಡ್ ಪಂದ್ಯವನ್ನು ತನ್ನ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
2ನೇ ಅವಧಿಯಲ್ಲಿ ಪಂದ್ಯಕ್ಕೆ ತಿರುವು
ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿದ್ದ ಭಾರತಕ್ಕೆ 2ನೇ ಅವಧಿಯಲ್ಲಿ ಅಯರ್‌ಲ್ಯಾಂಡ್ ತಿರುಗೇಟು ನೀಡಿತು. 36 ಮತ್ತು 42ನೇ ನಿಮಿಷದಲ್ಲಿ ಅಯರ್‌ಲ್ಯಾಂಡ್ ಆಟಗಾರರು ಗೋಲು ದಾಖಲಿಸಿದರು. ಆದರೆ 2ನೇ ಅವಧಿಯಲ್ಲಿ ಭಾರತಕ್ಕೆ ಒಂದು ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತಕ್ಕೆ ಸೋಲು ಎದುರಾಯಿತು.
1 ಪಂದ್ಯದಲ್ಲಿ ಮಾತ್ರ ಗೆಲುವು
ಭಾರತ ಕೂಟದಲ್ಲಿ 5 ಪಂದ್ಯವನ್ನು ಆಡಿದೆ. ಅದರಲ್ಲಿ ಮಲೇಶ್ಯ ವಿರುದ್ಧ ಮಾತ್ರ 5-1 ರಿಂದ ಗೆಲುವು ಸಾಧಿಸಿದೆ. ಇದು ಭಾರತಕ್ಕೆ ಕೂಟದಲ್ಲಿ ಸಿಕ್ಕ ಏಕೈಕ ಗೆಲುವಾಗಿದೆ. ಉಳಿದಂತೆ ಇಂಗ್ಲೆಂಡ್ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದೆ.
ಇಂದು 5ನೇ ಸ್ಥಾನಕ್ಕೆ ಹೋರಾಟ
ಶನಿವಾರ ಕೂಟದಲ್ಲಿನ 5ನೇ ಸ್ಥಾನಕ್ಕಾಗಿ ಭಾರತ ಮತ್ತು ಅಯರ್‌ಲ್ಯಾಂಡ್ ತಂಡಗಳು ಮುಖಾ ಮುಖೀಯಾಗಲಿವೆ. ಲೀಗ್ ಹಂತದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಒಂದೇ ದಿನದಲ್ಲಿ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.