ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್ ಸುಂದರ್ ಗುರ್ಜಾರ್‌ಗೆ ಚಿನ್ನ
Team Udayavani, Jul 16, 2017, 4:00 AM IST
ಹೊಸದಿಲ್ಲಿ: ಭಾರತದ ಸುಂದರ್ ಸಿಂಗ್ ಗುರ್ಜಾರ್ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ಐಪಿಸಿ ವಿಶ್ವ ಪ್ಯಾರಾ ಆ್ಯತ್ಲೆಟಿಕ್ ಕೂಟದ ಜಾವೆಲಿನ್ ಎಫ್ 46 ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಪ್ಯಾರಾಲಿಂಪಿಕ್ ಚಿನ್ನ ವಿಜೇತ ದೇವೇಂದ್ರ ಝಝಾರಿಯ ಅವರ ಅನುಪಸ್ಥಿತಿಯಲ್ಲಿ ಸ್ಪರ್ಧಿಸಿದ ಸುಂದರ್ ತನ್ನ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಗೆದ್ದರು. 60.36 ಮೀ. ದೂರ ಎಸೆಯುವ ಮೂಲಕ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ರಿಂಕು ಸ್ವಲ್ಪದರಲ್ಲಿ ಕಂಚು ಗೆಲ್ಲಲು ವಿಫಲರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ತಾಂತ್ರಿಕ ಕಾರಣಗಳಿಗಾಗಿ ಸುಂದರ್ ಅವರನ್ನು ರಿಯೋ ಪ್ಯಾರಾಲಿಂಪಿಕ್ಸ್‌ನ ಈ ವಿಭಾಗದಿಂದ ಅನರ್ಹಗೊಳಿಸಲಾಗಿತ್ತು.
ರಿಯೋದಲ್ಲಿ ನನ್ನನ್ನು ಅನರ್ಹಗೊಳಿಸಿದ್ದಕ್ಕೆ ಭಾರೀ ನಿರಾಶೆಯಾಗಿತ್ತು. ಯಾಕೆಂದರೆ ಪದಕ ಗೆಲ್ಲಲು ನಾನು ಕಠಿನ ಮತ್ತು ಛಲದಿಂದ ಸಿದ್ಧತೆ ನಡೆಸಿದ್ದೆ. ನನ್ನ ಆತ್ಮವಿಶ್ವಾಸ ಪೂರ್ತಿಯಾಗಿ ಹೊರಟುಹೋಗಿತ್ತು. ಆದರೆ ಇಲ್ಲಿ ಚಿನ್ನ ಗೆಲ್ಲುವ ಮೂಲಕ ಸ್ವಲ್ಪಮಟ್ಟಿಗಾದರೂ ಖುಷಿಯಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ಗಾಗಿ ನಾನು ಕಠಿನ ತರಬೇತಿ ನಡೆಸಿದ್ದೆ. ಆದರೆ ರಿಯೋ ಸ್ಪರ್ಧೆಗಾಗಿ ಮಾಡಿದಷ್ಟು ಅಲ್ಲ ಎಂದು ಚಿನ್ನ ಗೆದ್ದ ಬಳಿಕ ಸುಂದರ್ ಹೇಳಿದರು.
ಇಲ್ಲಿ ಚಿನ್ನ ಗೆದ್ದಿರುವುದು ಮುಂಬರುವ ದಿನಗಳಲ್ಲಿ ಇದಕ್ಕಿಂತ ಮಿಗಿಲಾದ ನಿರ್ವಹಣೆ ಪ್ರದರ್ಶಿಸಲು ಪ್ರೇರಣೆ ನೀಡಲಿದೆ. ನಾನೀಗ ಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಮತ್ತು ಮುಂದಿನ ವರ್ಷ ನಡೆಯುವ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ನಿರ್ವಹಣೆ ನೀಡಲು ಪ್ರಯತ್ನಿಸಲಿದ್ದೇನೆ. ಇಲ್ಲಿ ವಿಶ್ವದಾಖಲೆ ಮುರಿಯಲು ಸಾಧ್ಯವಾಗದಿರುವುದು ನಿರಾಸೆಯಾಗಿದೆ. ಆದರೆ ಚಿನ್ನ ಗೆದ್ದಿರುವುದು ತೃಪ್ತಿ ನೀಡಿದೆ ಎಂದವರು ತಿಳಿಸಿದರು.
ರೋಹrಕ್‌ನ 18ರ ಹರೆಯದ ಪ್ರತಿಭೆ ರಿಂಕು ಜಾವೆಲಿನ್ ಎಫ್ 46 ವಿಭಾಗದಲ್ಲಿ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದರು. ರಿಯೋದಲ್ಲಿ ಐದನೇ ಸ್ಥಾನ ಪಡೆದಿದ್ದ ರಿಂಕು 55.12 ಮೀ. ದೂರ ಎಸೆದು ತನ್ನ ವೈಯಕ್ತಿಕ ಶ್ರೇಷ್ಠ ಸಾಧನೆಗೈದರೂ ಸ್ವಲ್ಪದರಲ್ಲಿ ಕಂಚು ಗೆಲ್ಲಲು ವಿಫಲರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಪದಕ ತಪ್ಪಿರುವುದು ನನ್ನ ದುರದೃಷ್ಟ. ಆದರೆ ಈ ಮಾಸಾಂತ್ಯದಲ್ಲಿ ಜೂನಿಯರ್ ವಿಶ್ವ ಸ್ಪರ್ಧೆ ನಡೆಯಲಿದೆ ಮತ್ತು ಅಲ್ಲಿ ವಿಶ್ವ ದಾಖಲೆ ಸ್ಥಾಪಿಸಲು ಪ್ರಯತ್ನಿಸುವೆ ಎಂದು ರಿಂಕು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.