ಗಾವಸ್ಕರ್‌ಗೆ ಕ್ರೀಸಿನಲ್ಲೇ ಕ್ರಿಕೆಟ್ ಪಾಠ ಮಾಡಿದ್ದ ವಿಂಡೀಸಿನ ಕನ್ಹಾಯ್!
Team Udayavani, Jun 8, 2020, 11:01 AM IST
ಮುಂಬಯಿ: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್, ಭಾರತೀಯ ಮೂಲದ ರೋಹನ್ ಕನ್ಹಾಯ್ ಅಂದರೆ ಸುನೀಲ್ ಗಾವಸ್ಕರ್ ಅವರಿಗೆ ಎಲ್ಲಿಲ್ಲದ ಅಭಿಮಾನ. ಗಾವಸ್ಕರ್ ಆರಾಧಿಸುತ್ತಿದ್ದ ಕ್ರಿಕೆಟಿಗರಲ್ಲಿ ಕನ್ಹಾಯ್ ಗೆ ಅಗ್ರಸ್ಥಾನ. ಇವರ ಸ್ಫೂರ್ತಿಯಲ್ಲೇ ಗಾವಸ್ಕರ್ ತಮ್ಮ ಮಗನಿಗೆ ರೋಹನ್ ಎಂದು ನಾಮಕರಣ ಮಾಡಿದ್ದರು. ಈ ಲಾಕ್‌ಡೌನ್ ಕಾಲದಲ್ಲಿ ತಮ್ಮ ಮತ್ತು ರೋಹನ್ ಕನ್ಹಾಯ್ ನಡುವಿನ ಆತ್ಮೀಯತೆ, 1971ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರು ತಮ್ಮ ಬ್ಯಾಟಿಂಗ್ ಯಶಸ್ಸಿಗೆ ಹೇಗೆ ಕಾರಣರಾದರು ಎಂಬ ಸ್ವಾರಸ್ಯಕರ ಪ್ರಸಂಗವನ್ನು ಗಾವಸ್ಕರ್ ಬಿಚ್ಚಿಟ್ಟಿದ್ದಾರೆ.
1971ರ ವೆಸ್ಟ್ ಇಂಡೀಸ್ ಪ್ರವಾಸ ಭಾರತದ ಪಾಲಿಗೆ ಐತಿಹಾಸಿಕ. ಆ ಭಯಾನಕ ವೇಗಿಗಳ ನಾಡಿನಲ್ಲಿ ಗಾವಸ್ಕರ್ ಎಂಬ ಧೈರ್ಯಶಾಲಿ ಬ್ಯಾಟ್ಸ್ ಮನ್ ಒಬ್ಬನ ಉದಯವಾಗುತ್ತದೆ. ಗಾವಸ್ಕರ್ ಬರೋಬ್ಬರಿ 774 ರನ್ ವಿಶ್ವದಾಖಲೆಯೊಂದಿಗೆ ಕ್ರಿಕೆಟ್ ಜಗತ್ತಿ ನಲ್ಲಿ ಸಂಚಲನ ಮೂಡಿಸುತ್ತಾರೆ. ಆಗ ರೋಹನ್ ಕನ್ಹಾಯ್ ಎದುರಾಳಿ ತಂಡದ ಪ್ರಧಾನ ಬ್ಯಾಟ್ಸ್ ಮನ್. ಯುವ ಗಾವಸ್ಕರ್ ಆಟಕ್ಕೆ ಅವರು ಫಿದಾ ಆಗಿದ್ದರು. ಇದನ್ನು ನೆನಪಿಸಿಕೊಂಡ “ಸನ್ನಿ’, ತನ್ನ ಶತಕಕ್ಕೆ ಕನ್ಹಾಯ್ ಹೇಗೆ ಸ್ಫೂರ್ತಿ ತುಂಬಿದ್ದರು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಶತಕಕ್ಕೆ ಸ್ಫೂರ್ತಿ…
“ಅದು ನನ್ನ ಮೊದಲ ಸರಣಿ. ನಾನು ಕೆಟ್ಟ ಹೊಡೆತ ಬಾರಿಸಿದಾಗಲೆಲ್ಲ, ಓವರ್ ಮುಗಿದೊಡನೆ ರೋಹನ್ ಕನ್ಹಾಯ್ ನನ್ನ ಬಳಿ ಬರುತ್ತಿದ್ದರು. ಸ್ಲಿಪ್ ವಿಭಾಗದತ್ತ ಕರೆದುಕೊಂಡು ಹೋಗಿ, ಕೀಪರ್‌ಗೆ ಕೇಳದ ರೀತಿಯಲ್ಲಿ “ಸ್ವಲ್ಪ ತಾಳ್ಮೆಯಿಂದಿರು, ನಿನಗೆ ಶತಕದ ಆಸೆ ಇಲ್ಲವೇ’ ಎಂದು ನನ್ನ ಕಿವಿಯಲ್ಲಿ ಉಸುರುತ್ತಿದ್ದರು. ಅವರೋ ಎದುರಾಳಿ ಆಟಗಾರ. ನನಗೆ ಈ ರೀತಿ ಮಾರ್ಗದರ್ಶನ ನೀಡುವುದೆಂದರೆ, ನನ್ನ ಶತಕವನ್ನು ಕಾಣುವ ಆಸೆ ವ್ಯಕ್ತಪಡಿಸುವುದೆಂದರೆ ನಿಜಕ್ಕೂ ಕಲ್ಪಿಸಿಕೊಳ್ಳಲಿಕ್ಕೂ ಆಗದ ಸಂಗತಿಯಾಗಿತ್ತು’ ಎಂದು ಗಾವಸ್ಕರ್ 5 ದಶಕಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.