ಜೈದೇವ್ ಉನಾದ್ಕತ್ ಹ್ಯಾಟ್ರಿಕ್; ಪುಣೆಗೆ ಪ್ಲೇ-ಆಫ್ ಖಾತ್ರಿ
Team Udayavani, May 7, 2017, 12:24 PM IST
ಹೈದರಾಬಾದ್: ಎಡಗೈ ಬೌಲರ್ ಜೈದೇವ್ ಉನಾದ್ಕತ್ ಅಂತಿಮ 2 ಓವರ್‌ಗಳಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಉಡಾಯಿಸಿ, ಹೈದರಾಬಾದನ್ನು ಅವರದೇ ಅಂಗಳದಲ್ಲಿ ಮಗುಚಿ ಪುಣೆಯನ್ನು ಪ್ಲೇ-ಆಫ್ ಸುತ್ತಿನ ಸಮೀಪ ನಿಲ್ಲಿಸಿದ್ದಾರೆ.
ಶನಿವಾರದ ಮೊದಲ ಪಂದ್ಯದಲ್ಲಿ ಪುಣೆ ಹಾಲಿ ಚಾಂಪಿಯನ್ ಹೈದರಾಬಾದನ್ನು 12 ರನ್ನುಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಪುಣೆ 8 ವಿಕೆಟಿಗೆ 148 ರನ್ ಗಳಿಸಿದರೆ, ಹೈದರಾಬಾದ್ 9 ವಿಕೆಟಿಗೆ 136 ರನ್ ಮಾಡಿ ಸೋತಿತು. ಪುಣೆ ಮೊದಲ ಸುತ್ತಿನ ಪಂದ್ಯದಲ್ಲೂ ವಾರ್ನರ್ ಪಡೆಗೆ ಸೋಲುಣಿಸಿತ್ತು. ಈ ಜಯದೊಂದಿಗೆ ಪುಣೆ 12 ಪಂದ್ಯಗಳಿಂದ 16 ಅಂಕ ಸಂಪಾದಿಸಿತು.
ಉನಾದ್ಕತ್ ಮೇಡನ್-ಹ್ಯಾಟ್ರಿಕ್
ಯುವರಾಜ್ ಸಿಂಗ್ ಕ್ರೀಸಿನಲ್ಲಿರುವಷ್ಟು ಹೊತ್ತೂ ಹೈದರಾಬಾದ್ ಗೆಲುವು ನಿಶ್ಚಿತ ಎಂಬ ಸ್ಥಿತಿಯಲ್ಲಿತ್ತು. ಆದರೆ ಕೊನೆಯ 2 ಓವರ್‌ಗಳಲ್ಲಿ ಮ್ಯಾಜಿಕ್ ಮಾಡಿದ ಜೈದೇವ್ ಉನಾದ್ಕತ್ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು. ಉನಾದ್ಕತ್ ತಮ್ಮ ಐದೂ ವಿಕೆಟ್‌ಗಳನ್ನು ಈ 2 ಓವರ್‌ಗಳಲ್ಲಿ ಬುಟ್ಟಿಗೆ ಹಾಕಿಕೊಂಡರು. ಅಂತಿಮ ಓವರಿನಲ್ಲಿ ಹ್ಯಾಟ್ರಿಕ್ ಸಾಧಿಸುವ ಮೂಲಕ ಅವರು ಪುಣೆಯ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.
ಅಂತಿಮ ಓವರಿನಲ್ಲಿ ಹೈದರಾಬಾದ್ ಜಯಕ್ಕೆ 13 ಓವರ್ ಅಗತ್ಯವಿತ್ತು; ಕೈಯಲ್ಲಿ 4 ವಿಕೆಟ್ ಇತ್ತು. ಆದರೆ ಉನಾದ್ಕತ್ ಈ ಓವರಿನಲ್ಲಿ ಒಂದೂ ರನ್ ನೀಡದೆ ಹ್ಯಾಟ್ರಿಕ್ ವಿಕೆಟ್ ಹಾರಿಸಿ ಹೈದರಾಬಾದಿಗೆ ತವರಿನಂಗಳದಲ್ಲೇ ಸೋಲುಣಿಸಿದರು. 2, 3 ಹಾಗೂ 4ನೇ ಎಸೆತಗಳಲ್ಲಿ ಅವರು ಬಿಪುಲ್ ಶರ್ಮ, ರಶೀದ್ ಖಾನ್ ಮತ್ತು ಭುವನೇಶ್ವರ್ ಕುಮಾರ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದಕ್ಕೂ ಹಿಂದಿನ ಓವರಿನಲ್ಲಿ ಯುವರಾಜ್ ಸಿಂಗ್ ಮತ್ತು ನಮನ್ ಓಜಾ ಆಟಕ್ಕೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದ್ದರು.
ಇದು ಐಪಿಎಲ್‌ನ 17ನೇ ಹಾಗೂ ಪುಣೆಯ ಮೊದಲ ಹ್ಯಾಟ್ರಿಕ್ ಸಾಧನೆಯಾಗಿದೆ. ಇದರೊಂದಿಗೆ ಉನಾದ್ಕತ್ ಐಪಿಎಲ್‌ನಲ್ಲಿ 100 ವಿಕೆಟ್ ಉರುಳಿಸಿದ ಸಾಧನೆಯನ್ನೂ ಮಾಡಿದರು. ಉನಾದ್ಕತ್ ಐಪಿಎಲ್‌ನಲ್ಲಿ ಮೇಡನ್ ಓವರ್ ಸಹಿತ ಹ್ಯಾಟ್ರಿಕ್ ಸಾಹಸಗೈದ 3ನೇ ಬೌಲರ್. ಉಳಿದಿಬ್ಬರೆಂದರೆ ಮಾಲಿಂಗ ಮತ್ತು ಬದ್ರಿ.
ಹೈದರಾಬಾದ್ ಪರ ಯುವರಾಜ್ ಸರ್ವಾಧಿಕ 47 ರನ್ (43 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ವಾರ್ನರ್ 40 ರನ್ (34 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದರು.
ಪುಣೆ ಸಾಧಾರಣ ಮೊತ್ತ
ಪುಣೆಯನ್ನು ಮೊದಲು ಬ್ಯಾಟಿಂಗಿಗೆ ಇಳಿಸಿದ ಹೈದರಾಬಾದ್, ಈ ನಿರ್ಧಾರದಲ್ಲಿ ಉತ್ತಮ ಯಶಸ್ಸನ್ನೇ ಕಂಡಿತು. ತಂಡದ ಹೀರೋ, ಭರವಸೆಯ ಆರಂಭಕಾರ ರಾಹುಲ್ ತ್ರಿಪಾಠಿ 2ನೇ ಓವರಿನಲ್ಲೇ ಒಂದು ರನ್ನಿಗೆ ರನೌಟಾದುದರಿಂದ ಪುಣೆಯ ರನ್‌ಗತಿ ಕುಂಟಿತಗೊಂಡಿತು. ಕೆಕೆಆರ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ತ್ರಿಪಾಠಿ ಏಕಾಂಗಿಯಾಗಿ ಹೋರಾಡಿ (93) ಪುಣೆ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು.
ಅನುಭವಿ ಬೌಲರ್ ಆಶಿಷ್ ನೆಹ್ರಾ ತನ್ನ ದ್ವಿತೀಯ ಓವರ್ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿ ದಾಳಿಯಿಂದ ಹಿಂದೆ ಸರಿದರೂ ಸನ್‌ರೈಸರ್ ದಾಳಿಗೆ ಯಾವುದೇ ಹಿನ್ನಡೆಯಾಗಲಿಲ್ಲ. ಪಠಾನ್‌ಕೋಟ್‌ನ ಮಧ್ಯಮ ವೇಗಿ ಸಿದ್ಧಾರ್ಥ್ ಕೌಲ್ ಜಬರ್ದಸ್ತ್ ದಾಳಿ ಸಂಘಟಿಸಿ ಪುಣೆಯನ್ನು ತಡೆದು ನಿಲ್ಲಿಸಿದರು. ಕೌಲ್ ಸಾಧನೆ 29ಕ್ಕೆ 4 ವಿಕೆಟ್. ಅವರು ಟಿ-ಟ್ವೆಂಟಿಯಲ್ಲಿ 4 ವಿಕೆಟ್ ಹಾರಿಸಿದ್ದು ಇದು ಎರಡನೇ ಸಲ. ಅಫ್ಘಾನಿಸ್ಥಾನದ ಸ್ಪಿನ್ನರ್ ರಶೀದ್ ಖಾನ್ ಎಂದಿನ ನಿಯಂತ್ರಣ ಸಾಧಿಸಲುವಲ್ಲಿ ಯಶಸ್ವಿಯಾದರು. ರಶೀದ್ ಒಂದೇ ವಿಕೆಟ್ ಕಿತ್ತರೂ 4 ಓವರ್‌ಗಳಲ್ಲಿ ನೀಡಿದ್ದು 18 ರನ್ ಮಾತ್ರ. ಮತ್ತೂಂದು ವಿಕೆಟ್ ಬಿಪುಲ್ ಶರ್ಮ ಪಾಲಾಯಿತು. ಇಬ್ಬರು ರನೌಟಾದರು.
ಪುಣೆ ಬ್ಯಾಟಿಂಗ್ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ದಾಖಲಾಗಲಿಲ್ಲ. 39 ರನ್ ಹೊಡೆದ ಬೆನ್ ಸ್ಟೋಕ್ಸ್ ಅವರದೇ ಗರಿಷ್ಠ ಗಳಿಕೆ. 4ನೇ ಕ್ರಮಾಂಕದಲ್ಲಿ ಆಡಲಿಳಿದು ಮುನ್ನುಗ್ಗಿ ಬಾರಿಸತೊಡಗಿದ ಸ್ಟೋಕ್ಸ್ 25 ಎಸೆತ ಎದುರಿಸಿದರು; 3 ಸಿಕ್ಸರ್ ಹಾಗೂ ಒಂದು ಬೌಂಡರಿ ಚಚ್ಚಿದರು. ನಾಯಕ ಸ್ಟೀವನ್ ಸ್ಮಿತ್ 34 ರನ್ ಮಾಡಿದರೂ ಅವರ ಆಟ ಅತ್ಯಂತ ನೀರಸವಾಗಿತ್ತು. 39 ಎಸೆತಗಳ ಈ ಆಟದಲ್ಲಿ ಒಂದೂ ಬೌಂಡರಿ ಹೊಡೆತವಿರಲಿಲ್ಲ. ಸ್ಮಿತ್-ಸ್ಟೋಕ್ಸ್ 3ನೇ ವಿಕೆಟಿಗೆ 60 ರನ್ ಒಟ್ಟುಗೂಡಿಸಿದರು. ಇದು ಪುಣೆ ಸರದಿಯ ದೊಡ್ಡ ಜತೆಯಾಟ.
ಮಾಜಿ ನಾಯಕ ಧೋನಿ ಆಟ ರಂಜನೀಯವಾಗಿತ್ತು. 21 ಎಸೆತ ಎದುರಿಸಿದ ಅವರು 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 31 ರನ್ ಹೊಡೆದರು. ಅಜಿಂಕ್ಯ ರಹಾನೆ ಆಟ 22 ರನ್ನಿಗೆ ಕೊನೆಗೊಂಡಿತು.
ಸ್ಕೋರ್ ಪಟ್ಟಿ
ರೈಸಿಂಗ್ ಪುಣೆ ಸೂಪರ್‌ಜೈಂಟ್
ಅಜಿಂಕ್ಯ ರಹಾನೆ ಸಿ ಯುವರಾಜ್ ಬಿ ಬಿಪುಲ್ 22
ರಾಹುಲ್ ತ್ರಿಪಾಠಿ ರನೌಟ್ 1
ಸ್ಟೀವನ್ ಸ್ಮಿತ್ ಸಿ ಬಿಪುಲ್ ಬಿ ಕೌಲ್ 34
ಬೆನ್ ಸ್ಟೋಕ್ಸ್ ಬಿ ರಶೀದ್ 39
ಎಂ.ಎಸ್. ಧೋನಿ ಸಿ ಓಜಾ ಬಿ ಕೌಲ್ 31
ಡೇನಿಯಲ್ ಕ್ರಿಸ್ಟಿಯನ್ ಸಿ ರಶೀದ್ ಬಿ ಕೌಲ್ 4
ಮನೋಜ್ ತಿವಾರಿ ರನೌಟ್ 9
ವಾಷಿಂಗ್ಟನ್ ಸುಂದರ್ ಔಟಾಗದೆ 1
ಶಾದೂìಲ್ ಠಾಕೂರ್ ಸಿ ವಾರ್ನರ್ ಬಿ ಕೌಲ್ 0
ಜೈದೇವ್ ಉನಾದ್ಕತ್ ಔಟಾಗದೆ 0
ಇತರ 7
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 148
ವಿಕೆಟ್ ಪತನ: 1-6, 2-39, 3-99, 4-101, 5-105, 6-142, 7-147, 8-147.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-39-0
ಆಶಿಷ್ ನೆಹ್ರಾ 1.1-0-5-0
ಸಿದ್ಧಾರ್ಥ್ ಕೌಲ್ 4-0-29-4
ರಶೀದ್ ಖಾನ್ 4-0-18-1
ಮೊಸಸ್ ಹೆನ್ರಿಕ್ಸ್ 2.5-0-15-0
ಬಿಪುಲ್ ಶರ್ಮ 4-0-39-1
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಠಾಕೂರ್ ಬಿ ಸ್ಟೋಕ್ಸ್ 40
ಶಿಖರ್ ಧವನ್ ಬಿ ಸೊÕàಕ್ಸ್ 19
ಕೇನ್ ವಿಲಿಯಮ್ಸನ್ ಸಿ ಧೋನಿ ಬಿ ಸ್ಟೋಕ್ಸ್ 4
ಯುವರಾಜ್ ಸಿಂಗ್ ಸಿ ತ್ರಿಪಾಠಿ ಬಿ ಉನಾದ್ಕತ್ 47
ಮೊಸಸ್ ಹೆನ್ರಿಕ್ಸ್ ಬಿ ತಾಹಿರ್ 4
ನಮನ್ ಓಜಾ ಸಿ ಸ್ಟೋಕ್ಸ್ ಬಿ ಉನಾದ್ಕತ್ 9
ಬಿಪುಲ್ ಶರ್ಮ ಸಿ ಸ್ಟೋಕ್ಸ್ ಬಿ ಉನಾದ್ಕತ್ 8
ರಶೀದ್ ಖಾನ್ ಸಿ ಮತ್ತು ಬಿ ಉನಾದ್ಕತ್ 3
ಭುವನೇಶ್ವರ್ ಕುಮಾರ್ ಸಿ ತಿವಾರಿ ಬಿ ಉನಾದ್ಕತ್ 0
ಸಿದ್ಧಾರ್ಥ್ ಕೌಲ್ ಔಟಾಗದೆ 0
ಆಶಿಷ್ ನೆಹ್ರಾ ಔಟಾಗದೆ 0
ಇತರ 2
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 136
ವಿಕೆಟ್ ಪತನ: 1-25, 2-29, 3-83, 4-96, 5-117, 6-127, 7-136, 8-136, 9-136.
ಬೌಲಿಂಗ್:
ಜೈದೇವ್ ಉನಾದ್ಕತ್ 4-1-30-5
ವಾಷಿಂಗ್ಟನ್ ಸುಂದರ್ 3-0-19-0
ಬೆನ್ ಸ್ಟೋಕ್ಸ್ 4-0-30-3
ಇಮ್ರಾನ್ ತಾಹಿರ್ 4-0-24-1
ಶಾದೂìಲ್ ಠಾಕೂರ್ 2-0-12-0
ಡೇನಿಯಲ್ ಕ್ರಿಸ್ಟಿಯನ್ 3-0-21-0
ಪಂದ್ಯಶ್ರೇಷ್ಠ: ಜೈದೇವ್ ಉನಾದ್ಕತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.