IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ


Team Udayavani, May 2, 2024, 11:29 PM IST

1——asdsad

Sunrisers Hyderabad, Rajasthan Royals, 50th Match,

ಹೈದರಾಬಾದ್‌: ಗುರುವಾರದ ರೋಚಕ ಮುಖಾಮುಖಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 1 ರನ್ ಜಯ ಸಾಧಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಧಾನ ಗತಿಯ ಆರಂಭದ ಬಳಿಕ ಬಿರುಸಿನ ಆಟಕ್ಕಿಳಿದು 3 ವಿಕೆಟಿಗೆ 201 ರನ್‌ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಕೊನೆಯ ಎಸೆತದ ವರೆಗೂ ಹೋರಾಟ ನಡೆಸಿತು.7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲು ಅನುಭವಿಸಿತು. ಕೊನೆಯಲ್ಲಿ ಅಶ್ವಿನ್ ಮತ್ತು ಪೊವೆಲ್ ಹೋರಾಡಿದರೂ ಗೆಲುವು ಸಾಧ್ಯವಾಗಲಿಲ್ಲ.

ಜೈಸ್ವಾಲ್ 67, ರಿಯಾನ್ ಪರಾಗ್ 77 ರನ್ ಗಳಿಸಿ ಉತ್ತಮ ಹೋರಾಟ ನೀಡಿದರು. ಹೆಟ್ಮೇಯರ್ 13, ಪೊವೆಲ್ 27 ರನ್ ಗಳಿಸಿ ಔಟಾದರು. ಬಟ್ಲರ್, ಸಂಜು ಸ್ಯಾಮ್ಸನ್ ಶೂನ್ಯಕ್ಕೆ ನಿರ್ಗಮಿಸಿದರು.

ಕೊನೆಯ 12 ಎಸೆತಗಳಲ್ಲಿ 20 ರನ್ ಅಗತ್ಯವಿತ್ತು. ಕಮಿನ್ಸ್ ಎಸೆದ ಓವರ್ ನಲ್ಲಿ 7 ರನ್ ಬಿಟ್ಟು ಕೊಟ್ಟರು. ಕೊನೆಯ ಓವರ್ ನಲ್ಲಿ 11 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಭುವನೇಶ್ವರ್ ಕುಮಾರ್ ಅವರು ಕೊನೆಯ ಎಸೆತದಲ್ಲಿ ಪೊವೆಲ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಗೆಲುವು ತಂದುಕೊಟ್ಟರು. ಭುವನೇಶ್ವರ್ ಕುಮಾರ್ ಪ್ರಮುಖ 3 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ನಿತೀಶ್‌ ಭರ್ಜರಿ ಆಟ
ನಿತೀಶ್‌ ಕುಮಾರ್‌ ರೆಡ್ಡಿ, ಟ್ರ್ಯಾವಿಸ್‌ ಹೆಡ್‌ ಮತ್ತು ಹೆನ್ರಿಚ್‌ ಕ್ಲಾಸೆನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವಿತ್ತರು.ಟಾಸ್‌ ಗೆದ್ದ ಹೈದರಾಬಾದ್‌ ಬ್ಯಾಟಿಂಗ್‌ ಆಯ್ದುಕೊಂಡಾಗ ದೊಡ್ಡ ಮೊತ್ತದ ನಿರೀಕ್ಷೆ ಮೂಡಿತ್ತು. ಆದರೆ ರಾಜಸ್ಥಾನ್‌ ತಂಡದ ಕರಾರುವಾಕ್‌ ಬೌಲಿಂಗ್‌ ದಾಳಿಗೆ ಹೈದರಾಬಾದ್‌ ಕುಂಟುತ್ತ ಸಾಗಿತು. ಬಿಗ್‌ ಹಿಟ್ಟರ್‌ ಟ್ರ್ಯಾವಿಸ್‌ ಹೆಡ್‌ ಕ್ರೀಸ್‌ನಲ್ಲಿದ್ದೂ ಈ ಸೀಸನ್‌ನ ಪವರ್‌ ಪ್ಲೇಯಲ್ಲಿ ಎಸ್‌ಆರ್‌ಎಚ್‌ ತನ್ನ ಕನಿಷ್ಠ ರನ್‌ ದಾಖಲಿಸಿತು (2ಕ್ಕೆ 37). ಸಂದೀಪ್‌ ಶರ್ಮ ತಮ್ಮ ಪವರ್‌ ಪ್ಲೇ ವಿಕೆಟ್‌ ಗಳಿಕೆಯನ್ನು 60ಕ್ಕೆ ಏರಿಸಿಕೊಂಡರು. ಈ ಯಾದಿಯಲ್ಲಿ ಅವರಿಗೆ 2ನೇ ಸ್ಥಾನ. 68 ವಿಕೆಟ್‌ ಉರುಳಿಸಿದ ಭುವನೇಶ್ವರ್‌ ಕುಮಾರ್‌ ಅಗ್ರಸ್ಥಾನದಲ್ಲಿದ್ದಾರೆ.

ಅಭಿಷೇಕ್‌ ಶರ್ಮ (12) ಮತ್ತು ಅನ್ಮ್ಮೊ ಲ್‌ಪ್ರೀತ್‌ ಸಿಂಗ್‌ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ಹೈದರಾಬಾದ್‌ ಒತ್ತಡಕ್ಕೆ ಸಿಲುಕಿತು.
ಒಂದು ಹಂತದಲ್ಲಿ ಎಸೆತಕ್ಕೊಂದರಂತೆ 25 ರನ್‌ ಮಾಡಿದ್ದ ಹೆಡ್‌, 9ನೇ ಓವರ್‌ ಬಳಿಕ ಸಿಡಿಯಲಾರಂಭಿಸಿದರು. ಚಹಲ್‌ ಪಾಲಾದ ಈ ಓವರ್‌ನಲ್ಲಿ ಸತತ 2 ಸಿಕ್ಸರ್‌, ಒಂದು ಬೌಂಡರಿ ಬಾರಿಸಿದರು. 10 ಓವರ್‌ ಅಂತ್ಯಕ್ಕೆ ಸ್ಕೋರ್‌ 75ಕ್ಕೆ ಏರಿತು. ಹೆಡ್‌ ಮತ್ತು ನಿತೀಶ್‌ ರೆಡ್ಡಿ ಸೇರಿಕೊಂಡು ಹೈದರಾಬಾದ್‌ ಇನ್ನಿಂಗ್ಸ್‌ ಬೆಳೆಸತೊಡಗಿದರು. ಬಳಿಕ ಹೆನ್ರಿಸ್‌ ಕ್ಲಾಸೆನ್‌ ಸಿಡಿದು ನಿಂತರು. ಕೊನೆಯ 10 ಓವರ್‌ಗಳಲ್ಲಿ ಹೈದರಾಬಾದ್‌ ಒಂದೇ ವಿಕೆಟಿಗೆ 125 ರನ್‌ ಬಾರಿಸುವ ಮೂಲಕ ತಿರುಗಿ ಬಿತ್ತು. ಹೆಡ್‌-ರೆಡ್ಡಿ 3ನೇ ವಿಕೆಟಿಗೆ 96 ರನ್‌, ರೆಡ್ಡಿ-ಕ್ಲಾಸೆನ್‌ ಮುರಿಯದ 4ನೇ ವಿಕೆಟಿಗೆ 66 ರನ್‌ ಪೇರಿಸಿದರು.

ನಿತೀಶ್‌ ರೆಡ್ಡಿ 42 ಎಸೆತಗಳಿಂದ ಅಜೇಯ 76 ರನ್‌ ಬಾರಿಸಿದರು. ಸಿಡಿಸಿದ್ದು 3 ಬೌಂಡರಿ ಮತ್ತು 8 ಸಿಕ್ಸರ್‌. ಇದರೊಂದಿಗೆ ರೆಡ್ಡಿ ಹೈದರಾಬಾದ್‌ ಇನ್ನಿಂಗ್ಸ್‌ನಲ್ಲಿ ಬರಿಷ್ಠ 8 ಸಿಕ್ಸರ್‌ ಬಾರಿಸಿದ 5ನೇ ಆಟಗಾರನೆನಿಸಿದರು. ವಾರ್ನರ್‌, ಮನೀಷ್‌ ಪಾಂಡೆ, ಹೆಡ್‌ ಮತ್ತು ಕ್ಲಾಸೆನ್‌ ಉಳಿದವರು. ಹೆಡ್‌ 44 ಎಸೆತ ಎದುರಿಸಿ 58 ರನ್‌ ಬಾರಿಸಿದರು (6 ಫೋರ್‌, 3 ಸಿಕ್ಸರ್‌). ಕ್ಲಾಸೆನ್‌ 19 ಎಸೆತಗಳಿಂದ ಅಜೇಯ 42 ರನ್‌ ಮಾಡಿದರು (3 ಬೌಂಡರಿ, 3 ಸಿಕ್ಸರ್‌).

ಟಾಪ್ ನ್ಯೂಸ್

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.