Super 8 ; ಅಫ್ಘಾನ್ ಅದೃಷ್ಟ ಬಲ್ಲವರಾರು?: ಬಾಂಗ್ಲಾದೇಶಕ್ಕೂ ಇದೆ ಅವಕಾಶ!
Team Udayavani, Jun 25, 2024, 12:24 AM IST
ಕಿಂಗ್‌ಸ್ಟನ್: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನ ಕನಸಿನ ಓಟ ಬೆಳೆಸಿದೆ. ಭಾರತದ ಬಳಿಕ ಏಷ್ಯಾದ 2ನೇ ಪ್ರಬಲ ತಂಡವಾಗಿ ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ. ಆದರೆ ರಶೀದ್ ಖಾನ್ ಪಡೆಯ ಅದೃಷ್ಟ ಹೇಗಿದೆ ಎಂಬುದನ್ನು ಅರಿಯಲು ಮಂಗಳವಾರ ಬೆಳಗಿನ ಕೊನೆಯ ಲೀಗ್ ಪಂದ್ಯದ ವರೆಗೆ ಕಾಯಬೇಕಾಗಿದೆ. ಭಾರತದ ವಿರುದ್ಧ ಆಸ್ಟ್ರೇಲಿಯ ಸೋತಿರುವುದರಿಂದ ಈ ಪಂದ್ಯ ಮೂರು ತಂಡಗಳಿಗೆ ನಿರ್ಣಾಯಕವಾಗಲಿದೆ.
ಶನಿವಾರದ ಸೂಪರ್-8 ಸುತ್ತಿನ ಪಂದ್ಯದಲ್ಲಿ ಪ್ರಬಲ ಹಾಗೂ ನೆಚ್ಚಿನ ಆಸ್ಟ್ರೇಲಿಯವನ್ನು ದಿಂಡುರುಳಿಸುವ ಮೂಲಕ ಅಫ್ಘಾನಿಸ್ಥಾನಕ್ಕೆ ಪ್ರಪ್ರಥಮ ವಿಶ್ವಕಪ್ ಸೆಮಿಫೈನಲ್ ಹಾದಿಯೊಂದು ತೆರೆದುಕೊಂಡಿತ್ತು. ಆಸ್ಟ್ರೇಲಿಯವನ್ನು ಮಣಿಸಿದ ಅಂಗಳದಲ್ಲೇ ಅಫ್ಘಾನ್ ಪಡೆ ಬಾಂಗ್ಲಾವನ್ನು ಎದುರಿಸಲಿದೆ. ಇದು ನಿಧಾನ ಗತಿಯ ಬೌಲರ್‌ಗಳಿಗೆ ನೆರವು ನೀಡುವ ಟ್ರ್ಯಾಕ್. ಕಾಂಗರೂಗಳನ್ನು ಉರುಳಿಸುವಲ್ಲಿ ಗುಲ್ಬದಿನ್ ನೈಬ್, ನವೀನ್ ಉಲ್ ಹಕ್ ಪಾತ್ರ ಮಹತ್ವದ್ದಾಗಿತ್ತು. ಜತೆಗೆ ವಿಶ್ವ ದರ್ಜೆಯ ಸ್ಪಿನ್ನರ್ ರಶೀದ್, ಮೊಹಮ್ಮದ್ ನಬಿ, ಫಜಲ್ ಹಕ್ ಫಾರೂಖಿ ಕೂಡ ಅಪಾಯಕಾರಿಗಳು.ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ಅಜ್ಮತುಲ್ಲ ಒಮರ್‌ಜಾಯ್, ಕರೀಂ ಜನ್ನತ್ ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಕೂಡ ಬಲಿಷ್ಠ.
ಬಾಂಗ್ಲಾದೇಶಕ್ಕೂ ಇದೆ ಅವಕಾಶ !
ಆಸಕ್ತಿದಾಯಕ ಅರ್ಹತಾ ಸನ್ನಿವೇಶ ನಿರ್ಮಾಣವಾಗಿದ್ದು ಬಾಂಗ್ಲಾದೇಶ 61 ಕ್ಕಿಂತ ಹೆಚ್ಚು ರನ್‌ಗಳಿಂದ ಗೆದ್ದರೆ ಅಥವಾ 13 ಓವರ್‌ಗಳಲ್ಲಿ ಚೇಸ್ ಮಾಡಿದರೆ ಸೆಮಿ ಅರ್ಹತೆ ಪಡೆಯುತ್ತದೆ.ಬಾಂಗ್ಲಾದೇಶ 61 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯ ಸೆಮಿ ಫೈನಲ್ ಪ್ರವೇಶಿಸುತ್ತದೆ. ಬಾಂಗ್ಲಾದೇಶವನ್ನು ಸೋಲಿಸಿದರೆ ಅಫ್ಘಾನಿಸ್ಥಾನ ಅರ್ಹತೆ ಪಡೆಯುತ್ತದೆ. ಆಸೀಸ್ ಮತ್ತು ಅಫ್ಘಾನ್ ತಲಾ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದು ಬಾಂಗ್ಲಾ ಅದ್ಭುತ ಸಾಹಸ ಮಾಡಿದರೆ ಅದಕ್ಕೂ ಒಂದು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.