ಧೋನಿ ಹಾದಿ ತುಳಿದ ರೈನಾ
Team Udayavani, Aug 15, 2020, 11:01 PM IST
ಚೆನ್ನೈ: ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಎಡಗೈ ಆಟಗಾರ, ಅದ್ಭುತ ಫೀಲ್ಡರ್, ಇದಕ್ಕೂ ಮಿಗಿಲಾಗಿ ಧೋನಿ ಅವರ ಅಚ್ಚುಮೆಚ್ಚಿನ ಗೆಳೆಯ ಸುರೇಶ್ ರೈನಾ ಕೂಡ ಶನಿವಾರ ತಮ್ಮ ಅಂತಾರಾಷ್ಟ್ರೀಯ ಬದುಕಿಗೆ ಗುಡ್‌ಬೈ ಹೇಳಿದರು. ಅವರು ತಮ್ಮ ವಿದಾಯವನ್ನು ಧೋನಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. “ನಿಮ್ಮ ಜತೆಗೂಡಿ ಆಡಿದ ಆಟ ಬಹಳ ಪ್ರೀತಿಯ ಸಂಗತಿಯಾಗಿತ್ತು. ನಿಮ್ಮ ಜತೆಗಿನ ಈ ಪ್ರಯಾಣದಲ್ಲಿ ನಾನಿದ್ದೇನೆಂಬುದನ್ನು ಹೃದಯ ತುಂಬಿ ಹೇಳುತ್ತಿದ್ದೇನೆ. ಥ್ಯಾಂಕ್ಯೂ ಇಂಡಿಯಾ, ಜೈ ಹಿಂದ್…’ ಎಂದು ಸುರೇಶ್ ರೈನಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿವೃತ್ತಿಯನ್ನು ಘೋಷಿ ಸಿದರು.
ಅಪರೂಪದ ಸಾಧಕ
ಮೂರೂ ಮಾದರಿಯ ಕ್ರಿಕೆಟ್‌ಗಳಲ್ಲಿ ಸೆಂಚುರಿ ಬಾರಿಸಿದ ಭಾರತದ ಏಕೈಕ ಆಟಗಾರನಾಗಿರುವ ಸುರೇಶ್ ರೈನಾ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹತ್ತಿರ ಹತ್ತಿರ ಎಂಟು ಸಾವಿರದಷ್ಟು ಅಂತಾರಾಷ್ಟ್ರೀಯ ರನ್ ಪೇರಿಸಿ ದ್ದಾರೆ. ಐಪಿಎಲ್‌ನಲ್ಲಿ ದ್ವಿತೀಯ ಸರ್ವಾಧಿಕ ರನ್ ಬಾರಿಸಿದ ದಾಖ ಲೆಗೆ ರೈನಾ ಪಾತ್ರರು. 33.34ರ ಸರಾಸರಿಯಲ್ಲಿ, ಒಂದು ಶತಕ ಹಾಗೂ 38 ಅರ್ಧ ಶತಕಗಳೊಂದಿಗೆ 5,368 ರನ್ ರಾಶಿ ಹಾಕಿದ್ದಾರೆ.
2011ರ ವಿಶ್ವಕಪ್ ಗೆಲುವಿನಲ್ಲಿ ಸುರೇಶ್ ರೈನಾ ವಹಿಸಿದ ಪಾತ್ರವನ್ನು ಮರೆಯುವಂತಿಲ್ಲ. ಆಸ್ಟ್ರೇಲಿಯ ಎದುರಿನ ಕ್ವಾರ್ಟರ್ ಫೈನಲ್ ಮುಖಾಮುಖೀಯಲ್ಲಿ ಮಿಂಚಿನ ಆಟದ ಮೂಲಕ ರೈನಾ ಗೆಲುವಿನ ರೂವಾರಿಯಾಗಿದ್ದರು. 2005ರಲ್ಲಿ ಲಂಕಾ ಪರ ಏಕದಿನ ಪದಾರ್ಪಣೆ ಮಾಡುವಾಗ ರೈನಾಗೆ 19 ವರ್ಷ. ಆದರೆ ಟೆಸ್ಟ್ ಆಡಲು 5 ವರ್ಷ ಕಾಯಬೇಕಾಯಿತು. ಟೆಸ್ಟ್‌ನಲ್ಲಿ ರೈನಾ ಗಳಿಸಿದ್ದು 768 ರನ್.ಏಕದಿನದಲ್ಲಿ 5,615 ರನ್ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.