ಬ್ರಾಹ್ಮಣನಾದ ಕಾರಣ ಚೆನ್ನೈ ಸಂಸ್ಕೃತಿ ಅರಿತೆ ಎಂದ ಸುರೇಶ್ ರೈನಾ ವಿರುದ್ಧ ನೆಟ್ಟಿಗರು ಗರಂ
Team Udayavani, Jul 22, 2021, 3:26 PM IST
ಚೆನ್ನೈ: ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಇದೀಗ ಹೊಸ ವಿವಾದವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕಮೆಂಟರಿ ಮಾಡುವ ವೇಳೆ ಹೇಳಿದ ಒಂದು ಮಾತಿನಿಂದ ರೈನಾ ಇಕ್ಕಟ್ಟಿಗೆ ಸಿಲುಕಿದ್ದಾರೆ.
ತಮಿಳುನಾಡು ಪ್ರೀಮಿಯರ್ ಲೀಗ್ ಕೂಟದಲ್ಲಿ ಸುರೇಶ್ ರೈನಾ ವೀಕ್ಷಕ ವಿವರಣೆ ನೀಡುತ್ತಿದ್ದರು. ಈ ವೇಳೆ ತಮಿಳುನಾಡಿನ ಸಂಸ್ಕೃತಿಯನ್ನು ನೀವು ಹೇಗೆ ಅಳವಡಿಸಿಕೊಂಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ರೈನಾ, 2004ರಿಂದಲೂ ನಾನು ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನೊಬ್ಬ ಬ್ರಾಹ್ಮಣನಾದ ಕಾರಣ ಇಲ್ಲಿನ ಸಂಸ್ಕೃತಿಯನ್ನು ಬೇಗನೇ ಅರಿಯಲು ಸಾಧ್ಯವಾಗಿದೆ ಎಂದು ರೈನಾ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಮತ್ತಿಬ್ಬರು ಕ್ರೀಡಾಪಟುಗಳಲ್ಲಿ ಕೋವಿಡ್ ಪತ್ತೆ
ರೈನಾ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆ ಎದುರಾಗಿದೆ. ಹಲವರಂತೂ ರೈನಾ ಹೇಳಿಕೆಗೆ ಕಿಡಿಕಾರಿದ್ದಾರೆ.
@ImRaina you should be ashamed yourself.
It seems that you have never experienced real Chennai culture though you have been playing many years for Chennai team. https://t.co/ZICLRr0ZLh
— Suresh (@suresh010690) July 19, 2021
So watched the video, I once liked Raina very much and now im sad how ignorant or he has been hiding all these days. Lost it! No more respect
— vijay renganathan (@MarineRenga) July 20, 2021
ಸುರೇಶ್ ರೈನಾ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಾರೆ. ಉತ್ತರ ಪ್ರದೇಶದ ಸುರೇಶ್ ರೈನಾಗೆ ಚೆನ್ನೈನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಚೆನ್ನೈ ಅಭಿಮಾನಿಗಳು ರೈನಾರನ್ನು ಪ್ರೀತಿಯಿಂದ ಚಿನ್ನ ಥಲಾ ಎಂದೇ ಕರೆಯುತ್ತಾರೆ.
What the heck @ImRaina sir.. you shouldn’t use that word ….. https://t.co/v8AD1Cp0fT pic.twitter.com/TltPoMbYec
— udayyyyyy ??????????️ (@uday0035) July 19, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.